ರೋಗಿಗಳ ಸ್ಥಿತಿಗತಿ ತಿಳಿಯಲು ಹುಬ್ಬಳ್ಳಿ ಕಿಮ್ಸ್‌ ಆಡಳಿತ ಮಂಡಳಿಯಿಂದ ಸಹಾಯವಾಣಿ

ಹುಬ್ಬಳ್ಳಿ:ಸಾರ್ವಜನಿಕ ಹಿತದೃಷ್ಟಿಯಿಂದ ಕಿಮ್ಸ್‌ನ ಕೋವಿಡ್ ಆಸ್ಪತ್ರೆಯಲ್ಲಿ ಒಳ ರೋಗಿಗಳಾಗಿ ದಾಖಲಾಗಿರುವ ರೋಗಿಗಳ ಸ್ಥಿತಿಗತಿಯನ್ನು ಅವರ ಸಂಬಂಧಿಕರಿಗೆ ತಿಳಿಸುವ ಸಲುವಾಗಿ ಕಿಮ್ಸ್‌ ಆಡಳಿತ ಮಂಡಳಿಯಿಂದ ಸಹಾಯವಾಣಿ ಆರಂಭಿಸಲಾಗಿದೆ.
ದಾಖಲಾದ ರೋಗಿಗಳ ಬಗ್ಗೆ ಮಾಹಿತಿ ತಿಳಿಯಲು ಬಯಸುವ ಸಾರ್ವಜನಿಕರು ದೂ.ಸಂಖ್ಯೆ  0836-2951508 ಕ್ಕೆ ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ  ದೂರವಾಣಿಗೆ ಕರೆಮಾಡಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಎಸ್ ಎಸ್ ಎಲ್ ಸಿ ಪರೀಕ್ಷೆ ವಿದ್ಯಾರ್ಥಿಗಳ ಮಾರಾಮಾರಿ : ಚಾಕು ಇರಿತ

ನಿಮ್ಮ ಕಾಮೆಂಟ್ ಬರೆಯಿರಿ

advertisement