ಕೊರೊನಾ ಸೋಂಕು ಗ್ರಾಮೀಣ ಪ್ರದೇಶದಲ್ಲಿ ಏರಿಕೆ ಆತಂಕ: ಸಿದ್ಧತಾ ಕ್ರಮಕ್ಕೆ ಸೂಚನೆ

ಬೆಂಗಳೂರು : ಬೆಂಗಳೂರಲ್ಲಿ ಎರಡ್ಮೂರು ವಾರಗಳಲ್ಲಿ ಸೊಂಕು ಹತೋಟಿಗೆ ಬರುವ ನಿರೀಕ್ಷೆಯಿದೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಏರಿಕೆ ಆಗುವ ಆತಂಕವೂ . ಹೀಗಾಗಿ ಅಧಿಕಾರಿಗಳ ಜೊತೆ ವಿಸ್ತೃತವಾಗಿ ಸಮಾಲೋಚನೆ ಮಾಡಿದ್ದೇನೆ. ಗ್ರಾಮೀಣ ಪ್ರದೇಶದಲ್ಲಿ ಸೋಂಕು ಹೆಚ್ಚಾಗದಂತೆ ಈಗಲೇ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ ಹೇಳಿದ್ದಾರೆ.
ದೊಡ್ಡ ನಗರಗಳಲ್ಲಿ ಇಷ್ಟು ಆರೋಗ್ಯ ವ್ಯವಸ್ಥೆ ಇದ್ದರೂ ಐಸಿಯು, ವೆಂಟಿಲೇಟರ್ ಕೊರತೆ ಉಂಟಾಯ್ತು. ಹಾಗಾಗಿ ಗ್ರಾಮೀಣ ಭಾಗದ ಬಗ್ಗೆ ಮುನ್ನೆಚ್ಚರಿಕೆ ವಹಿಸಲೇ ಬೇಕು. ಈಗಿನಿಂದಲೇ ಕೋವಿಡ್ ಕೇರ್ ಸೆಂಟರ್ ಹಾಗೂ ಸ್ಟೆಪ್ ಡೌನ್ ಹಾಸ್ಪಿಟಲ್ ಸೇರಿದಂತೆ ಎಲ್ಲ ವ್ಯವಸ್ಥೆ ಮಾಡಿಕೊಳ್ಳುವಂತೆ ಸೂಚನೆನೀಡಲಾಗಿದೆ ಎಂದು ತಿಳಿಸಿದರು.
ನಾನು ಹಲವು ತಾಲ್ಲೂಕು ಕೇಂದ್ರ ಆಸ್ಪತ್ರೆಗಳಿಗೆ ಭೇಟಿ ಕೊಡುತ್ತಿದ್ದೇನೆ. ಕೆ ಆರ್ ಪುರ , ಹೊಸಕೋಟೆ , ಚಿಕ್ಕಬಳ್ಳಾಪುರ ಸೇರಿದಂತೆ ಹಲವು ಕಡೆ ಭೇಟಿ ನೀಡುತ್ತೇನೆ. ನೇರವಾಗಿ ತಾಲ್ಲೂಕಿನ ಆಸ್ಪತ್ರೆಗಳಿಗೆ ಭೇಟಿ ಕೊಟ್ಟರೆ, ರೋಗಿಗಳಿಗೆ ಯಾವ ರೀತಿ ಚಿಕಿತ್ಸೆ ಸಿಗುತ್ತಿದೆ ಎಂದು ತಿಳಿಯಲಿದೆ. ನಾವು ಹೋಗಿ ಭೇಟಿ ಕೊಡದೆ ಹೋದ್ರೆ, ಏನ್ ಸಮಸ್ಯೆಗಳು ಇವೆ ಎಂಬುದು ಗೊತ್ತಾಗುವುದಿಲ್ಲ. ಹೀಗಾಗಿ ಖುದ್ದಾಗಿ ನಾನೇ ಆಸ್ಪತ್ರೆಗಳಿಗೆ ಭೇಟಿ ನೀಡುತ್ತಿದ್ದೇನೆ ಎಂದು ಹೇಳಿದರು.
ಬ್ಲಾಕ್ ಫಂಗಸ್ ಗೆ ಮಹಾರಾಷ್ಟ್ರ ದಲ್ಲಿ ಉಚಿತ ಚಿಕಿತ್ಸೆ ನೀಡುತ್ತಿರುವ ವಿಚಾರವಾಗಿ ಮಾತನಾಡಿದ ಅವರು, ಈ ಬಗ್ಗೆ ಚರ್ಚೆ ಮಾಡುತ್ತೇವೆ. ಬ್ಲಾಕ್ ಫಂಗಸ್ ಚಿಕಿತ್ಸಾ ವಿಧಾನ ಹೇಗಿದೆ ಎಂಬುದನ್ನು ಮೊದಲು ನೋಡಬೇಕು. ತಾಂತ್ರಿಕ ಸಲಹಾ ಸಮಿತಿ ಜೊತೆ ಚರ್ಚೆ ಮಾಡಿ ಮೊದಲು ಈ ಬಗ್ಗೆ ವರದಿ ತರಿಸಿಕೊಳ್ಳುತ್ತೇವೆ. ನಂತರ ಉನ್ನತ ಮಟ್ಟದಲ್ಲಿ ಚರ್ಚೆ ಮಾಡಿ ಎರಡು ದಿನದಲ್ಲಿ ತೀರ್ಮಾನ ಮಾಡುತ್ತೇವೆ. ಇಡೀ ದೇಶದಲ್ಲಿ ಯಾವ ರಾಜ್ಯವಾದರೂ ಸಂಪೂರ್ಣ ಚಿಕಿತ್ಸೆಯನ್ನು ಉಚಿತವಾಗಿ ನೀಡುತ್ತಿದೆ ಎಂದರೆ ಅದು ಕರ್ನಾಟಕ. ಕಳೆದ ವರ್ಷ ಸುಮಾರು 350 ಕೋಟಿ ರೂ.ಅನ್ನು ಆರೋಗ್ಯಕ್ಕೆ ಸಂಬಂಧಿಸಿದಂತೆ ಖರ್ಚು ಮಾಡಲಾಗಿದೆ. ಉಚಿತ ಟೆಸ್ಟಿಂಗ್, ಕ್ವಾರಂಟೈನ್, ಕೋವಿಡ್ ಕೇರ್ ಸೆಂಟರ್ ಅಲ್ಲಿಯೂ ಉಚಿತವಾಗಿ ನೋಡಲಾಗಿದೆ. ಔಷಧವನ್ನೂ ಹಾಗೂ ಚಿಕಿತ್ಸೆಯನ್ನೂ ಉಚಿತವಾಗಿ ನೀಡುತ್ತಿದ್ದೇವೆ. ಆಸ್ಟ್ರೇಲಿಯಾ ಪ್ರಜೆಗಳು ಅಲ್ಲಿಗೆ ಹೋದರೆ ಅವರನ್ನು ಕ್ವಾರಂಟೈನ್ ಮಾಡಲಾಗುತ್ತದೆ. ಅದು ಉಚಿತವಾಗಿ ಅಲ್ಲ ಒಂದು ಲಕ್ಷ ರೂ. ಕ್ವಾರಂಟೈನ್​ ಫೀಸ್ ನೀಡಬೇಕು ಎಂದರು.
ಡಬಲ್ ಮ್ಯೂಟೆಡ್ ವೈರಸ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಡಾ.ಸುಧಾಕರ್, ಈಗಾಗಲೇ ಜಿನೋಲಾಜಿಕಲ್ ಸ್ಟಡೀಸ್ ಬಗ್ಗೆ ಸೀಕ್ವೆನ್ಸಿಂಗ್ ಮಾಡಿ ಎಂದಿದ್ದೇನೆ. ಈಗಾಗಲೇ ವಿದೇಶಗಳಲ್ಲಿ ಇದನ್ನು ಭಾರತದ ರೂಪಾಂತರ ಎಂದು ಕರೆದಿದ್ದಾರೆ. ಭಾರತದ ರೂಪಅಂತರ ಬ್ರಿಟಿಷ್ ರೂಪಅಂತರಕ್ಕಿಂತ ವಿಭಿನ್ನವಾಗಿ ವರ್ತಿಸುತ್ತಿದೆ. ವಿಶ್ವದಲ್ಲಿ ಪ್ರತಿಷ್ಠಿತ ಸಂಸ್ಥೆಗಳು ಈ ಬಗ್ಗೆ ಅಧ್ಯಯನ ಮಾಡುತ್ತಿವೆ ಎಂದು ಹೇಳಿದರು.

ಪ್ರಮುಖ ಸುದ್ದಿ :-   ನೇಹಾ ಹಿರೇಮಠ ಕೊಲೆ ಪ್ರಕರಣ: ಆರೋಪಿ ಫಯಾಜ್‌ ಆರು ದಿನ ಸಿಐಡಿ ಕಸ್ಟಡಿಗೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement