ಬೆಂಗಳೂರು: ರಾಜ್ಯ ನಾಯಕತ್ವ ಬದಲಾವಣೆ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತನಾಡಿದ್ದಾರೆ.
ಈಗ ನನ್ನೆದುರಿಗೆ ಇರುವುದು ಕೊರೊನಾ ಸವಾಲು ಮಾತ್ರ. ಅದನ್ನು ಎದುರಿಸಲು ಏನೇನು ಕ್ರಮ ತೆಗೆದುಳ್ಳಬೇಕೋ ಅದನ್ನು ತೆಗೆದುಕೊಳ್ಳುತ್ತೇನೆ, ಅದನ್ನು ಹೊರತು ಪಡಿಸಿ ಸದ್ಯಕ್ಕೆ ನನ್ನ ಬಳಿ ಬೇರೆ ಏನೂ ಆಲೋಚನೆಗಳಿಲ್ಲ ಎಂದು ಜಾಣತನದ ಉತ್ತರ ನೀಡಿದ್ದಾರೆ.
ಈ ಕುರಿತು ಸುದ್ದಿಗರಾರರ ಪ್ರಶ್ನೆಗೆ ಉತ್ತರಿಸಿದ ಅವರು, ದೆಹಲಿಗೆ ಹೋಗಿ ಬಂದವರಿಗೆ ಹೈಕಮಾಂಡ್ನವರೇ ಉತ್ತರ ಕೊಟ್ಟು ಕಳುಹಿಸಿದ್ದಾರೆ. ಶಾಸಕಾಂಗ ಸಭೆ ಕುರಿತು ಮಾಧ್ಯಮದ ಮುಂದೆ ಚರ್ಚಿಸುವುದಿಲ್ಲ ಎಂದು ಖಡಕ್ ಉತ್ತರ ನೀಡಿದ್ದಾರೆ.
ನನಗೆ ಸದ್ಯ ಕೊರೊನಾ ಎದುರಿಸುವುದು ಮೊದಲ ಕೆಲಸ, ಕೇವಲ ನಾನಷ್ಟೇ ಅಲ್ಲ, ಸಚಿವರು ಹಾಗೂ ಶಾಸಕರು ಒಟ್ಟಾಗಿ ಕೋವಿಡ್ ಎದುರಿಸಲು ಆದ್ಯತೆ ಮೇರೆಗೆ ಕೆಲಸ ಮಾಡಬೇಕು ಎಂದು ಸೂಚಿಸಿದರು.
ಕೋವಿಡ್ ಸಂಕಷ್ಟದ ಮಧ್ಯೆಯೇ ರಾಜ್ಯದ ಆಡಳಿತಾರೂಢ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಕೆಲವು ಶಾಸಕರು ತೆರೆ ಮರೆಯ ಪ್ರಯತ್ನ ಆರಂಭಿಸಿದ್ದಾರೆ ಎನ್ನುವ ಮಾತು ಕೇಳಿಬಂದಿದೆ.ಆದರೆ ಇದನ್ನು ಬಿಜೆಪಿ ಶಾಸಕರು, ಸಚಿರು ಅಲ್ಲಗಳೆದಿದ್ದಾರೆ, ಅಂತಹ ಯಾವುದೇ ಚರ್ಚೆಗಳು ನಮ್ಮಲ್ಲಿ ನಡೆಯುತ್ತಿಲ್ಲ ಎಂದು ಹೇಳಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ