ಡಿಎಲ್​ಎಫ್​ ಲಂಚ ಪ್ರಕರಣದಲ್ಲಿ ಲಾಲು​​ಗೆ ಕ್ಲೀನ್​ ಚಿಟ್​

ನವ ದೆಹಲಿ : ಬಿಹಾರದ ಮಾಜಿ ಮುಖ್ಯಮಂತ್ರಿ ಮತ್ತು ರಾಷ್ಟ್ರೀಯ ಜನತಾದಳ(ಆರ್​ಜೆಡಿ) ನಾಯಕ ಲಾಲು ಪ್ರಸಾದ್ ಯಾದವ್ ಅವರಿಗೆ ಡಿಎಲ್​ಎಫ್​ ಲಂಚ ಪ್ರಕರಣದಲ್ಲಿ ಸಿಬಿಐ ಕ್ಲೀನ್ ಚಿಟ್ ನೀಡಿದೆ ಎಂದು ವರದಿಯಾಗಿದೆ.
ಎನ್​ಡಿಟಿವಿ ವರದಿ ಮಾಡಿದ್ದು, ವರದಿ ಪ್ರಕಾರ, ಈ ಪ್ರಕರಣದಲ್ಲಿ ಲಾಲು ಪ್ರಸಾದ ಯಾದವ್‌ ಕೇಂದ್ರ ರೈಲ್ವೆ ಸಚಿವರಾಗಿದ್ದಾಗ, ದೆಹಲಿಯ ಐಷಾರಾಮಿ ಬಡಾವಣೆಯ ಪ್ರಾಪರ್ಟಿಯೊಂದನ್ನು ಲಂಚವಾಗಿ ನೀಡಲಾಗಿತ್ತು ಎಂಬ ಆರೋಪದ ತನಿಖೆ ಎದುರಿಸುತ್ತಿದ್ದರು.
ರಿಯಲ್ ಎಸ್ಟೇಟ್ ಡೆವಲಪರ್ ಡಿಎಲ್‌ಎಫ್ ಗ್ರೂಪ್​​ ಮುಂಬೈನ ಬಾಂದ್ರಾದಲ್ಲಿನ ರೈಲ್ವೆ ಭೂಮಿ ಮತ್ತು ನವದೆಹಲಿಯ ರೈಲ್ವೆ ನಿಲ್ದಾಣದ ಅಪ್​ಗ್ರೆಡೇಷನ್ ಯೋಜನೆಗಳನ್ನು ಪಡೆಯುವ ಉದ್ದೇಶ ಹೊಂದಿತ್ತು. ಇದೇ ಸಂದರ್ಭದಲ್ಲಿ ದಕ್ಷಿಣ ದೆಹಲಿಯ ನ್ಯೂ ಫ್ರೆಂಡ್ಸ್​​ ಕಾಲೊನಿಯಲ್ಲಿನ 30 ಕೋಟಿ ರೂ. ಬೆಲೆಯ ಡಿಎಲ್​​ಎಫ್​ ಪ್ರಾಪರ್ಟಿಯನ್ನು ಲಾಲು ಕುಟುಂಬದವರು ಕಂಪೆನಿಯ ಕೇವಲ 4 ಲಕ್ಷ ರೂ.ಗಳ ಶೇರ್​ಗಳ ವರ್ಗಾವಣೆ ಮಾಡಿ ಕೊಳ್ಳುವ ಮೂಲಕ ಪಡೆದುಕೊಂಡಿದ್ದರು ಎಂದು ಆರೋಪಸಲಾಗಿತ್ತು.
ಮೂಲಗಳ ಪ್ರಕಾರ, ಸಿಬಿಐನ ಆರ್ಥಿಕ ಅಪರಾಧ ಶಾಖೆ, 2018 ರ ಜನವರಿಯಲ್ಲಿ, ಭ್ರಷ್ಟಾಚಾರದ ಆರೋಪದ ಮೇಲೆ ಲಾಲು ಮತ್ತು ಡಿಎಲ್‌ಎಫ್ ಗ್ರೂಪ್ ವಿರುದ್ಧ ಪ್ರಾಥಮಿಕ ತನಿಖೆ ಆರಂಭಿಸಿತ್ತು. ಆದರೆ ಎರಡು ವರ್ಷಗಳ ತನಿಖೆಯ ನಂತರ ಆರೋಪಗಳಿಗೆ ಪೂರಕವಾದ ಸಾಕ್ಷ್ಯ​ ಇಲ್ಲದ್ದರಿಂದ ಪ್ರಾಥಮಿಕ ತನಿಖೆಯನ್ನು ಮುಚ್ಚಲಾಗಿದೆ ಎಂದು ಎನ್​ಡಿಟಿವಿ ವರದಿ ಹೇಳಿದೆ.

ಪ್ರಮುಖ ಸುದ್ದಿ :-   ಸ್ಟೀಲ್‌ ತ್ಯಾಜ್ಯದಿಂದ ವಿಶ್ವದ ಅತಿ ಉದ್ದದ ರಸ್ತೆ ನಿರ್ಮಿಸಿದ ಜಿಂದಾಲ್ ಸ್ಟೀಲ್‌ ಕಂಪನಿ ; ಗಿನ್ನೆಸ್ ವಿಶ್ವ ದಾಖಲೆಗೆ ಸೇರ್ಪಡೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement