ಕಾಂಗ್ರೆಸ್ಸೇತರ ಪಕ್ಷ ಏಳು ವರ್ಷ ದೇಶ ಮುನ್ನಡೆಸಿರುವುದು ಭಾರತದಲ್ಲಿ ಐತಿಹಾಸಿಕ ಮೈಲುಗಲ್ಲು: ಸಚಿವ ಜೋಶಿ

ಹುಬ್ಬಳ್ಳಿ: ಕಾಂಗ್ರೆಸ್ಸೇತರ ಪಕ್ಷವೊಂದು ಏಳು ವರ್ಷಗಳ ಕಾಲ ದೇಶ ಮುನ್ನೆಡೆಸಿರುವುದು. ಸ್ವತಂತ್ರ ಭಾರತದಲ್ಲಿ ಐತಿಹಾಸಿಕ ಮೈಲುಗಲ್ಲಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಬಿಜೆಪಿ ನೇತೃತ್ವದ ಸರ್ಕಾರ ಎರಡನೇ ಬಾರಿ ಅಧಿಕಾರಕ್ಕೆ ಬಂದು ಎರಡು ವರ್ಷ ತುಂಬಿದ ಹಿನ್ನಲೆಯಲ್ಲಿ, ಶನಿವಾರ ಕೇಶ್ವಾಪುರ ಮಯೂರಿ ಬಡಾವಣೆ ಉದ್ಯಾನವನವನದಲ್ಲಿ ಆಯೋಜಿಸಲಾಗಿದ್ದ ಸಸಿ ನೆಡುವ ಕಾರ್ಯಕ್ರಮ ಹಾಗೂ ಫುಡ್ ಕಿಟ್ ವಿತರಣೆ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
2014 ರಲ್ಲಿ ಕಾಂಗ್ರೆಸ್‌ ಪಕ್ಷದ ಆಡಳಿತ ವೈಫಲ್ಯದಿಂದ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದಿತ್ತು. 2019 ಪಕ್ಷದ ಆಡಳಿತ ವೈಖರಿಯನ್ನು ಮೆಚ್ವಿ ದೇಶದ ಜನರು ಮತಚಲಾಯಿಸಿದ್ದಾರೆ. ಈ ಎರೆಡು ವರ್ಷದ ಅಧಿಕಾರ ಅವಧಿಯ 24 ತಿಂಗಳಿನಲ್ಲಿ 16 ತಿಂಗಳು‌ ಕೋವಿಡ್ ಕರಿಛಾಯೆಯಲ್ಲಿ ಕಳೆದು ಹೋಗಿದೆ. ಬಹಳಷ್ಟು ಜನರು ತಮ್ಮ ಹತ್ತಿರದವರನ್ನು ಕಳೆದುಕೊಂಡಿದ್ದಾರೆ. ಇದರ ನೋವು ನಮಗೂ ಇದೆ. ಸರ್ಕಾರ ಸಾರ್ವಜನಿಕರ ತೊಂದರೆಗಳಿಗೆ ದುಃಖಗಳನ್ನು ಅರಿತು ಸಂವೇದನ ಶೀಲತೆಯಿಂದ ಕೆಲಸ ನಿರ್ವಹಿಸಿದೆ ಎಂದು ತಿಳಿಸಿದರು.
ಯುದ್ಧೋಪಾದಿಯಲ್ಲಿ ಕೋವಿಡ್ ಪರಿಹಾರ ಕ್ರಮಗಳನ್ನು ಕೈಗೊಂಡಿದ್ದೇವೆ. ಭಾರತದಲ್ಲಿ ಕೋವಿಡ್‌ನಿಂದ ಗುಣಮುಖರಾಗುವವರ ಪ್ರಮಾಣ ವಿಶ್ವದ ಇತರೆ ರಾಷ್ಟ್ರಗಳಿಗೆ ಹೋಲಿಸಿದರೆ ಹೆಚ್ಚಿದೆ. ಎರಡನೆ ಅಲೆಯ ಆರಂಭದ ಸಂದರ್ಭದಲ್ಲಿ 900 ಟನ್ ಇದ್ದ ಮೆಡಿಕಲ್ ಆಕ್ಸಿಜನ್ ಬೇಡಿಕೆ ಈಗ 9000 ಟನ್‌ಗೆ ಏರಿಕೆಯಾಗಿದೆ. ಇದನ್ನು ಸರಿದೂಗಿಸಿ ಎಲ್ಲೆಡೆ ಆಕ್ಸಿಜನ್ ದೊರೆಯುವಂತೆ ಮಾಡಲಾಗಿದೆ.ರೆಮಿಡಿಸಿವರ್ ಔಷಧವನ್ನು ಮುಕ್ತ ಮಾರುಕಟ್ಟೆಕೊಳ್ಳುಲು ಇದ್ದ ನಿರ್ಬಂಧವನ್ನು ತೆಗೆಯಲಾಗಿದೆ. ಎರೆಡು ಮೂರು ದಿನಗಳಲ್ಲಿ ಬ್ಲಾಕ್ ಫಂಗಸ್ ಔಷಧವನ್ನು ಸಹ ಎಲ್ಲರಿಗೂ ಸಿಗುವ ಹಾಗೆ ಮಾಡಲಾಗುವುದು‌ ಎಂದರು.
ದೇಶದ ಆಂತರಿಕ ಬಾಹ್ಯ ಸುರಕ್ಷತೆ ವಿಚಾರದಲ್ಲಿ ಬಹುದೊಡ್ಡ ಮೈಲುಗಲ್ಲನ್ನು ಸರ್ಕಾರ ಸಾಧಿಸಿದೆ. ನೆರೆಯ ರಾಷ್ಟ್ರ‌ ಚೀನಾದ ಆಕ್ರಮಣ ನೀತಿಗೆ ಅದರದೇ ಭಾಷೆಯಲ್ಲಿ‌ ಉತ್ತರ ನೀಡಿದ್ದೇವೆ. ಭಯೋತ್ಪಾದನೆಯನ್ನು ನಿಯಂತ್ರಿಸಿದ್ದೇವೆ ಎಂದು ಹೇಳಿದರು.
ಆರ್ಥಿಕ ಹಾಗೂ ಆರೋಗ್ಯ ‌ದೃಷ್ಟಿಯಿಂದ ಲಾಕ್‌‌ಡೌನ್ ಮುಂದುವರಿಸುವ ಕುರಿತು ರಾಜ್ಯ ಸರ್ಕಾರ ನಿರ್ಧಾರ ಕೈಗೊಳ್ಳುವುದು. ಜೂನ್ 7 ವರೆಗೆ ಕಾಯಬೇಕು. ಈಗಲೇ ಲಾಕ್‌ಡೌನ್ ಕುರಿತು ಹೇಳುವುದು ತಪ್ಪಾಗುತ್ತದೆ. ಮುಖ್ಯಮಂತ್ರಿ ಯಡಿಯೂರಪ್ಪನವರ ಸರ್ಕಾರ ಸೂಕ್ತವಾಗಿ ಕೋವಿಡ್ ನಿರ್ವಹಣೆ ಮಾಡುತ್ತಿದೆ. ಲಾಕ್‌ಡೌನ್ ಕುರಿತು ಕೂಡ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದರು.

ಪ್ರಮುಖ ಸುದ್ದಿ :-   ಅಪ್ರಾಪ್ತೆಯ ಮೇಲೆ ಅತ್ಯಾಚಾರ; ಜನಿಸಿದ ಮಗು ಮಾರಾಟ ಆರೋಪ, ಆಕೆ ಮತ್ತೆ ಗರ್ಭಿಣಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement