ಕೊರೊನಾ ಸೋಂಕಿತ ಗರ್ಭಿಣಿಗೆ ಸುರಕ್ಷಿತ ಹೆರಿಗೆ, ನವಜಾತ ಶಿಶುವಿಗೆ ವರದಿ ನೆಗೆಟಿವ್‌..!

ಯಾದಗಿರಿ: ನಗರದ ವಿಬಿಆರ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಕೊರೊನಾ ಸೊಂಕಿತ ಗರ್ಭಿಣಿ ಮಹಿಳೆಯ ಹೆರಿಗೆಯನ್ನು ವೈದ್ಯರು ಸುರಕ್ಷಿತವಾಗಿ ಮಾಡಿಸಿದ್ದಾರೆ.
ಕೆಲ ದಿನಗಳ ಹಿಂದೆ ಕೊರೊನಾ ಸೋಂಕಿಗೆ ಒಳಗಾಗಿದ್ದ ಗರ್ಭಿಣಿ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿದ್ದಳು. ಆಸ್ಪತ್ರೆಯ ವೈದ್ಯರು ಹಾಗೂ ಮಾಜಿ ಶಾಸಕರಾದ ಡಾ. ವೀರ ಬಸವಂತರೆಡ್ಡಿ ಮುದ್ನಾಳ್, ಡಾ.ಎಸ್.ವಿ.ರೆಡ್ಡಿ, ಡಾ.ಸಂಗಮ್ಮ.ವಿ. ರೆಡ್ಡಿ ವೈದ್ಯರ ತಂಡ ಎಚ್ಚರಿಕೆಯಿಂದ ಸಕಾಲಕ್ಕೆ ಸೂಕ್ತ ಚಿಕಿತ್ಸೆ ನೀಡಿ ಸುರಕ್ಷಿತ ಹೆರಿಗೆ ಮಾಡಿಸಿದ್ದಾರೆ.
ಸದ್ಯ ತಾಯಿ-ಮಗು ಆರೋಗ್ಯದಿಂದ ಇದ್ದಾರೆ, ವೈದ್ಯರು ಮಗುವಿನ ಕೋವಿಡ್‌ ಪರೀಕ್ಷೆ ಮಾಡಿದ್ದು, ವರದಿ ನೆಗೆಟಿವ್‌ ಬಂದಿದೆ. ಇವರನ್ನು ಮಂಗಳವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಿದ್ದು, ಮನೆಯಲ್ಲಿ ಹದಿನಾಲ್ಕು ದಿನಗಳ ಕಾಲ ಹೊಮ್ ಕ್ವಾರೆಂಟೈನ್ ಆಗಿ ಇರಲು ಸೂಚಿಸಿದ್ದಾರೆ.

4 / 5. 1

ಶೇರ್ ಮಾಡಿ :
ಪ್ರಮುಖ ಸುದ್ದಿ :-   ವೀಡಿಯೊ...| ಎಲ್ಲರೆದುರು ಸರ್ಪಕ್ಕೆ ಮುತ್ತಿಕ್ಕಿದ ಭೂಪ...ಆದ್ರೆ ನಂತರ ಆದದ್ದೇ ಬೇರೆ

ನಿಮ್ಮ ಕಾಮೆಂಟ್ ಬರೆಯಿರಿ

advertisement