ಗದಗ: ಆಮ್ಲಜನಕ ಉತ್ಪಾದನಾ ಘಟಕಗಳು ಶೀಘ್ರವೇ ಆರಂಭ

ಗದಗ: ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಅಗತ್ಯವಿರುವ  ಆಮ್ಲಜನಕ ಉತ್ಪಾದನಾ ಘಟಕಗಳು ಜಿಲ್ಲೆಗೆ ಮಂಜೂರಾಗಿವೆ. 1000 ಎಲ್.ಪಿ.ಎಂ.  ಉತ್ಪಾದನಾ ಘಟಕವನ್ನು ಮೆಡಿಕಲ್ ಆಮ್ಲಜನಕ ಉತ್ಪಾದನಾ ಘಟಕ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳ  ಸಿಎಸ್‌ಆರ್ ಅನುದಾನದಿಂದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಕೋರಿಕೆಯ ಮೇರೆಗೆ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಅವರು ತಿಳಿಸಿದರು.
ಜಿಲ್ಲಾಡಳಿತ ಭವನದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಅತನಾಡಿದ ಅವರು,   ಜಿಲ್ಲೆಯಲ್ಲಿ ಒಟ್ಟಾರೆ 5,890  ಎಲ್‌ಪಿಎಂನ ಆಮ್ಲಜನಕ ಉತ್ಪಾದನಾ ಘಟಕ ಆರಂಭಕ್ಕೆ  ಅನುಮತಿ ದೊರೆತಿದೆ. ಕೇಂದ್ರ ಗಣಿ ಭೂ ವಿಜ್ಞಾನ ಇಲಾಖೆಯಿಂದ 1000 ಎಲ್.ಪಿ.ಎಮ್, ರಾಜ್ಯಸರ್ಕಾರದಿಂದ 3000 ಎಲ್.ಪಿ.ಎಮ್, ಜಿಲ್ಲೆಗೊಂದು ಘಟಕ ಯೋಜನೆಯಡಿ 1,500 ಎಲ್.ಪಿ.ಎಮ್ ಘಟಕ ಹಾಗೂ ನರಗುಂದ ಆಸ್ಪತ್ರೆಗೆ 390 ಎಲ್.ಪಿ.ಎಮ್. ಉತ್ಪಾದನಾ ಘಟಕಗಳು ಮಂಜೂರಾಗಿದ್ದು  ಘಟಕಗಳ ಕಾರ್ಯಾರಂಭಕ್ಕೆ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಶೀಘ್ರವೇ 3000ಎಲ್.ಪಿ.ಎಂ.ಆಕ್ಸಿಜನ್ ಉತ್ಪಾದನಾ ಘಟಕ ಆರಂಭಕ್ಕೆ ಪ್ರಯತ್ನಿಸಲಾಗುತ್ತದೆ ಎಂದು ಹೇಳಿದರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement