ಜಾರ್ಖಂಡ: ಕೊರೊನಾದಿಂದ ಸತ್ತವನ ಹೂಳಲು ಹಳ್ಳಿಯಿಂದ ಹಳ್ಳಿಗೆ ದಿನವಿಡೀ ಓಡಾಡಿದ ಕುಟುಂಬ..!

ರಾಂಚಿ: ಗುಮ್ಲಾ ಜಿಲ್ಲೆಯ ಸದರ್ ಆಸ್ಪತ್ರೆಯಲ್ಲಿ ಭಾನುವಾರ ಕೋವಿಡ್‌ಗೆ ಮೃತಪಟ್ಟ 65 ವರ್ಷದ ಇಕ್ಲಾಸಸ್ ಲಕ್ರಾ ಅವರ ಶವ ಕಳೆದ 24 ಗಂಟೆಗಳ ಕಾಲ ಅಂತ್ಯಕ್ರಿಯೆಗಾಗಿ ಕಾಯುತ್ತಿದೆ.
ಸಮಾಧಿ ಮಾಡಲು ಲಕ್ರಾಅವರ ಕುಟುಂಬವು ಒಂದು ಹಳ್ಳಿಯಿಂದ ಮತ್ತೊಂದು ಹಳ್ಳಿಗೆ ತಿರುಗಿಯೇ ತಿರುಗಿತು, ಆದರೆ ಅವರನ್ನು ಗ್ರಾಮಸ್ಥರು ಎಲ್ಲೆಡೆ ಅಂತ್ಯಕ್ರಿಯೆಗೆ ವಿರೋಧಿಸಿದ್ದರಿಂದ ಕೊನೆಗೆ ಅವರು ಮೃತ ದೇಹವನ್ನು ಬಿಶುನ್‌ಪುರದ ಬ್ಲಾಕ್ ಆಫೀಸ್‌ಗೆ ತರಲಾಯಿತು ಮತ್ತು ಈ ವಿಷಯದಲ್ಲಿ ಮಧ್ಯಪ್ರವೇಶಿಸುವಂತೆ ಸ್ಥಳೀಯ ಆಡಳಿತವನ್ನು ಕೋರಲಾಯಿತು ಎಂದು ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.
ವರದಿ ಪ್ರಕಾರ, ಭಾನುವಾರ ಮಧ್ಯಾಹ್ನ 12 ಗಂಟೆಗೆ ಲಕ್ರಾ ಅವರ ಮರಣದ ನಂತರ, ಅವರ ಶವವನ್ನು ಮೊದಲು ಮುಂಡಾರ್ ಅಣೆಕಟ್ಟಿಗೆ ಕೊಂಡೊಯ್ಯಲಾಯಿತು, ಇದನ್ನು ಕೋವಿಡ್ ಸಂತ್ರಸ್ತರ ಸಮಾಧಿಗಾಗಿ ಮೀಸಲಿಡಲಾಗಿತ್ತು. ಆದರೆ, ಗ್ರಾಮಸ್ಥರು ಅಲ್ಲಿ ಸಮಾಧಿ ಮಾಡುವುದನ್ನು ತಡೆದರು.
ನಂತರ ಕುಟುಂಬವು ದೇಹವನ್ನು ಅದೇ ದಿನ ಹತ್ತಿರದ ಜೆಹಂಗುಟ್ವಾಕ್ಕೆ ಕೊಂಡೊಯ್ದಿತು ಆದರೆ ಸ್ಥಳೀಯರ ಕೋಪವನ್ನು ಇಲ್ಲಿಯೂ ಎದುರಿಸಿತು. ಸಮಾಧಿ ಸ್ಥಳವನ್ನು ಕಂಡುಕೊಳ್ಳುವ ಆಶಯದೊಂದಿಗೆ, ಅವರು ಶವವನ್ನು ಬಹರಧಿಪಕ್ಕೆ ಕೊಂಡೊಯ್ದರು ಆದರೆ ಅಲ್ಲಿನ ಗ್ರಾಮಸ್ಥರ ಪ್ರತಿಕ್ರಿಯೆಯು ಭಿನ್ನವಾಗಿರಲಿಲ್ಲ.
ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ತಿರಗಿ-ತಿರುಗಿ ಬೇಸತ್ತ ಕುಟುಂಬದವರು ಕೊನೆಗೆ ದೇಹವನ್ನು ಟ್ರ್ಯಾಕ್ಟರ್‌ನಲ್ಲಿ ತುಂಬಿಸಿ ಬ್ಲಾಕ್ ಆಫೀಸ್‌ನ ಹೊರಗೆ ನಿಲ್ಲಿಸಿದರು.
ಸೋಮವಾರ, ಸ್ಥಳೀಯ ಆಡಳಿತವು ಕಾರ್ಯಾಚರಣೆಗೆ ಇಳಿಯಿತು ಮತ್ತು ಶವವನ್ನು ಎರಡು ಕಿಲೋಮೀಟರ್ ದೂರದಲ್ಲಿರುವ ಚೆಡಾ ಗ್ರಾಮಕ್ಕೆ ಕರೆದೊಯ್ಯಿತು, ಅಲ್ಲಿ ಸ್ಥಳೀಯರು ಮತ್ತೆ ಅಂತ್ಯಕ್ರಿಯೆ ಮಾಡಲು ಒಪ್ಪಲಿಲ್ಲ. ಅಧಿಕಾರಿಗಳು ಈಗ ಶವವನ್ನು ಮೃತ ವ್ಯಕ್ತಿಯ ಗ್ರಾಮವಾದ ಜೋರಿಗೆ ಕೊಂಡೊಯ್ದಿದ್ದಾರೆ.
ಹಳ್ಳಿಯಿಂದ ಹಳ್ಳಿಗೆ ಅಲೆದಾಡುವಾಗ ಆಡಳಿತವು ಅವರಿಗೆ ಸಹಾಯ ಮಾಡಲು ಮುಂದೆ ಬಂದಿಲ್ಲ ಮತ್ತು ಬದಲಿಗೆ ಪಿಪಿಇ ಕಿಟ್‌ಗಳನ್ನು ಸಹಾಯದ ಮೂಲಕ ಮಾತ್ರ ನೀಡಿದೆ ಎಂದು ಲಕ್ರಾ ಅವರ ಕುಟುಂಬ ಆರೋಪಿಸಿದೆ ಎಂದು ವರದಿ ಹೇಳಿದೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ 2ನೇ ಹಂತದ ಮತದಾನ : ಶ್ರೀಮಂತ ಅಭ್ಯರ್ಥಿ ₹ 622 ಕೋಟಿ ಒಡೆಯ, ಅತ್ಯಂತ ಬಡ ಅಭ್ಯರ್ಥಿ ಬಳಿ ಇರುವುದು ಕೇವಲ...

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement