ಹುಬ್ಬಳ್ಳಿ: ಸ್ವಯಂಪ್ರೇರಿತ ಬೃಹತ್ ಕೋವಿಡ್ ಪ್ಲಾಸ್ಮಾ ದಾನ ಶಿಬಿರವನ್ನು ಮೇ 9ರಂದು ಬೆಳಿಗ್ಗೆ 11 ಗಂಟೆಗೆ ನಗರದ ಕೇಶ್ವಾಪುರ ಸರ್ವೋದಯ ಸರ್ಕಲ್ ಎನ್.ಕೆ.ಸಭಾಗೃಹದಲ್ಲಿ ಆಯೋಜಿಸಲಾಗಿದೆ
ರಾಷ್ಟ್ರೋತ್ಥಾನ ರಕ್ತ ಕೇಂದ್ರ ಮತ್ತು ದಿವಾ ಫೌಂಡೇಶನ್, ಎಸ್ ಎಸ್ ಶೆಟ್ಟರ ಫೌಂಡೇಶನ್ , ಜೈನ ಇಂಟರ್ ನ್ಯಾಷನಲ್ ಟ್ರೇಡರ್ಸ್ ಅರ್ಗನೈಸೇಶನ್ , ಲಯನ್ಸ್ ಕ್ಲಬ್ ಇಂಡಿಯಾ , ರೌಂಡ್ ಟೇಬಲ್ ಇಂಡಿಯಾ , ಲೇಡೀಸ್ ಸರ್ಕಲ್ ಇಂಡಿಯಾ , ಕರ್ನಾಟಕ ಆಯುಷ್ ಡಿಲರ್ಸ್ , ಸೇವಾ ಭಾರತಿ ಟ್ರಸ್ಟ್ ಸಹಯೋಗದೊಂದಿಗೆ ಪ್ಲಾಸ್ಮಾ ದಾನ ಶಿಬಿರ ಆಯೋಜಿಸಲಾಗಿದೆ.
ಈ ಸಮಾಜಮುಖಿ ಕಾರ್ಯಕ್ರಮವನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯರಾದ ಸುಧಾಕರಜೀ ಉದ್ಘಾಟಿಸಲಿದ್ದಾರೆ.
ಮಾಹಿತಿಗೆ ದತ್ತಮೂರ್ತಿ ಕುಲಕರ್ಣಿ 9448380485 ಅವರನ್ನು ಸಂಪರ್ಕಿಸಲು ಕೋರಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ