ಟೊಮೆಟೊ ದರ 15 ಕೆಜಿಗೆ 2 ರೂಪಾಯಿಗೆ ಕುಸಿತ … ನೊಂದು ರಸ್ತೆಗೆ ಎಸೆದ ರೈತ

ಬೆಂಗಳೂರು: ಕರ್ನಾಟಕದಲ್ಲಿ ತರಕಾರಿ ದರಗಳು ಕಡಿಮೆ ಆಗುತ್ತಿದ್ದು, ರೈತರು ಟೊಮೆಟೊ ಮತ್ತು ಇತರ ಉತ್ಪನ್ನಗಳನ್ನು ದರ ಸಿಗದ ಕಾರಣ ದೊಡ್ಡ ಪ್ರಮಾಣದಲ್ಲಿ ರಸ್ತೆಗಳಿಗೆ ಎಸೆಯುತ್ತಿರುವುದು ವರದಿಯಾಗಿದೆ.
ಇದಕ್ಕೆ ಒಂದು ನಿರ್ಶನವಾಗಿ ಕೋಲಾರದ ರೈತನೊಬ್ಬ ತನ್ನ ಟೊಮೆಟೊ ಉತ್ಪನ್ನಗಳನ್ನು ರಸ್ತೆಬದಿಯಲ್ಲಿ ಎಸೆಯುತ್ತಿರುವ ಈ ವಿಡಿಯೋ ಸಾಮಾಜಿಕ ವೈರಲ್‌ ಆಗಿದೆ.

ರೈತರು 15 ಕಿಲೋಗೆ ಕೇವಲ ಎರಡು ರೂಪಾಯಿಗೆ ಬೆಲೆ ಸಿಕ್ಕಿದೆ ಮತ್ತು ಇದು ಸಾರಿಗೆ ವೆಚ್ಚವನ್ನು ಸಹ ಭರಿಸುವುದಿಲ್ಲ.ಇದರಿಂದ ಬೇಜಾರಾದ ಆತ ರಸ್ತೆಗೆ ಟೊಮ್ಯಾಟೊಗಳನ್ನು ಎಸೆದಿದ್ದಾನೆ ಎಂದು ಹೇಳಲಾಗಿದೆ. ಕರ್ನಾಟಕದಿಂದ ಕೇರಳ ಮತ್ತು ತಮಿಳುನಾಡಿಗೆ ಹೋಗುವ ತರಕಾರಿ ಲಾರಿಗಳ ಸಂಖ್ಯೆ ಕ್ಷೀಣಿಸಿದೆ ಮತ್ತು ರೈತರು ಬೆಳೆಗೆ ಸ್ಥಳೀಯ ಮಾರುಕಟ್ಟೆಯನ್ನು ಕಂಡುಹಿಡಿಯುವುದು ಕಷ್ಟಕರವಾಗಿದೆ.
ಬೆಳಿಗ್ಗೆ 6 ರಿಂದ 10ರ ವರೆಗಿನ ಕಡಿಮೆ ಸಮಯದಲ್ಲಿ ಮಾರುಕಟ್ಟೆಗೆ ತರುವುದು ಕಷ್ಟವಾಗಿದೆ. ತಂದರೂ ಖರೀದಿಸುವವರೇ ಇಲ್ಲ. ಹೀಗಾಗಿ ರೈತರು ಬೆಳೆದ ಬೆಲೆಗೆ ದರ ಸಿಗದೆ ಕಂಗಾಲಾಗಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement