ಹುಬ್ಬಳ್ಳಿ: ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಈಗ ಖಾಲಿ ಇಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಸಮರ್ಥರಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪನವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ವಯಸ್ಸಿನ ಕಾರಣ ಹೇಳಿ ಅವರನ್ನು ಕೆಳಗಿಳಿಸುವುದು ಸೂಕ್ತವಲ್ಲ ಎಂದು ಹೇಳಿದರು.
ರಾಜ್ಯದ ನಾಯಕತ್ವ ಬದಲಾವಣೆ ಬಗ್ಗೆ ಯಾವುದೇ ಚರ್ಚೆಯೂ ಆಗಿಲ್ಲ. ನಾನು ಕೇಂದ್ರ ಸಚಿವನಾಗಿರುವುದರಿಂದ ರಾಜ್ಯದ ಹಲವಾರು ಜನ ಬಂದು ನನ್ನನ್ನು ಭೇಟಿಯಾಗ್ತಾರೆ. ಕೇಂದ್ರದಿಂದ ಆಗಬೇಕಿರುವ ಕೆಲಸದ ಬಗ್ಗೆ ಕೇಳಿಕೊಂಡು ಬರ್ತಾರೆ ಎಂದರು.
ಈಗ ನಮ್ಮ ಆದ್ಯತೆ ಕೊರೊನಾ ನಿಯಂತ್ರಿಸುವುದು. ನಮಗೆ ಉಳಿದ್ದೆಲ್ಲ ಮುಖ್ಯವಲ್ಲ. ಆ ಕೆಲಸವನ್ನು ನಾವು ಮಾಡುತ್ತಿದ್ದೇವೆ ಎಂದರು.
ಕಾಂಗ್ರೆಸ್ ನಲ್ಲಿ ಸಮರ್ಥರ ಸಂಖ್ಯೆ ಜಾಸ್ತಿ ಇದೆ. ಅದಕ್ಕೆ ಅವರು ಬಡಿದಾಡುತ್ತಿದ್ದಾರೆ. ಅವರು ಬಡಿದಾಡುತ್ತಲೇ ಇರಲಿ ಎಂದು ವ್ಯಂಗ್ಯವಾಡಿದರು.


ನಿಮ್ಮ ಕಾಮೆಂಟ್ ಬರೆಯಿರಿ