ಕೊಳ್ಳೇಗಾಲದ ಆಶ್ರಿತಾ ವಾಯುಪಡೆಯ ಮೊದಲ ಮಹಿಳಾ ಫ್ಲೈಟ್ ಟೆಸ್ಟ್ ಇಂಜಿನಿಯರ್..!

ಚಾಮರಾಜನಗರ: ಕೊಳ್ಳೇಗಾಲ ಮೂಲದ ಆಶ್ರಿತಾ ವಿ. ಒಲೆಟಿ ಎಂಬವರು ದೇಶದ ಮೊದಲ ಮಹಿಳಾ ಫ್ಲೈಟ್ ಟೆಸ್ಟ್ ಎಂಜಿನಿಯರ್​​​​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
2014ರಿಂದ ಭಾರತೀಯ ವಾಯುಪಡೆಯ ಟೆಕ್ನಿಕಲ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅವರು ಬೆಂಗಳೂರಿನಲ್ಲಿರುವ ಪ್ರತಿಷ್ಠಿತ ದಿ ಇಂಡಿಯನ್ ಏರ್ ಫೋರ್ಸ್ ಟೆಸ್ಟ್ ಪೈಲಟ್ ಸ್ಕೂಲ್ ನಲ್ಲಿ ಟೆಸ್ಟ್ ಪೈಲಟ್ ಮತ್ತು ಫ್ಲೈಟ್ ಟೆಸ್ಟ್‌ ಇಂಜಿನಿಯರಿಂಗ್ ನಲ್ಲಿ ತರಬೇತಿ ಪಡೆದಿದ್ದಾರೆ. 1973 ರಲ್ಲಿಈ ಕೋರ್ಸ್ ಪ್ರಾರಂಭವಾದಾಗಿನಿಂದ ಈ ಕೋರ್ಸ್ ಅನ್ನು ಪೂರ್ಣಗೊಳಿಸಿದವರು ಕೇವಲ 275 ವಿದ್ಯಾರ್ಥಿಗಳು ಮಾತ್ರ.
ಆಶ್ರಿತಾ ಒಲೆಟಿ ಭಾರತೀಯ ವಾಯುಪಡೆಯ ಇತಿಹಾಸದಲ್ಲಿ ಕಠಿಣ ತರಬೇತಿಯ ನಂತರ ಈ ಕೋರ್ಸ್ ಅನ್ನು ಪೂರ್ಣಗೊಳಿಸಿದ ಮೊದಲ ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇನ್ನು ಮುಂದೆ ಏರ್ ಕ್ರಾಫ್ಟ್ ಅಂಡ್ ಸಿಸ್ಟಂ ಟೆಸ್ಟಿಂಗ್ ಎಸ್ಟಾಬ್ಲಿಷ್ಮೆಂಟ್ ನಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ. ಹೊಸ ವಿಮಾನ ಮತ್ತು ವ್ಯವಸ್ಥೆಗಳನ್ನು ಮೌಲ್ಯಮಾಪನ ಮಾಡುವುದು ಫ್ಲೈಟ್ ಟೆಸ್ಟ್ ಎಂಜಿನಿಯರ್‌ಗಳ ಕರ್ತವ್ಯವಾಗಿದೆ. ಅಲ್ಲದೆ ಯಾವುದೇ ಹೊಸ ವಿಮಾನ ಮತ್ತು ಪ್ರಮುಖ ವಾಯುಗಾಮಿ ವ್ಯವಸ್ಥೆಗಳು ಭಾರತದಲ್ಲಿ ಸೇವೆಗೆ ಸೂಕ್ತವೆಂದು ಪರಿಗಣಿಸಲು ಏರ್ ಕ್ರಾಫ್ಟ್ ಅಂಡ್ ಸಿಸ್ಟಂ ಟೆಸ್ಟಿಂಗ್ ಎಸ್ಟಾಬ್ಲಿಷ್ಮೆಂಟ್ (ASTE) ಅನುಮೋದನೆಯ ಹೊಂದಿರಬೇಕು. ಕೊಳ್ಳೇಗಾಲದ ವೆಂಕಟೇಶ್ವರ ಜ್ಯುವೆಲರ್ಸ್ ಮಾಲೀಕ ವಿ.ವೆಂಕಟೇಶ್ ಬಾಬು ಮತ್ತು ಒ.ವಿ.ವಾಣಿ ಅವರ ಪುತ್ರಿಯಾದ ಆಶ್ರಿತಾ ಕೊಳ್ಳೇಗಾಲದಲ್ಲಿ ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾಭ್ಯಾಸ ಮುಗಿಸಿದ್ದಾರೆ. ನಂತರ ಮೈಸೂರಲ್ಲಿ ಪಿಯುಸಿ ಹಾಗೂ ಬೆಂಗಳೂರಿನ ಇಂಜಿನಿಯರಿಂಗ್ ವ್ಯಾಸಂಗ ಮಾಡಿ ವಾಯುಪಡೆಯು ಟೆಕ್ನಿಕಲ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಟೆಸ್ಟ್‌ ಪೈಲಟ್ ಎಂದರೆ ಹಳೆಯ ಅಥವಾ ಚಾಲ್ತಿಯಲ್ಲಿರುವ ಅಥವಾ ಹೊಸ‌ ಯುದ್ಧ ಹಾಗೂ ಸರಕು ವಿಮಾನಗಳು ಮತ್ತು ಹೆಲಿಕಾಪ್ಟರ್ ಗಳು ರಿಪೇರಿ ಅಥವಾ ಕಾಲಕಾಲಕ್ಕೆ ನಿರ್ವಹಣೆಗೊಳಪಟ್ಟಾಗ, ಆ ಕಾರ್ಯ ಮುಗಿದ ನಂತರ, ಅಂತಹ ಯುದ್ಧ ಅಥವಾ ಸರಕು‌ ವಿಮಾನ ಹಾರಾಡಲು ಯೋಗ್ಯವೇ ಎಂಬುದನ್ನು ಈ ಟೆಸ್ಟ್‌ ಪೈಲಟ್‌ಗಳು ವಿಮಾನವನ್ನು ಹಾರಿಸಿ, ದೃಢೀಕರಣ ನೀಡಬೇಕು. ವಿಮಾನ ಪ್ರಮಾಣಪತ್ರ ಪಡೆಯಲು ವಿಫಲವಾದಲ್ಲಿ ಮತ್ತೆ ಟೆಸ್ಟ್ ಪೈಲಟ್ ನೀಡುವ ವರದಿಯನುಸಾರ ಮತ್ತೆ ಪರಿಶೀಲಿಸಿ ದುರಸ್ತಿಗೊಳಿಸಿ ಮತ್ತೆ ಟೆಸ್ಟ್ ಪೈಲಟ್‌ ನಿಂದ ಪರೀಕ್ಷೆಗೊಳಪಡಬೇಕು

ಪ್ರಮುಖ ಸುದ್ದಿ :-   ಗದಗ: ನಗರಸಭೆ ಉಪಾಧ್ಯಕ್ಷೆ ಪುತ್ರ ಸೇರಿ ನಾಲ್ವರ ಭೀಕರ ಹತ್ಯೆ

3 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement