ಲಸಿಕೆ ಪಡೆಯದಿದ್ದರೆ ಸಂಬಳವಿಲ್ಲ: ಉತ್ತರ ಪ್ರದೇಶ ಫಿರೋಜಾಬಾದ್ ಜಿಲ್ಲೆ ಸರ್ಕಾರಿ ನೌಕರರಿಗೆ ಹೊಸ ರೂಲ್ಸ್‌ ಜಾರಿ..!

ಫಿರೋಜಾಬಾದ್: ರಾಜ್ಯದಲ್ಲಿ ಕೋವಿಡ್ ವ್ಯಾಕ್ಸಿನೇಷನ್ ಅನ್ನು ಉತ್ತೇಜಿಸುವ ಪ್ರಯತ್ನದಲ್ಲಿ, ಉತ್ತರ ಪ್ರದೇಶದ ಫಿರೋಜಾಬಾದ್ ಸರ್ಕಾರಿ ನೌಕರರು ಲಸಿಕೆ ಹಾಕಿಸಿಕೊಳ್ಳುವ ವರೆಗೂ ಅವರಿಗೆ ಸಂಬಳ ನೀಡದಿರಲು ನಿರ್ಧರಿಸಿದೆ.
ಜಿಲ್ಲಾ ಮ್ಯಾಜಿಸ್ಟ್ರೇಟ್ ಚಂದ್ರ ವಿಜಯ್ ಸಿಂಗ್ ವ್ಯಾಕ್ಸಿನೇಷನ್ ತೆಗೆದುಕೊಳ್ಳದಿದ್ದರೆ ಸಂಬಳವಿಲ್ಲ” ಎಂಬ ಮೌಖಿಕ ಆದೇಶ ಹೊರಡಿಸಿದ್ದಾರೆ ಎಂದು ಮುಖ್ಯ ಅಭಿವೃದ್ಧಿ ಅಧಿಕಾರಿ ಚರ್ಚಿತ್ ಗೌರ್ ಬುಧವಾರ ಹೇಳಿದ್ದಾರೆ.
ವ್ಯಾಕ್ಸಿನೇಷನ್ ಚಾಲನೆಯನ್ನು ವೇಗಗೊಳಿಸಲು ಮತ್ತು ಕೋವಿಡ್‌-19 ಸಾಂಕ್ರಾಮಿಕ ರೋಗವನ್ನು ಕೊನೆಗೊಳಿಸಲು ಉತ್ತರ ಪ್ರದೇಶ ಸರ್ಕಾರ ವಿವಿಧ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.
ಆದೇಶದ ಪ್ರಕಾರ, ಯಾವುದೇ ಉದ್ಯೋಗಿ ಕೋವಿಡ್‌ -19 ಲಸಿಕೆ ತೆಗೆದುಕೊಳ್ಳಲು ನಿರಾಕರಿಸಿದರೆ, ಇಲಾಖೆ ಹಾಗೂ ಜಿಲ್ಲಾಡಳಿತ ಕ್ರಮಕೈಗೊಳ್ಳಲಿದೆ ಮತ್ತು ಮೇ ತಿಂಗಳ ವೇತನವನ್ನು ನಿಲ್ಲಿಸುತ್ತದೆ ಎಂದು ಗೌರ್ ಹೇಳಿದರು.
ಜಿಲ್ಲಾ ಖಜಾನೆ ಅಧಿಕಾರಿಗಳು ಮತ್ತು ಇತರ ಇಲಾಖಾ ಮುಖ್ಯಸ್ಥರಿಗೆ ಆದೇಶವನ್ನು ಜಾರಿಗೆ ತರಲು ನಿರ್ದೇಶನ ನೀಡಲಾಗಿದೆ ಮತ್ತು ಪಟ್ಟಿಯನ್ನು ತಯಾರಿಸಲು ಮತ್ತು ವ್ಯಾಕ್ಸಿನೇಷನ್ ಖಚಿತಪಡಿಸಿಕೊಳ್ಳಲು ಸೂಚಿಸಲಾಗಿದೆ. ನೌಕರರು ತಮ್ಮ ಸಂಬಳವನ್ನು ನಿಲ್ಲಿಸಬಹುದೆಂಬ ಭಯದಿಂದ ತಮ್ಮನ್ನು ತಾವು ಲಸಿಕೆ ಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ಗೌರ್ ಹೇಳಿದರು.
ಕಳೆದ ವಾರ, ಗೌತಮ್ ಬುದ್ಧ ನಗರ ಆಡಳಿತವು ಲಸಿಕೆ ಚಾಲನೆಯನ್ನು ಹೆಚ್ಚಿಸಲು ನಿರ್ಧರಿಸಿತು, ಇದು ಭಾರತದ ಮೊದಲ ಸಂಪೂರ್ಣ ಲಸಿಕೆ ಪಡೆದ ಜಿಲ್ಲೆಯಾಗಿದೆ. ನೋಯ್ಡಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಸುಹಾಸ್ ಎಲ್‌.ವೈ. ಸಂಘಗಳು, ಕಚೇರಿಗಳಲ್ಲಿ ವಿವಿಧ ವ್ಯಾಕ್ಸಿನೇಷನ್ ಶಿಬಿರಗಳನ್ನು ಮತ್ತು ಸೆಕ್ಟರ್ 137 ರ ಫೆಲಿಕ್ಸ್ ಆಸ್ಪತ್ರೆಯಲ್ಲಿ 24 ಗಂಟೆಗಳ ಡ್ರೈವ್-ಥ್ರೂ ವ್ಯಾಕ್ಸಿನೇಷನ್ ಕೇಂದ್ರಕ್ಕೆ ಆದೇಶಿಸಿದರು.
ಮತ್ತೊಂದೆಡೆ, ಉತ್ತರ ಪ್ರದೇಶದ ಎಟಾವಾ ಆಡಳಿತವು ಲಸಿಕೆ ಡೋಸ್‌ ತೆಗೆದುಕೊಂಡವರಿಗೆ ಮಾತ್ರ ಮದ್ಯ ಮಾರಾಟ ಮಾಡುವ ಮೂಲಕ ಕೋವಿಡ್‌-19 ವ್ಯಾಕ್ಸಿನೇಷನ್ ಅನ್ನು ಉತ್ತೇಜಿಸುವ ಒಂದು ಹೊಸ ಆಲೋಚನೆಯನ್ನುಒರಗೆ ಹಚ್ಚಿದೆ. ಉತ್ತರ ಪ್ರದೇಶದ ಎಟಾವಾ ಜಿಲ್ಲೆಯ ಸೈಫೈನಲ್ಲಿರುವ ಮದ್ಯದಂಗಡಿಗಳು “ಲಸಿಕೆ ಪ್ರಮಾಣಪತ್ರವಿಲ್ಲದ ಮದ್ಯ ಇಲ್ಲ” ಎಂದು ಬರೆಯುವ ಫಲಕ ಹಾಕಿವೆ. ಕೋವಿಡ್‌-19 ವಿರುದ್ಧ ಲಸಿಕೆ ಹಾಕಿಸಿಕೊಂಡು ಅಧಿಕೃತ ಪ್ರಮಾಣಪತ್ರ ತೋರಿಸಿದ ಮಾತ್ರ ಮದ್ಯ ಮಾರಾಟ ಮಾಡಲು ಆದೇಶಿಸಲಾಗಿದೆ.

ಪ್ರಮುಖ ಸುದ್ದಿ :-   ವಾಟ್ಸಾಪ್ ಮೂಲಕ ಪತ್ನಿಗೆ ತ್ರಿವಳಿ ತಲಾಖ್ ನೀಡಿದ ವ್ಯಕ್ತಿಯ ಬಂಧನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement