ಲಸಿಕೆ 2ನೇ ಡೋಸ್‌ ಬಾಕಿ ಇರುವವರಿಗೆ ಆದ್ಯತೆ ನೀಡಿ: ರಾಜ್ಯಗಳಿಗೆ ಕೇಂದ್ರದ ಸಲಹೆ

ನವ ದೆಹಲಿ : ಕೊರೊನಾ ಲಸಿಕೆ ನೀಡಿಕೆಯಲ್ಲಿ 2ನೇ ಡೋಸ್ ಬಾಕಿ ಇರುವವರಿಗೆ ಆದ್ಯತೆ ನೀಡುವಂತೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ಸಲಹೆ ನೀಡಿದೆ.
ಕೇಂದ್ರದಿಂದ ಸರಬರಾಜು ಮಾಡಲಾದ ಡೋಸ್‌ಗಳಲ್ಲಿ ಕನಿಷ್ಠ ಶೇಕಡಾ 70ರಷ್ಟನ್ನ ಕಾಯ್ದಿರಿಸುವಂತೆ ಕೇಂದ್ರವು ಮಂಗಳವಾರ ರಾಜ್ಯಗಳಿಗೆ ಮನವಿ ಮಾಡಿದ್ದು, ಲಸಿಕೆಯ ಡೋಸುಗಳು ವ್ಯರ್ಥವಾಗುವುದನ್ನು ಕಡಿಮೆ ಮಾಡಬೇಕು ಸೂಚಿಸಲಾಗಿದೆ ಎಂದು ಆರೋಗ್ಯ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಕೋವಿಡ್-19 ವಿರುದ್ಧ ಹೋರಾಡಲು ತಂತ್ರಜ್ಞಾನ ಮತ್ತು ದತ್ತಾಂಶ ನಿರ್ವಹಣೆಯ ಉನ್ನತಾಧಿಕಾರ ಗುಂಪಿನ ಅಧ್ಯಕ್ಷರಾದ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಮತ್ತು ಡಾ.ಆರ್.ಎಸ್. ಶರ್ಮಾ ಮಂಗಳವಾರ ಕೋವಿಡ್-19 ಲಸಿಕೆಯ ಸ್ಥಿತಿ ಪರಿಶೀಲಿಸಲು ರಾಜ್ಯ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಎರಡನೇ ಡೋಸ್ ಲಸಿಕೆಗಾಗಿ ಕಾಯುತ್ತಿರುವ ಹೆಚ್ಚಿನ ಸಂಖ್ಯೆಯ ಫಲಾನುಭವಿಗಳ ತುರ್ತು ಅಗತ್ಯದ ಬಗ್ಗೆ ಒತ್ತಿ ಹೇಳಿದರು.
ಮೊದಲ ಡೋಸ್ ತೆಗೆದುಕೊಂಡ ಎಲ್ಲ ಫಲಾನುಭವಿಗಳಿಗೆ ಎರಡನೇ ಡೋಸ್ ಗಳಿಗೆ ಆದ್ಯತೆ ನೀಡಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ರಾಜ್ಯಗಳನ್ನ ಒತ್ತಾಯಿಸಲಾಗಿದೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ರಾಜ್ಯಗಳು ತಮಗೆ ಸರಬರಾಜು ಮಾಡಲಾದ ಲಸಿಕೆಗಳಲ್ಲಿ ಕನಿಷ್ಠ ಶೇಕಡಾ 70ರಷ್ಟನ್ನು ಎರಡನೇ ಡೋಸ್ ಲಸಿಕೆಗಾಗಿ ಮತ್ತು ಉಳಿದ ಶೇಕಡಾ 30 ಅನ್ನು ಮೊದಲ ಡೋಸ್ʼಗಾಗಿ ಭಾರತ ಸರ್ಕಾರದ ಚಾನೆಲ್ಲಿನಿಂದ ಕಾಯ್ದಿರಿಸಬಹುದು. ಆದಾಗ್ಯೂ ಇದು ಸೂಚಕವಾಗಿದೆ. ಇದನ್ನ ಶೇಕಡಾ 100ಕ್ಕೆ ಹೆಚ್ಚಿಸುವ ಸ್ವಾತಂತ್ರ್ಯ ರಾಜ್ಯಗಳಿಗೆ ಇದೆ. ಕೋವಿನ್ʼನಲ್ಲಿ ರಾಜ್ಯವಾರು ಸಂಖ್ಯೆಗಳನ್ನ ಅವುಗಳ ಯೋಜನಾ ಉದ್ದೇಶಗಳಿಗಾಗಿ ರಾಜ್ಯಗಳೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ತಿಳಿಸಲಾಗಿದೆ.

ಪ್ರಮುಖ ಸುದ್ದಿ :-   ಯಕ್ಷಗಾನದ ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement