ಮೇ 16ರ ವರೆಗೆ ಕರ್ನಾಟಕಕ್ಕೆ 2.62 ಲಕ್ಷ ರೆಮ್ಡೆಸಿವಿರ್ ಇಂಜೆಕ್ಷನ್

ನವ ದೆಹಲಿ: ಕೊರೊನಾ ಸೋಂಕಿತರ ಅಗತ್ಯದ ರೆಮ್ಡೆಸಿವಿರ್ ಮರು ಹಂಚಿಕೆ ಮಾಡಿರುವ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಮೇ 1ರಿಂದ 16ರ ವರೆಗೆ 2.62 ಲಕ್ಷ ಇಂಜೆಕ್ಷನ್ ಗಳನ್ನು ಪೂರೈಕೆ ಮಾಡಲಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ, ಕರ್ನಾಟಕದ ರೆಮ್ಡೆಸಿವಿರ್ ಹಂಚಿಕೆಯನ್ನು ಮೇ 1ರಿಂದ ಮೇ 16ರವರೆಗೆ 2,62,346ಕ್ಕೆ ಹೆಚ್ಚಿಸಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ, ರಾಜ್ಯದ ಮನವಿಗೆ ಸ್ಪಂದಿಸಿದೆ. ಅಗತ್ಯ ಔಷಧ ಪೂರೈಸುತ್ತಿರುವ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ.
ಮೇ 1ರಂದು ರೆಮ್ಡೆಸಿವಿರ್ ಔಷಧಿಯನ್ನು ಮರು ಹಂಚಿಕೆ ಮಾಡಿದ್ದ ಕೇಂದ್ರ ಸರ್ಕಾರ ಮೇ 9ರ ವರೆಗೆ ಕರ್ನಾಟಕಕ್ಕೆ 3,01,300 ಇಂಜೆಕ್ಷನ್ ಗಳನ್ನು ಪೂರೈಸುವ ಭರವಸೆ ನೀಡಿತ್ತು. ಇದಕ್ಕೂ ಮೊದಲು ಏಪ್ರಿಲ್ 24ರಂದು ತಿಂಗಳಾಂತ್ಯದವರೆಗೂ 1.22 ಲಕ್ಷ ಇಂಜೆಕ್ಷನ್ ಗಳನ್ನು ಮಂಜೂರು ಮಾಡಿತ್ತು.
ಏಪ್ರಿಲ್ 21ರಿಂದ ಮೇ 9ರವರೆಗೆ ಒಟ್ಟು 3,01,300 ಇಂಜಕ್ಷನ್ ಗಳನ್ನು ಪೂರೈಸುವ ವಾಗ್ದಾನ ಮಾಡಲಾಗಿತ್ತು. ಐದು ಕಂಪೆನಿಗಳು ಉತ್ಪಾದಿಸುವ ರೆಮ್ಡೆಸಿವಿರ್ ಅನ್ನು ಮೇ 2ರ ವರೆಗೆ ಒಟ್ಟು 1,39,300 ಇಂಜೆಕ್ಷನ್ ಗಳನ್ನು ಪೂರೈಸಲಾಗಿದೆ.

ಪ್ರಮುಖ ಸುದ್ದಿ :-   ವಿಡಿಯೊಗಳು | ಶಿವಮೊಗ್ಗ ದಸರಾ ಜಂಬೂ ಸವಾರಿ ವೇಳೆ ದಿಕ್ಕಾಪಾಲಾಗಿ ಓಡಿದ ಅಂಬಾರಿ ಹೊತ್ತ ಆನೆ ; ಬೆಳ್ಳಿ ಅಂಬಾರಿ ಕೆಳಕ್ಕೆ, ವಾಹನ ಜಖಂ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement