ಮದುವೆ ಸ್ಥಳದಿಂದ ವರನೇ ನಾಪತ್ತೆ…ದಿಬ್ಬಣದೊಂದಿಗೆ ಬಂದವನ ಕೈಹಿಡಿದ ವಧು..!

ಕಾನ್ಪುರ: ಕೋವಿಡ್ ಬೆದರಿಕೆಯ ಹೊರತಾಗಿಯೂ, ಭಾರತದಲ್ಲಿ ಇನ್ನೂ ಅನೇಕ ವಿವಾಹಗಳು ನಡೆಯುತ್ತಿವೆ. ವಿವಾಹದ ಋತುಮಾನವು ಭರದಿಂದ ಸಾಗುತ್ತಿರುವುದರಿಂದ, ಅನೇಕ ವಿಲಕ್ಷಣ ಘಟನೆಗಳು ಸಹ ಮುನ್ನೆಲೆಗೆ ಬರುತ್ತಿವೆ.
ಅಂತಹ ಒಂದು ಪ್ರಹಸನ ಮತ್ತು ಸಸ್ಪೆನ್ಸ್ ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯ ಮಹಾರಾಜಪುರದಿಂದ ವರದಿಯಾಗಿದೆ, ಅಲ್ಲಿ ಮದುಮಗ ಭಾನುವಾರ ವಿವಾಹ ಸ್ಥಳದಿಂದ ನಿಗೂಢವಾಗಿ ಕಣ್ಮರೆಯಾದ ನಂತರ ವಧುವು ದಿಬ್ಬಣದಲ್ಲಿ ಬಂದವರಲ್ಲಿ ಒಬ್ಬನನ್ನು ಮದುವೆಯಾದ ವಿದ್ಯಮಾನ ವರದಿಯಾಗಿದೆ.
ಐಎಎನ್‌ಎಸ್ ವರದಿಯ ಪ್ರಕಾರ, ಹೂಮಾಲೆ ವಿನಿಮಯ ಸಮಾರಂಭ ನಡೆದಿದ್ದು, ವರ ಇದ್ದಕ್ಕಿದ್ದಂತೆ ಕಣ್ಮರೆಯಾದಾಗ ಕುಟುಂಬಗಳು ಮುಖ್ಯ ವಿವಾಹ ಸಮಾರಂಭಕ್ಕೆ ತಯಾರಿ ನಡೆಸಿದ್ದವು. ಎರಡೂ ಕುಟುಂಬಗಳು ವರನನ್ನು ತೀವ್ರವಾಗಿ ಹುಡುಕಲು ಪ್ರಾರಂಭಿಸಿದವು ಮತ್ತು ಘಟನೆಗಳ ತಿರುವಿನಲ್ಲಿ ವಧು ತಲ್ಲಣಗೊಂಡಳು. ಹೇಗಾದರೂ, ಸ್ವಲ್ಪ ಸಮಯದವರೆಗೆ ಹುಡುಕಿದ ನಂತರ, ವಧುವಿನ ಕುಟುಂಬ ಸದಸ್ಯರು ನಾಪತ್ತೆಯಾಗಿದ್ದಾನೆ ಎಂದು ತಿಳಿದುಕೊಂಡರು, ಆತ ಉದ್ದೇಶಪೂರ್ವಕವಾಗಿ ಸ್ಥಳದಿಂದ ಓಡಿಹೋಗಿದ್ದ.
ದಿಕ್ಕೇ ತೋಗದಂತಾಗಿದ್ದ ವಧುವಿನ ಕುಟುಂಬವನ್ನು ನೋಡಿದ ವರನ ಕಡೆಯಿಂದ ಬಂದ ಅತಿಥಿಯೊಬ್ಬರು ದಿಬ್ಬಣದೊಂದಿಗೆ ಬಂದ ಇನ್ನೊಬ್ಬ ಸೂಕ್ತ ಹುಡುಗನೊಂದಿಗೆ ಮದುವೆ ನಡೆಸಿ ಎಂದು ಸಲಹೆ ನೀಡಿದರು. ವಧುವಿನ ಕುಟುಂಬವು ದಿಬ್ಬಣದೊಂದೊಗೆ ಬಂದ ಒಬ್ಬನ ಕುಟುಂಬದ ಸಮಾಲೋಚಿಸಿದ ನಂತರ ಮದೆವೆಗೆ ಒಪ್ಪಿಗೆ ಸೂಚಿಲಾಯಿತು.
ನಂತರ, ವಧುವಿನ ಕುಟುಂಬ ವರ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ದೂರು ದಾಖಲಿಸಿತು.
ಇನ್ಸ್‌ಪೆಕ್ಟರ್ ನರ್ವಾಲ್, ಶೇಷನಾರಾಯಣ ಪಾಂಡೆ, “ಈ ವಿಷಯದಲ್ಲಿ ವಧು-ವರರ ಕಡೆಯಿಂದ ನಮಗೆ ದೂರು ಬಂದಿದೆ. ವರ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ವಧುವಿನ ಕಡೆಯವರು ಸೂಕ್ತ ಕ್ರಮ ಕೋರಿ ದೂರು ಸಲ್ಲಿಸಿದ್ದರೆ ವರನ ತಂದೆ ಧರಂಪಾಲ್ ಅವರು ತಮ್ಮ ದೂರಿನಲ್ಲಿ, ಕಾಣೆಯಾದ ತನ್ನ ಮಗನನ್ನು ಪತ್ತೆಹಚ್ಚಲು ಪೊಲೀಸ್ ಸಹಾಯ ಕೋರಿದ್ದಾರೆ. ಈ ನಿಟ್ಟಿನಲ್ಲಿ ತನಿಖೆ ಮುಂದುವರೆದಿದೆ ಎಂದು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಗೂಢಲಿಪಿ ಬಹಿರಂಗಗೊಳಿಸಲು ಒತ್ತಾಯಿಸಿದರೆ ಭಾರತದಿಂದ ನಿರ್ಗಮಿಸಬೇಕಾಗ್ತದೆ ಎಂದ ವಾಟ್ಸಾಪ್

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement