ಬಾಬಾ ರಾಮದೇವ್‌ಗೆ 1,000 ಕೋಟಿ ರೂ. ಮಾನಹಾನಿ ನೋಟಿಸ್ ಕಳುಹಿಸಿದ ಐಎಂಎ ಉತ್ತರಾಖಂಡ

ಹೊಸದಿಲ್ಲಿ: ಅಲೋಪತಿ ಔಷಧದ ಕುರಿತು ಇತ್ತೀಚೆಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ಉತ್ತರಾಖಂಡ ವಿಭಾಗದ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಯೋಗ ಗುರು ರಾಮ್‌ದೇವ್‌ ಅವರಿಗೆ 1,000 ಕೋಟಿ ರೂ. ಮಾನಹಾನಿ ನೋಟಿಸ್ ಕಳುಹಿಸಿದೆ.
ಅಲೋಪತಿ ವೈದ್ಯರ ಬಗ್ಗೆ ರಾಮ್‌ದೇವ್‌ ವಿವಾದಾತ್ಮಕ ಹೇಳಿಕೆ ನೀಡಿದ ನಂತರ ಈ ಬೆಳವಣಿಗೆ ನಡೆದಿದೆ.
ರಾಮದೇವ್‌ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಭಾರತೀಯ ವೈದ್ಯಕೀಯ ಸಂಗ ಕೇಂದ್ರದ ಆರೋಗ್ಯ ಸಚಿವ ಡಾ.ಹರ್ಷವರ್ಧನ ಅವರಿಗೆ ಪತ್ರ ಬರೆದಿತ್ತು. ಸೋಮವಾರ, ಉತ್ತರಾಖಂಡ ವಿಭಾಗದ ಐಎಂಎ ರಾಜ್ಯ ಘಟಕದ ಅಧ್ಯಕ್ಷ ಡಾ.ಅಜಯ್ ಖನ್ನಾ ಅವರು ಮುಖ್ಯಮಂತ್ರಿ ತಿರಥ್ ​​ಸಿಂಗ್ ರಾವತ್ ಅವರಿಗೆ ಬರೆದ ಪತ್ರದಲ್ಲಿ ಒತ್ತಾಯಿಸಿದ್ದರು. ಆನಂತರದಲ್ಲಿ ಕೇಂದ್ರ ಆರೋಗ್ಯ ಸಚಿವರು ಬಾಬಾ ರಾಮದೇವ್‌ ಅಲೋಪತಿ ವೈದಯರ ಬಗೆಗಿನ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿ ರಾಮದೇವ್‌ ಅವರಿಗೆ ಪತ್ರ ಬರೆದಿದ್ದರು ಹಾಗೂ ಹೇಳಿಕೆ ಹಿಂಪಡೆಯುವಂತೆ ಒತ್ತಾಯಿಸಿದ್ದರು.
ತಾನು ನೀಡಿದ ಹೇಳಿಕೆಗೆ ಪ್ರತಿಯಾಗಿ ವಿಡಿಯೊವನ್ನು ಪೋಸ್ಟ್ ಮಾಡದಿದ್ದರೆ ಹಾಗೂ ಮುಂದಿನ 15 ದಿನಗಳಲ್ಲಿ ಲಿಖಿತ ಕ್ಷಮೆಯಾಚನೆ ಮಾಡದಿದ್ದರೆ ರಾಮ್‌ದೇವ್‌ ಅವರಿಂದ 1,000 ಕೋಟಿ ರೂ.ಮಾನನಷ್ಟ ಪರಿಹಾರಕ್ಕಾಗಿ ಬೇಡಿಕೆ ಇಡಲಾಗುವುದು ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ.
ಐಎಂಎ ಪರವಾಗಿ ರಾಮ್‌ದೇವ್‌ ಅವರಿಗೆ ಮಾನನಷ್ಟ ನೋಟಿಸ್ ಕಳುಹಿಸಲಾಗುತ್ತಿದೆ ಎಂದು ಡಾ.ಅಜಯ್ ಖನ್ನಾ ಹೇಳಿದ್ದಾರೆ.
ಆರೋಗ್ಯ ಸಚಿವ ಹರ್ಷ ವರ್ಧನ್ ಅವರ ಪತ್ರದ ನಂತರ ತಮ್ಮ ಹೇಳಿಕೆಯನ್ನು ಹಿಂತೆಗೆದುಕೊಂಡ ನಂತರ ರಾಮ್‌ದೇವ್‌ ಸೋಮವಾರ ಐಎಂಎಗೆ 25 ಪ್ರಶ್ನೆಗಳನ್ನು ಕೇಳಿದ್ದರು.

ಪ್ರಮುಖ ಸುದ್ದಿ :-   ಭಾರತ ತಂಡದ ಕ್ರಿಕೆಟ್‌ ಆಟಗಾರ ರಿಂಕು ಸಿಂಗ್–ಸಂಸದೆ ಪ್ರಿಯಾ ಸರೋಜ ಮದುವೆಗೆ ಮುಹೂರ್ತ ಫಿಕ್ಸ್

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement