ಒಂದುವೇಳೆ ಮಕ್ಕಳಿಗೆ ಸೋಂಕು ತಗುಲಿದರೆ ಅವರಿಗೂ ಕೋವಿಡ್‌ ಲಸಿಕೆ : ಸಚಿವ ಸುಧಾಕರ

ಬೆಂಗಳೂರು : ಒಂದು ವೇಳೆ ಮಕ್ಕಳಿಗೆ ಸೋಂಕು ಬಂದರೆ ಅವರಿಗೂ ಲಸಿಕೆ ನೀಡಲಾಗುವುದು ಎಂದು ಆರೋಗ್ಯ ಖಾತೆ ಸಚಿವ ಡಾ.ಕೆ.ಸುಧಾಕರ್ ಹೇಳಿದರು. ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈಗ ಮಕ್ಕಳ ಮೇಲೆ ಪ್ರಯೋಗ ಮಾಡಲಾಗುತ್ತಿದೆ.ಅನೇಕ ಲಸಿಕಾ ಕಂಪನಿಗಳು ಕೆಲವೆಡೆ ಟ್ರಯಲ್ ರನ್ ಮಾಡುತ್ತಿವೆ ಎಂದು ತಿಳಿಸಿದರು.
ಎಲ್ಲವನ್ನೂ ನೋಡಿಕೊಂಡು ನಮ್ಮ ಮಕ್ಕಳಿಗೂ ಲಸಿಕೆ ಹಾಕಿಸಲಾಗುವುದು.ಹಿರಿಯರಿಗೆ ಮೊದಲು, ನಂತರ ಜನರನ್ನ ಸಂಪರ್ಕಿಸುವ ವೃತ್ತಿಯವರಿಗೆ ಜೊತೆ ಜೊತೆಯಲ್ಲಿ ಎಲ್ಲರಿಗೂ ನೀಡುತ್ತೇವೆ. ಎಲ್ಲರಿಗೂ ಲಸಿಕೆ ಪ್ರಕ್ರಿಯೆ ಮುಗಿಯುವ ವರೆಗೂ, ಮಾಸ್ಕ್ ಕಡ್ಡಾಯವಾಗಿ ಹಾಕುವಂತೆ ಮನವಿ ಮಾಡಿದರು.
ಲಾಕ್ ಡೌನ್ ಅಂತ್ಯದ ವಿಚಾರವಾಗಿ ಮಾತನಾಡಿದ ಅವರು,ಲಾಕ್ ಡೌನ್‌ನಿಂದ ಏನೆಲ್ಲ ಒಳ್ಳೆಯದಾಗಿದೆ ಎನ್ನುವುದು ಗೊತ್ತಿದೆ. ಶೇ.47ರಷ್ಟಿದ್ದ ಪಾಸಿಟಿವ್, ಕಳೆದ ಹದಿನೈದು ದಿನದಲ್ಲಿ 14-15ಕ್ಕೆ ಇಳಿದಿದೆ ಎಂದು ಸುಧಾಕರ್ ಮಾಹಿತಿ ನೀಡಿದರು.
ಬೇರೆ ರಾಜ್ಯಗಳಲ್ಲಿ ನಮಗಿಂತ ಹೆಚ್ಚಿದ್ದ ಪ್ರಕರಣದಲ್ಲಿ ಈಗ 8 ಪರ್ಸೆಂಟಿಗೆ ಬಂದಿದೆ. ಇದೆಲ್ಲವನ್ಮೂ ನೋಡಿಕೊಂಡು, ತಾಂತ್ರಿಕ ಸಲಹಾ ಸಮಿತಿ ಜೊತೆ ಚರ್ಚೆ ಮಾಡಲಾಗುವುದು. ಅಂತಿಮವಾಗಿ ಮುಖ್ಯಮಂತ್ರಿಗಳು ನಿರ್ಧಾರ ಪ್ರಕಟಿಸಲಿದ್ದಾರೆ ಎಂದು ತಿಳಿಸಿದರು.
, ಕೇಂದ್ರ ಸಚಿವ ಡಿ.ವಿ. ಸದಾನಂದಗೌಡರು ಫಂಗಸ್ ಖಾಯಿಲೆಗೆ ವ್ಯಾಕ್ಸಿನ್ ಕೊಡಿಸಲು ಬಹಳ ಪ್ರಯತ್ನ ಮಾಡುತ್ತಿದ್ದಾರೆ. ಎಂಟಕ್ಕೂ ಹೆಚ್ಚು ಕಂಪನಿಗಳ ಜೊತೆ ಮಾತನಾಡಿ ತಯಾರಿಕೆ ಮಾಡಿಕೊಂಡಿದ್ದಾರೆ. ದೇಶಾದ್ಯಂತ 80ಸಾವಿರ ವಯಲ್ಸ್ ಮಾರುಕಟ್ಟೆಗೆ ಬಂದಿದೆ. ನಮಗೂ 8-10 ಸಾವಿರ ವಯಲ್ಸ್ ಪೂರೈಸಿದ್ದಾರೆ. 1,250 ಪ್ರಕರಣ ನಮ್ಮಲ್ಲಿದೆ.ಸಾವಿನ ಪ್ರಕರಣಗಳ ಬಗ್ಗೆ ಲೆಕ್ಕ ಹಾಕಲು ಅಧಿಕಾರಿಗಳಿಗೆ ಹೇಳಿದ್ದೇನೆ. .ಫಂಗಸ್‌ನಿಂದ 30-35 ಜನರ ಸಾವಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ನಿಖರವಾಗಿ ಲೆಕ್ಕ ಮಾಡಿ ವರದಿ ನೀಡಲು ಹೇಳಿದ್ದೇನೆ ಎಂದು ಮಾಹಿತಿ ನೀಡಿದರು.
ಸರ್ಕಾರಿ ಮತ್ತಯ ಖಾಸಗಿ ಆಸ್ಪತ್ರೆಯಲ್ಲಿ ಎರಡೂ ಕಡೆ ಫಂಗಸ್ಸಿಗೆ ಔಷಧ ನೀಡುತ್ತೇವೆ. ಖಾಸಗಿ ಆಸ್ಪತ್ರೆಗಳಲ್ಲಿ ದರ ನಿಗದಿಯಾಗಿಲ್ಲ.ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ನೀಡುತ್ತವೆ ಎಂದು ತಿಳಿಸಿದರು.
ಮೂರನೇ ಅಲೆ ವಿಚಾರವಾಗಿ ನಾನು ಆರೋಗ್ಯ ಸಚಿವನಾಗಿ ಇಷ್ಟೇ ಹೇಳುತ್ತೇನೆ. ಜನ ಎರಡು ಲಸಿಕೆ ಡೋಸ್ ಲಸಿಕೆ ತೆಗೆದುಕೊಳ್ಳುವ ವರೆಗೂ ಇದರ ಕಾಟ ತಪ್ಪಿದ್ದಲ್ಲ ಎಂದರು.

ಪ್ರಮುಖ ಸುದ್ದಿ :-   ಸಿಎಂ ಸಿದ್ದರಾಮಯ್ಯ ಹೇಳಿಕೆಯಿಂದ ನಮ್ಮ ಮನೆತನದ ಗೌರವ ಹಾಳಾಗುತ್ತಿದೆ : ನೇಹಾ ತಂದೆ ನಿರಂಜನ ಹಿರೇಮಠ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement