ಕರ್ನಾಟಕಕ್ಕೆ ಮೊದಲ ಬಾರಿಗೆ ರೈಲಿನಲ್ಲಿ ಬಂದ ಆಮ್ಲಜನಕ ಹೊತ್ತ ಕಂಟೇನರ್‌ಗಳು

ಬೆಂಗಳೂರು: ಕರ್ನಾಟಕದಲ್ಲಿ ಆಮ್ಲಜನಕ ಅಭಾವ ನೀಗಿಸಲು ಇದೇ ಮೊದಲ ಬಾರಿಗೆ ಮಂಗಳವಾರ ರೈಲಿನ ಮೂಲಕ ಆಮ್ಲಜನಕ ಬಂದಿದೆ. ಜಮ್ಶೆಡ್ಪುರದಿಂದ ಬೆಂಗಳೂರಿಗೆ ಎಕ್ಸ್‌ಪ್ರೆಸ್ ರೈಲಿನಲ್ಲಿ 6 ಆಮ್ಲಜನಕ ಕಂಟೇನರ್‌ಗಳು ತಲುಪಿವೆ. ತಲಾ 20 ಟನ್ ಇರುವ ಆಮ್ಲಜನಕ ಕಂಟೇನರ್‌ಗಳು ಈಗ ವೈಟ್‌ಫೀಲ್ಡ್‌ನಲ್ಲಿರುವ ಕಾರ್ಪೊರೇಷನ್ ಆಫ್ ಇಂಡಿಯಾ ಡಿಪೋಕ್ಕೆ ಆಗಮಿಸಿವೆ.
ಜಮ್ಶೆಡ್ಪುರದಿಂದ ಸೋಮವಾರ ಮುಂಜಾನೆ 3ಕ್ಕೆ ಹೊರಟಿದ್ದ ಈ ಅಮ್ಲಜನಕ ಹೊತ್ತ ಎಕ್ಸ್‌ಪ್ರೆಸ್ ರೈಲು 30 ಗಂಟೆಯಲ್ಲಿ ಬೆಂಗಳೂರು ತಲುಪಿದೆ. ಒಟ್ಟು 17.50 ಸಾವಿರ ಲೀಟರ್ ಆಕ್ಸಿಜನ್ ತರಿಸಿಕೊಳ್ಳಲಾಗಿದೆ. ಈ ರೈಲಿಗೆ ಗ್ರೀನ್ ಕಾರಿಡಾರ್ ವ್ಯವಸ್ಥೆ ಮಾಡಲಾಗಿತ್ತು.
ಈ ಬಗ್ಗೆ ಮೇ 10 ರಂದು ಮಾತನಾಡಿದ್ದ ಕಂದಾಯ ಸಚಿವ ಅಶೋಕ್, ಆಮ್ಲಜನಕ ಕೊರತೆ ಸ್ವಲ್ಪಮಟ್ಟಿಗೆ ಸುಧಾರಿಸುತ್ತಿದೆ. ರೈಲಿನ ಮೂಲಕ ಆಮ್ಲಜನಕ ರಾಜ್ಯಕ್ಕೆ ಬರಲಿದೆ. ಎಲ್ಲಾ ಕೊವಿಡ್ ಸೆಂಟರ್ಗಳಲ್ಲಿ ಆಮ್ಲಜನಕ ಕಾನ್ಸಂಟ್ರೇಟರ್ ಅಳವಡಿಸುತ್ತೇವೆ. ಬೆಂಗಳೂರಿನಲ್ಲಿ 2 ಸಾವಿರ ಕಾನ್ಸಂಟ್ರೇಟರ್ ಅಳವಡಿಸುತ್ತೇವೆ. ಪ್ರತಿ ತಾಲೂಕಿಗೂ 40 ಆಕ್ಸಿಜನ್ ಕಾನ್ಸಂಟ್ರೇಟರ್ ಅಳವಡಿಕೆ ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement