ಬೆಂಗಳೂರು : ರಾಜ್ಯ ಸರ್ಕಾರ ತನ್ನ ವ್ಯಾಕ್ಸಿನೇಷನ್ ನೀತಿಯನ್ನು ಮತ್ತೆ ಬದಲಾಯಿಸಿದೆ. 18-44 ವಯೋಮಾನದವರಿಗೆ ವ್ಯಾಕ್ಸಿನೇಷನ್ ಪ್ರಕ್ರಿಯೆಯನ್ನು ಪುನರಾರಂಭಿಸುವುದಾಗಿ ಘೋಷಿಸಿದ ಎರಡು ದಿನಗಳ ನಂತರ, ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್ಎಚ್ಎಂ) ಸ್ಪಷ್ಟೀಕರಣ ನೀಡಿ, ಲಸಿಕೆಗಳು ಪ್ರಸ್ತುತ ಲಭ್ಯವಿಲ್ಲ ಮತ್ತು ಮುಂಚೂಣಿ ಕಾರ್ಯಕರ್ತರು, ದುರ್ಬಲ ವರ್ಗದಂತಹಾ ಆದ್ಯತೆಯವರಿಗೆ ಗುರುತಿಸಲಾಗಿರುವ ಸದಸ್ಯರಿಗೆ ಲಸಿಕೆ ನೀಡುವ ದಿನಾಂಕ ಮತ್ತು ಸಮಯದ ಬಗ್ಗೆ ನೋಡಲ್ ಅಧಿಕಾರಿಗೆ ತಿಳಿಸಲಾಗುವುದು ಎಂದು ಸ್ಪಷ್ಟಪಡಿಸಿದೆ.
ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಈ ಹಿಂದೆ ಟ್ವೀಟ್ ಮಾಡಿ “ಮೇ 22 ರಿಂದ 18-44 ವಯೋಮಾನದವರಿಗೆ ಲಸಿಕಾಕರಣ ಪುನಾರಂಭವಾಗಲಿದೆ ಎಂದು ತಿಳಿಸಿದ್ದರು.
ರಾಜ್ಯ ಸರ್ಕಾರ ಗುರುತಿಸಿದ ಮುಂಚೂಣಿ ಕಾರ್ಯಕರ್ತರು ಮತ್ತು ಆದ್ಯತೆಯ ವರ್ಗಕ್ಕೆ ಮೊದಲ ಪ್ರಾಧಾನ್ಯತೆಯಲ್ಲಿ ಲಸಿಕೆ ನೀಡಲಾಗುತ್ತದೆ” ಎಂದಿದ್ದರು.
ವ್ಯಾಕ್ಸಿನೇಷನ್ ಪ್ರಕ್ರಿಯೆಯಲ್ಲಿ “ಸಾರ್ವಜನಿಕರಲ್ಲಿ ಕೆಲವು ಗೊಂದಲಗಳು” ಇರುವುದರಿಂದ ಸ್ಪಷ್ಟೀಕರಣವನ್ನು ನೀಡಲಾಗುತ್ತಿದೆ ಎಂದು ಎನ್ಎಚ್ಎಂ ನಿರ್ದೇಶಕರು ಹೇಳಿದ್ದಾರೆ. ಯಾರು ಲಸಿಕೆ ಪಡೆಯುತ್ತಾರೆ ಎಂದು ಸಹ ಪಟ್ಟಿ ಮಾಡಲಾಗಿದೆ. 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಕೋವಿಶೀಲ್ಡ್ ನ ಮೊದಲ ಡೋಸ್ “ನಗರ ಪ್ರದೇಶಗಳಲ್ಲಿ ಆನ್ಲೈನ್ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸ್ಥಳದಲ್ಲೇ ನೊಂದಣಿಯೊಂದಿಗೆ ಲಭ್ಯವಿದೆ, ಆದರೆ ಕೋವಿಶೀಲ್ಡ್ ನ ಎರಡನೇ ಡೋಸ್ ಅಗತ್ಯವಾಗಿರುವವರು ಹತ್ತಿರದ ವ್ಯಾಕ್ಸಿನೇಷನ್ ಕೇಂದ್ರಕ್ಕೆ ಹೋಗಬಹುದು ಎಂದು ಹೇಳಲಾಗಿದೆ.
ಆದರೆ ಕೊವಾಕ್ಸಿನ್ನ ಮೊದಲ ಡೋಸ್ “ಪ್ರಸ್ತುತ ಲಭ್ಯವಿಲ್ಲ” ಮತ್ತು ಅವರ ಎರಡನೇ ಡೋಸ್ಗಾಗಿ ಕಾಯುತ್ತಿರುವವರಿಗೆ ಎಸ್ಎಂಎಸ್ ಮೂಲಕ ತಿಳಿಸಲಾಗುವುದು ಎಂದು ಅವರು ಹೇಳಿದ್ದಾರೆ. ತಯಾರಕರಿಗೆ ನೇರವಾಗಿ ನೀಡಿರುವ ಆರ್ಡರ್ ಮೇಲೆ ರಾಜ್ಯಕ್ಕೆ 2,04,050 ಡೋಸ್ ಕೋವಿಶೀಲ್ಡ್ ಆಗಮಿಸಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ