ಕೋವಿಡ್ -19 ಉಲ್ಬಣ: ಮೇ 12 ರಿಂದ ತೆಲಂಗಾಣದಲ್ಲಿ 10 ದಿನಗಳ ಲಾಕ್‌ಡೌನ್ ಜಾರಿ

ಹೈದರಾಬಾದ್‌: ಎರಡನೇ ಕೋವಿಡ್ ಅಲೆಯಿಂದ ಹಾನಿಗೊಳಗಾಗುತ್ತಿರುವುದರಿಂದ, ತೆಲಂಗಾಣ ಸರ್ಕಾರ ಬುಧವಾರ ಬೆಳಿಗ್ಗೆಯಿಂದ ಲಾಕ್ ಡೌನ್ ಘೋಷಿಸಿದೆ. ಮೇ 12 ರಂದು ಬೆಳಿಗ್ಗೆ 10 ರೊಳಗೆ ಈ ನಿರ್ಬಂಧಗಳು ಜಾರಿಗೆ ಬರಲಿದ್ದು, ರಾಜ್ಯವು 10 ದಿನಗಳ ವರೆಗೆ ಲಾಕ್‌ಡೌನ್ ಆಗಿರುತ್ತದೆ.
ಮೇ 12 ರ ಬುಧವಾರ ಬೆಳಿಗ್ಗೆ 10 ರಿಂದ 10 ದಿನಗಳವರೆಗೆ ಲಾಕ್‌ಡೌನ್ ಜಾರಿಗೆ ತರಲು ನಿರ್ಧರಿಸಲಾಗಿದೆ. ಪ್ರತಿದಿನ ಬೆಳಿಗ್ಗೆ 6 ರಿಂದ ಬೆಳಿಗ್ಗೆ 10 ರ ವರೆಗೆ ಎಲ್ಲಾ ಚಟುವಟಿಕೆಗಳಿಗೆ ಅವಕಾಶ ನೀಡಲಾಗುವುದು ಎಂದು ಕ್ಯಾಬಿನೆಟ್ ನಿರ್ಧರಿಸಿದೆ.”
ತೆಲಂಗಾಣದ ಮುಖ್ಯ ಕಾರ್ಯದರ್ಶಿ ಈ ಹಿಂದೆ ರಾಜ್ಯದಲ್ಲಿ ‘ಪರಿಸ್ಥಿತಿ ನಿಯಂತ್ರಣದಲ್ಲಿದೆ’ ಯಾವುದೇ ಲಾಕ್‌ಡೌನ್ ಅಗತ್ಯವಿಲ್ಲ’ ಎಂದು ಹೇಳಿದ್ದರು. ಆದರೆ, ಪರಿಸ್ಥಿತಿಯನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಹೈಕೋರ್ಟ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ನಂತರ ಕೋವಿಡ್ -19 ಹರಡುವುದನ್ನು ತಡೆಗಟ್ಟಲು 10 ದಿನಗಳ ಸಂಪೂರ್ಣ ಲಾಕ್‌ಡೌನ್ ಘೋಷಿಸಲು ಸರ್ಕಾರ ನಿರ್ಧರಿಸಿತು.
ತೆಲಂಗಾಣದಲ್ಲಿ 4,826 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿದೆ, ರಾಜ್ಯದಲ್ಲಿ ಒಟ್ಟು ಸಂಚಿತ ಪ್ರಕರಣಗಳ ಸಂಖ್ಯೆ 5,02,187 ಆಗಿದೆ. 71.36 ಕೋಟಿಗೂ ಹೆಚ್ಚು ಮಾದರಿಗಳನ್ನು ಪರೀಕ್ಷಿಸಲಾಗಿದೆ.
ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಆಂಧ್ರಪ್ರದೇಶದ ಹೊರತಾಗಿ, ದಕ್ಷಿಣದ ಎಲ್ಲಾ ರಾಜ್ಯಗಳು ಈಗ ಲಾಕ್‌ಡೌನ್ ಹಂತದಲ್ಲಿದೆ.
ಮೇ 16 ರವರೆಗೆ ಕೇರಳ ಲಕ್‌ಡೌನ್‌ನಲ್ಲಿದೆ, ಮೇ 24 ರ ವರೆಗೆ ಕರ್ನಾಟಕದಲ್ಲಿ ಜಾರಿಯಲ್ಲಿವೆ. ತಮಿಳುನಾಡು ಮತ್ತು ಪುದುಚೇರಿ ಕೂಡ ಎರಡು ವಾರಗಳ ಲಾಕ್‌ಡೌನ್‌ನಲ್ಲಿವೆ.
ಉತ್ತರ ಪ್ರದೇಶ, ದೆಹಲಿ, ಹರಿಯಾಣ ಮತ್ತು ಉತ್ತರ ಪ್ರದೇಶಗಳಲ್ಲಿ ಮೇ 17 ರ ವರೆಗೆ ತಮ್ಮ ಲಾಕ್‌ಡೌನ್‌ ವಿಸ್ತರಿಸಲಾಗಿದೆ. ರಾಜಸ್ಥಾನವೂ ಎರಡು ವಾರಗಳ ಕಾಲ ಲಾಕ್‌ಡೌನ್‌ನಲ್ಲಿದೆ.

ಪ್ರಮುಖ ಸುದ್ದಿ :-   ಐಪಿಎಲ್‌ (IPL)2024: ಹಾರ್ದಿಕ್ ಪಾಂಡ್ಯ- ಲಸಿತ್ ಮಾಲಿಂಗ ನಡುವೆ ಮುನಿಸು..? ಈ ವೀಡಿಯೊಗಳನ್ನು ನೋಡಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement