ನನ್ನ ಕೋಳಿಗೆ ಭೇದಿ ಶುರುವಾಗ್ಬಿಟ್ಟಿದೆ .. ಅದ್ಕೆ ಆಸ್ಪತ್ರೆಗೆ ಹೋಗ್ತಾ ಇದ್ದೀನಿ: ವ್ಯಕ್ತಿ ಉತ್ತರಕ್ಕೆ ಪೊಲೀಸರೇ ಸುಸ್ತು..!

ಗದಗ: ಲಾಕ್‌ಡೌನ್‌ ಸಮಯದಲ್ಲಿ ಮನೆಯಿಂದ ಹೊರಬರಲು ಜನರು ಏನೆಲ್ಲ ಕಾರಣಗಳನ್ನು ಹುಡುಕುತ್ತಾರೆ. ಏನೆಲ್ಲ ಮಾಡಿ ಅಡ್ಡಾಡಲು ಕಾರಣ ಹುಡುಕುತ್ತಾರೆ.
ಗದಗ ಜಿಲ್ಲೆಯಲ್ಲಿಯೂ ಇಂಥದ್ದೇಒಂದು ಘಟನೆ ನಡೆದಿದೆ. ಆದರೆ ಇಲ್ಲಿ ವ್ಯಕ್ತಿಯೊಬ್ಬ ಪೊಲೀಸರನ್ನು ಯಾಮಾರಿಸಲು ಕೊಟ್ಟ ಕಾರಣವೋ ಅಥವಾ ಅವನ ಮುಗ್ಧತೆಯೋ ಆತ ಕೊಟ್ಟ ಉತ್ತರಕ್ಕೆ ಪೊಲೀಸರಷ್ಟೇ ಅಲ್ಲ, ಅದನ್ನು ಕೇಳಿದ ಪ್ರತಿಯೊಬ್ಬರೂ ಹೌಹಾರುತ್ತಾರೆ. ಆತ ಕೊಟ್ಟ ಕಾರಣಕ್ಕೆ ಬಿದ್ದು ಬಿದ್ದು ನಗುತ್ತಾರೆ.
ಗದಗ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‌ಡೌನ್‌  ಜಾರಿ ಮಾಡಿದ್ದು, ಗದಗದಲ್ಲಿ ವ್ಯಕ್ತಿಯೊಬ್ಬ ಲಾಕ್‌ಡೌನ್‌ನಲ್ಲಿ ಹೊರ ಹೋಗುತ್ತಿದ್ದಾಗ ಪೊಲೀಸರು ತಡೆದು ವಿಚಾರಿಸಿದ್ದಾರೆ. ಅದಕ್ಕೆ ಆತ ಕೊಟ್ಟ ಉತ್ತರಕ್ಕೆ ಅವರೇ ಗಾಬರಿಯಾಗಿದ್ದಾರೆ.

ಅವರ ಪ್ರಶ್ನೆಗೆ ಆತ ಕೋಳಿಯನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗುವುದಾಗಿ ಹೇಳಿದ್ದಾನೆ. ನಂತರದಲ್ಲಿ ಅದಕ್ಕೆ ಏನಾಗಿದೆ ಎಂದು ಆಸ್ಪತ್ರೆಗೆ ತೆಗೆದುಕೊಂಡು ಹೋಗುತ್ತಿದ್ದಿಯಾ ಎಂದು ಕೇಳಿದ್ದಾರೆ. ಅದಕ್ಕೆ ಆತ ಕೊಟ್ಟ ಹೋಗುತ್ತಿರುವಿದಾಗಿ ಹೇಳ್ತಾನೆ. ಅದಕ್ಕೆ ಆತ ಕೋಳಿಗೆ ಭೇದಿಯಾಗಿದೆ.ಅದು ಪದೇ ಪದೇ ಸಂಡ್‌ ಮಾಉತ್ತಿದೆಯಂತೆ. ಎರಡು ದಿನದಂದಿ  ಕೊಳಿಗೆ ಭೇದಿ ಆಗ್ತಿದೆಯಂತೆ. ಅದಕ್ಕೆ ಅದನ್ನು ತೆಗೆದುಕೊಂಡು ಆಸ್ಪತ್ರೆಗೆ ಹೋಗುತ್ತಿದ್ದೇನೆ ಎಂದು ಹೇಳಿದ್ದಾನೆ.   ಇವನ ಉತ್ತರ ಕೇಳಿದ್ದೇ ತಡ ಪೊಲೀಸರು ಬಿದ್ದು ಬಿದ್ದು ನಕ್ಕಿದ್ದಾರೆ. ನೀವೂ ಈ ವಿಡಿಯೋ ನೋಡಿ ಒಮ್ಮೆ ನಕ್ಕು ಬಿಡಿ ಅಷ್ಟೆ.

ಪ್ರಮುಖ ಸುದ್ದಿ :-   ಹೊನ್ನಾವರದ ಪ್ರಕೃತಿಯ ‘ಮಾಯಾಲೋಕ’ಕ್ಕೆ ಆನಂದ ಮಹೀಂದ್ರಾ ಫಿದಾ ! ಕೇರಳದ ಹಿನ್ನೀರಿನಷ್ಟೇ ಸುಂದರ ಎಂದ ಉದ್ಯಮಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement