ಕನ್ನಡ ಸಾಹಿತ್ಯ ಲೋಕದ ದಿಗ್ಗಜ ಪ್ರೊ. ವಸಂತ ಕುಷ್ಟಗಿ ನಿಧನ

ಯಾದಗಿರಿ : ಸಾಹಿತಿ, ಕಲ್ಯಾಣ ಕರ್ನಾಟಕದ ಜ್ಞಾನ ದೀವಿಗೆ, ಪ್ರಾಧ್ಯಾಪಕ, ಭಾಷಾ ವಿದ್ವಾoಸ ಪ್ರೊ. ವಸಂತ ಕುಷ್ಟಗಿ (85) ಶುಕ್ರವಾರ ನಿಧನರಾಗಿದ್ದಾರೆ.
ಲೋ ಬಿಪಿಯಿಂದ ನಿಧನರಾದರೆಂದು ಕುಟುಂಬದ ಮೂಲಗಳು ತಿಳಿಸಿವೆ.  ಕಲ್ಯಾಣ ಕರ್ನಾಟಕದ ಐತಿಹಾಸಿಕ ಶತಮಾನ ಕಂಡ ಪ್ರತಿಷ್ಠಿತ ನೂತನ ವಿದ್ಯಾಲಯದ ಕನ್ನಡ ಪ್ರಾಧ್ಯಾಪಕರಾಗಿ ಪ್ರಾಂಶುಪಾಲರಾಗಿ ತಮ್ಮ ಜ್ಞಾನದ ದೀವಿಗೆಯಿಂದ ಅಸಂಖ್ಯಾತ ವಿದ್ಯಾರ್ಥಿಗಳ ಬಾಳನ್ನು ಬೆಳಗಿಸಿದ ವಸಂತ ಕುಷ್ಟಗಿಯವರು ಬಾರದ ಲೋಕಕ್ಕೆ ಪಯಣ ಬೆಳೆಸಿದರು.

ಒಂದು ವಾರದಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಲೋ ಬಿಯಿಂದ ಶುಕ್ರವಾರ ನಿಧನರಾದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಶಿಕ್ಷಣ ಸಂಸ್ಥೆ ಯ ಕೀರ್ತಿಯನ್ನು ಕರುನಾಡಿನ ದಶದಿಕ್ಕುಗಳಿಗೂ ವ್ಯಾಪಿಸುವಂತೆ ಮಹಾನ್ ಆಡಳಿತಗಾರರಾಗಿ ಮನ್ನಣೆ ಪಡೆದುಕೊಂಡಿದ್ದರು.1995ರಲ್ಲಿ ಕರ್ನಾಟಕ ಸರಕಾರದ ಸಾರ್ವಜನಿಕ ಶಿಕ್ಷಣ ಇಲಾಖೆಯು, ಎಸ್.ಎಸ್ಎಲ್ ಸಿ ಪಠ್ಯಕ್ರಮ ಪರಿಷ್ಕರಣೆಗೊಂಡು,10ನೇ ತರಗತಿಯ ಪ್ರಥಮ ಭಾಷೆಯಾದ ಕನ್ನಡದ ಪದ್ಯಭಾಗದಲ್ಲಿ ಮೊದಲ ಪದ್ಯವೇ ಅವರ ಹಾರೈಕೆ. ಈ ಕವಿತೆ ಮೂಲಕ ಅವರು ಕರುನಾಡಿನಾದ್ಯoತ ಮನೆಮಾತಾಗಿದ್ದರು. ಕನ್ನಡ ಸಾಹಿತ್ಯ ಲೋಕಕ್ಕೆ ಹಲವಾರು ಕಾವ್ಯ, ಹತ್ತಾರು ಲೇಖನಗಳು, ವಿಶೇಷವಾಗಿ ದಾಸಸಾಹಿತ್ಯದಲ್ಲಿ ಸಾಹಿತ್ಯ ಕೃಷಿಯನ್ನು ಮಾಡಿ ಸಾಹಿತ್ಯ ಲೋಕಕ್ಕೆ ವಿಶೇಷವಾದ ಕೊಡುಗೆಯನ್ನು ನೀಡಿರುವ ಕೀರ್ತಿ ಅವರಿಗೆ ಸಲ್ಲುತ್ತದೆ.

ಪ್ರಮುಖ ಸುದ್ದಿ :-   ವಿಧಾನಸೌಧ ಸ್ಫೋಟದ ಎಐ ವಿಡಿಯೊ ಸೃಷ್ಟಿಸಿ ಹಂಚಿಕೊಂಡ ಆರೋಪ : ಕಿಡಿಗೇಡಿ ಬಂಧನ

ಹೈದರಾಬಾದ್‌ ವಿಶ್ವ ವಿದ್ಯಾಲಯದಿಂದ ಎಂ.ಎ.ಪದವಿ ಪಡೆದಿದ್ದ ಅವರು ಎಂಟು ಕನವನ ಸಂಕಲನ, ೩೦ಕ್ಕೂ ಹೆಚ್ಚು ಗದ್ಯ ಸಂಕಲನ, ೧೬ಕ್ಕೂ ಹೆಚ್ಚು ಸಂಪಾದನಾ ಪುಸ್ಕಗಳು ಹಾಗೂ ೨೨ಕ್ಕೂ ಹೆಚ್ಚು ಸಂಪಾದಿತ ಪುಸ್ತಕಗಳನ್ನು ರಚಿಸಿದ್ದರು.

ಎನ್.ಧಮರ್ಸಿಂಗ್‌ ಅವರು‌ ಕರ್ನಾಟಕದ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಪ್ರೊ.ಕುಷ್ಟಗಿ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿತ್ತು .ಕಲ್ಯಾಣ ಕರ್ನಾಟಕದ ಸಾಹಿತ್ಯ, ಐತಿಹಾಸಿಕ , ಹೋರಾಟಗಳು, ಚಾರಿತ್ರಿಕಘಟನೆಗಳ ಕುರಿತು ಅಪಾರವಾದ ಅನುಭವ ಹಾಗೂ ಜ್ಞಾನ ಹೊಂದಿದ್ದ ವಸಂತ ಕುಷ್ಗಿ ಅವರು ದೈವಾಧೀನರಾಗಿದ್ದು, ಕನ್ನಡ ಸಾಹಿತ್ಯ ಲೋಕಕ್ಕೂ, ಕರುನಾಡಿಗೂ, ವಿಶೇಷವಾಗಿ ಕಲ್ಯಾಣ ಕರ್ನಾಟಕಕ್ಕೆ ತುಂಬಲಾರದ ನಷ್ಟವಾಗಿದೆ. ಭಗವಂತನು ಅವರ ಆಮಕ್ಕೆ ಸದ್ಗತಿ ನೀಡಲಿ ಎಂದು ಕಂಬನಿ ಮಿಡಿದಿರುವ ಎಂದು ಅಸಂಖ್ಯ ಶಿಷ್ಯ ಬಳಗ, ಅಭಿಮಾನಿಗಳಿಗೂ, ಸಾಹಿತ್ಯಾಸಕ್ತರು ದುಃಖ ಸಹಿಸುವ ಶಕ್ತಿ ಭಗವಂತನು ನೀಡಲಿ ಎಂದು ಕುಟುಂಬ ವರ್ಗಕ್ಕೆದುಃಖ ಸಹಿಸುವ ಶಕ್ತಿ ಭಗವಂತನು ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement