ಬೆಂಗಳೂರಲ್ಲಿ 3 ಸಾವಿರಕ್ಕೂ ಹೆಚ್ಚು ವಾಹನ ಸೀಜ್‌ ಮಾಡಿದ ಪೊಲೀಸರು..!

ಬೆಂಗಳೂರು : ಕೊರೊನಾ ಕರ್ಪ್ಯೂ ಇದ್ದ ಹಿನ್ನೆಲೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ರಸ್ತೆಯಲ್ಲಿ ಬೇಕಾಬಿಟ್ಟಿ ಸಂಚರಿಸಿದ ವಾಹನವನ್ನು ಜಪ್ತಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಅನಗತ್ಯವಾಗಿ ರಸ್ತೆಗಿಳಿದವರ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ ಹಲವು ವಾಹನಗಳನ್ನು ಜಪ್ತಿ ಮಾಡಿದ್ದು, ಇದರಲ್ಲಿ 2723 ದ್ವಿಚಕ್ರ ವಾಹನಗಳು, 171 ಮೂರು ಚಕ್ರ ವಾಹನಗಳು, 106 ನಾಲ್ಕು ಚಕ್ರ ವಾಹನಗಳು ಸೇರಿದಂತೆ ಒಟ್ಟಾರೆ 3090 ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡು, ಪ್ರಕರಣ ದಾಖಲಿಸಿದ್ದಾರೆ.
ಸೋಮವಾರದಿಂದ ಲಾಕ್​ಡೌನ್​ ಜಾರಿಯಾಗಿವುದರಿಮದ ನಗರದಲ್ಲಿ ಶನಿವಾರ ಹೆಚ್ಚಿನ ವಾಹನ ಸಂಚಾರ ಕಂಡು ಬಂದಿದೆ. ವ್ಯಾಕ್ಸಿನ್​ ಪಡೆಯಲು ಜನ ಸಂಚರಿಸುತ್ತಿದ್ದಾರೆ. ಹೀಗಾಗಿ ವಾಹನ ಹಾಗೂ ಜನರ ಸಂದಣಿ ಜಾಸ್ತಿ ಇದೆ. ಆದರೆ ಕೆಲವರು ಸಣ್ಣ-ಪುಟ್ಟ ಕಾರಣಗಳಿಗೆ ಹೊರಗೆ ಬಂದಿದ್ದಾರೆ. ಲಾಕ್ ಡೌನ್ ಜಾರಿ ಮಾಡಿದ್ದು ಕೊರೊನಾ ಸರಪಳಿ ಮುರಿಯಬೇಕು ಎಂದು. ಕೆಲವರಿಗೆ ಅನಾನುಕೂಲ ಆಗಿದರೂ ಜನರು ಬೇಕಾಬಿಟ್ಟಿ ಹೊರಗೆ ಬರಬಾರದು ಹೊರಗೆ ಬಂದರೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ವಾಹನ ಸೀಜ್ ಮಾಡುತ್ತೇವೆ ಎಂದು ಕಮಿಷನರ್​ ಕಮಲ್​ ಪಂಥ್​ ಎಚ್ಚರಿಕೆ ನೀಡಿದ್ದಾರೆ.

ಪ್ರಮುಖ ಸುದ್ದಿ :-   ವಿಡಿಯೊಗಳು | ಶಿವಮೊಗ್ಗ ದಸರಾ ಜಂಬೂ ಸವಾರಿ ವೇಳೆ ದಿಕ್ಕಾಪಾಲಾಗಿ ಓಡಿದ ಅಂಬಾರಿ ಹೊತ್ತ ಆನೆ ; ಬೆಳ್ಳಿ ಅಂಬಾರಿ ಕೆಳಕ್ಕೆ, ವಾಹನ ಜಖಂ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement