ಕುಮಟಾ: ಆರ್ ಎಸ್ಎಸ್ ನ ಸೇವಾ ಭಾರತಿ ಕುಮಟಾ ಘಟಕವು ಕೊರೊನಾ ಸಾಂಕ್ರಾಮಿಕ ರೋಗದ ಹೋರಾಟದಲ್ಲಿ ಮಾನವೀಯ ಕಾರ್ಯ ಮಾಡುತ್ತಿದ್ದು, ಜನ ಮೆಚ್ಚುಗೆಗೆ ಕಾರಣವಾಗಿದೆ.
ಪೊಲೀಸ್ ಸಿಬ್ಬಂದಿ, ರಕ್ತ ದಾನಿಗಳು, ಆಸ್ಪತ್ರೆ ಸಿಬ್ಬಂದಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಸರಕು ಸಾಗಿಸುವ ವಾಹನ ಚಾಲಕರು ಹಾಗೂ ಕ್ಲೀನರುಗಳಿಗೆ ಆಹಾರ, ಶುದ್ಧ ಕುಡಿಯುವ ನೀರಿನ ಬಾಟಲ್ಗಳನ್ನು ನೀಡಲಾಗುತ್ತಿದೆ. ಇದನ್ನು ಅನೇಕ ದಿನಗಳಿಂದ ಪ್ರತಿದಿನವೂ ಮಾಡಿಕೊಂಡು ಬರಲಾಗುತ್ತಿದೆ.
.ಈ ರೀತಿ ರಾಷ್ಟ್ರೀಯ ಹೆದ್ದಾರಿ ಯಲ್ಲಿ ಹಸಿದು ಸಾಗುವವರಿಗೆ ಆಹಾರ ನೀಡುತ್ತಿರುವದು ಉತ್ತರಕನ್ನಡ ಜಿಲ್ಲೆಯಲ್ಲಿಯೇ ಪ್ರಥಮ ಎನ್ನಲಾಗಿದೆ. ಯಾರೇ ಬಂದರೂ ಅವರಿಗೆ ಆಹಾರ ಪೊಟ್ಟಣಗಳು ,ನೀರು ಹಾಗೂ ಇತರ ಅವಶ್ಯಕತೆಗಳನ್ನು ಒದಗಿಸಲಾಗುತ್ತಿದೆ. ಹಸಿದವರಿಗೆ ಆಹಾರ ನೀಡುವ ಈ ಕಾರ್ಯದಲ್ಲಿ ಆರ್ ಎಸ್.ಎಸ್ ಸಂಘಟನೆ ಜೊತೆ ನೊಂದಿಗೆ ಕೊಂಕಣ ಎಜುಕೇಶನ್ ಟ್ರಸ್ಟ್, ಇತರ ಸಂಘಟನೆಗಳವರು ಕೈಜೋಡಿಸಿದ್ದಾರೆ..


ನಿಮ್ಮ ಕಾಮೆಂಟ್ ಬರೆಯಿರಿ