ಕೊರೊನಾ ಸೋಂಕಿನ ಪ್ರಮಾಣ ಶೇ.10ಕ್ಕಿಂತ ಕಡಿಮೆ ಬರುವ ತನಕ ಲಾಕ್ಡೌನ್ ಸಡಿಲಿಕೆಯಿಲ್ಲ..ಇದು ಮುಂದುವರಿಸುವ ಮುನ್ಸೂಚನೆಯೇ..?

ಬೆಂಗಳೂರು : ಕೋವಿಡ್ – 19 ಸೋಂಕಿನ ಪ್ರಮಾಣ ಶೇಕಡಾ 10ಕ್ಕಿಂತ ಕಡಿಮೆ ಬರುವ ತನಕ ರಾಜ್ಯದಲ್ಲಿ ಲಾಕ್ ಡೌನ್ ನಲ್ಲಿ ಸಡಿಲಿಕೆ ಮಾಡುವುದಿಲ್ಲ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು ಪ್ರಸ್ತುತ ರಾಜ್ಯದಲ್ಲಿ ಸೋಂಕಿನ ದರ ಶೇ 10.ಕ್ಕಿಂತಲೂ ಹೆಚ್ಚಾಗಿದೆ. ಇದು ಶೇ 10 ಕ್ಕಿಂತ ಕಡಿಮೆ ಬರುವ ತನಕ ಲಾಕ್ ಸಡಿಲಿಕೆ ಇಲ್ಲ. ಈಗಿರುವ ಕಠಿಣ ನಿಯಮಗಳು ಮುಂದುವರೆಯಲಿವೆ ಎಂದು ಹೇಳಿದರು.
ನಮ್ಮ ಗುರಿ ಸೋಂಕು ಕಡಿಮೆ ಪ್ರಮಾಣ ಕಡಿಮೆ ಮಾಡುವುದು .ಜೂನ್ 7 ರ ವರೆಗೆ ಇರುವ ಲಾಕ್ ಡೌನ್ ಇದೆ. ಸದ್ಯಕ್ಕೆ ಯಾವುದೇ ಬದಲಾವಣೆ ಇಲ್ಲ‌ ಎಂದು
ಸ್ಪಷ್ಟಪಡಿಸಿದರು.
ಈಗಾಗಲೇ ಕೇಂದ್ರ ಗೃಹ ಇಲಾಖೆ ಜೂನ್ 30ರ ತನಕ ಕಠಿಣ ಕ್ರಮಕ್ಕೆ ಸೂಚನೆ ನೀಡಿದೆ. ಹೀಗಾಗಿ ಇದರ ಬಗ್ಗೆ ರಾಜ್ಯದಲ್ಲಿ ಅನುಷ್ಠಾನ ಮಾಡುವ ಸಂಬಂಧ ಸಭೆ ನಿರ್ಧಾರ ಮಾಡಲಿದೆ ಎಂದು ಹೇಳಿದರು. ಮುಖ್ಯಮಂತ್ರಿಗಳು ಎಲ್ಲ ಸಚಿವರ ಜೊತೆ ಸಭೆ ನಡೆಸುವ ತೀರ್ಮಾನ ಮಾಡಿದ್ದು, ಶೀಘ್ರವೇ ಸಚಿವರ ಜೊತೆ ಸಭೆ ನಡೆಸಿ, ಈ ಕುರಿತುತೀರ್ಮಾನ ಮಾಡಲಿದ್ದಾರೆ ಎಂದು ತಿಳಿಸಿದರು.
ಶುಕ್ರವಾರ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ಕರ್ನಾಟಕದ ಪಾಲು 11000 ಕೋಟಿ ರೂ. ಕೊಡುವಂತೆ ಒತ್ತಾಯ ಮಾಡಲಾಗಿದೆ. ಕೇಂದ್ರ ಸರ್ಕಾರ ಶೀಘ್ರವೇ ಬಿಡುಗಡೆ ಮಾಡುವ ನಿರೀಕ್ಷೆ ಇದೆ. ಲಾಕ್ ಡೌನ್ ಸಮಯದಲ್ಲಿ ಆಗಿರುವ ಆರ್ಥಿಕ ನಷ್ಟ ಪರಿಹಾರ ನೀಡುವಂತೆ ಮನವಿ ಮಾಡಲಾಗಿದೆ‌.ಕಳೆದ ಬಾರಿಯ ಲಾಕ್ ಡೌನ್ ನಲ್ಲೂ ಕೂಡ ಸಾಕಷ್ಟು ನಷ್ಟ ಉಂಟಾಗಿತ್ತು ಎಂದರು.
ಈ ಸಲದ ಲಾಕ್ ಡೌನ್ ನಿಂದ ಸಾಕಷ್ಟು ನಷ್ಟ ಆಗುವ ನಿರೀಕ್ಷೆ ಇದೆ.ಈ ಬಗ್ಗೆ ತಜ್ಞರು ಸಮಿತಿ ವರದಿ ಪಡೆದು, ಮುಂದಿನ ಸಭೆಯಲ್ಲಿ ಪರಿಹಾರ ಪ್ರಮಾಣ ನಿಗದಿ ಮಾಡುವ ನಿರೀಕ್ಷೆ ಇದೆ. ಸಂಕಷ್ಟದಲ್ಲಿ ರಾಜ್ಯವು ಸರ್ಕಾರಕ್ಕೆ ಕೇಂದ್ರದ ನೆರವಿನ ನಿರೀಕ್ಷೆಯಲ್ಲಿದೆ ಎಂದು ತಿಳಿಸಿದರು.

ಪ್ರಮುಖ ಸುದ್ದಿ :-   ಹೊನ್ನಾವರದ ಪ್ರಕೃತಿಯ ‘ಮಾಯಾಲೋಕ’ಕ್ಕೆ ಆನಂದ ಮಹೀಂದ್ರಾ ಫಿದಾ ! ಕೇರಳದ ಹಿನ್ನೀರಿನಷ್ಟೇ ಸುಂದರ ಎಂದ ಉದ್ಯಮಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement