126 ಕೆಜಿ ಹೆರಾಯಿನ್ ವಶ

ನವ ದೆಹಲಿ:ಆಫ್ಘಾನ್ ಮೂಲದ ದಂಪತಿಗಳ ಬಂಧಿಸಿರುವ ನಗರ ಪೊಲೀಸರು ದಾಖಲೆಯ ೧೨೬ ಕೆಜಿ ಹೆರಾಯಿನ್ ವಶ ಪಡೆದುಕೊಂಡಿದ್ದಾರೆ.
ದಂಪತಿಯು ವಶಕ್ಕೆ ಪಡೆದುಕೊಂಡಿರುವ ಹೆರಾಯಿನ್ ಬೆಲೆ ೮೬೦ ಕೋಟಿ ರೂ. ಮೌಲ್ಯದಾಗಿದೆ.
ಏಳು ಚೀಲಗಳಲ್ಲಿದ್ದ ಹೆರಾಯಿನ್ ವಶಕ್ಕೆ ಪಡೆದುಕೊಳ್ಳಲಾಗಿದ್ದು, ಅದನ್ನ ಸಾಗಿಸಲು ಬಳಕೆ ಮಾಡಲಾಗಿದ್ದ ಕಾರು ಜಪ್ತಿ ಮಾಡಿದ್ದಾರೆ. ಬಂಧನಕ್ಕೊಳಗಾಗಿರುವ ಇಬ್ಬರು ಅಫ್ಘಾನಿಸ್ತಾನ ಮೂಲದ ದಂಪತಿ ಎಂದು ತಿಳಿದು ಬಂದಿದೆ.
ಖಚಿತ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ ದಂಪತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನು ನಿನ್ನೆ ಚೆನ್ನೈ ಏರ್‌ಪೋರ್ಟ್‌ನಲ್ಲಿ ದಾಳಿ ನಡೆಸಿದ್ದ ಪೊಲೀಸರು ೧೦೦ ಕೋಟಿ ಮೌಲ್ಯದ ಹೆರಾಯಿನ್ ವಶಕ್ಕೆ ಪಡೆದುಕೊಂಡು ಇಬ್ಬರ ಬಂಧನ ಮಾಡಿದ್ದರು.

5 / 5. 1

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಭಾರತೀಯ ನೌಕಾಪಡೆಯ ಮುಖ್ಯಸ್ಥರಾಗಿ ವೈಸ್ ಅಡ್ಮಿರಲ್ ದಿನೇಶ ತ್ರಿಪಾಠಿ ನೇಮಕ

ನಿಮ್ಮ ಕಾಮೆಂಟ್ ಬರೆಯಿರಿ

advertisement