ಕನ್ನಡ ಧ್ವಜದ ಚಿತ್ರವಿರುವ ಒಳಉಡುಪು ಮಾರಾಟಕ್ಕಿಟ್ಟ ಅಮೆಜಾನ್, ಗೂಗಲ್ ಆಯ್ತು ಈಗ ಅಮೆಜಾನ್‌ನಿಂದ ಕನ್ನಡಕ್ಕೆ ಅವಮಾನ

ಬೆಂಗಳೂರು: ಎರಡು ದಿನಗಳ ಹಿಂದೆ ಕನ್ನಡ ಭಾರತದ ಅತ್ಯಂತ ಕೊಳಕು ಭಾಷೆ ಎಂದು ಗೂಗಲ್​ ಸರ್ಚ್​ನಲ್ಲಿ ತೋರಿಸುವ ಮೂಲಕ ಕನ್ನಡಿಗರ ವಿರೋಧವನ್ನು ಎದುರಿಸಿತ್ತು. ಈಗ ಅಮೆಜಾನ್ ಇದೇ ರೀತಿ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದೆ.
ಗೂಗಲ್​ನಲ್ಲಿ ಕನ್ನಡ ಭಾಷೆಗೆ ಅವಹೇಳನ ಮಾಡಿ, ಕ್ಷಮೆ ಕೇಳಿದ ಬೆನ್ನಲ್ಲೇ ಜಗತ್ತಿನ ಅತ್ಯಂತ ದೊಡ್ಡ ಆನ್​ಲೈನ್ ಶಾಪಿಂಗ್ ವೇದಿಕೆ ಅಮೆಜಾನ್​ನಲ್ಲಿ ಕನ್ನಡ ಧ್ವಜದ ಬಣ್ಣದ ಬಿಕಿನಿ ಮಾರಾಟಕ್ಕೆ ಇಡಲಾಗಿದೆ. ಕೆನಡಾ ದೇಶದಲ್ಲಿ ಅಮೆಜಾನ್ ಆನ್​ಲೈನ್ ಶಾಪಿಂಗ್ ಸೈಟ್​ನಲ್ಲಿ ಕನ್ನಡ ಧ್ವಜವಾದ ಕೆಂಪು, ಹಳದಿ ಬಣ್ಣವಿರುವ ಜೊತೆಗೆ ಕರ್ನಾಟಕದ ಧ್ವಜದ ಲಾಂಛನವಿರುವ ಬಿಕಿನಿ ಮಾರಾಟಕ್ಕೆ ಇಡಲಾಗಿದೆ.
ವಿಮೆನ್ಸ್ ಫ್ಲ್ಯಾಗ್ ಆಫ್ ಕರ್ನಾಟಕ ಒರಿಜಿನಲ್ ಡಿಸೈನ್ ಎಂಬ ಹೆಸರಿನಲ್ಲಿ ಈ ಬಿಕಿನಿ ಮಾರಾಟ ಮಾಡಲಾಗುತ್ತಿದೆ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಇದರ ಪೂರೈಕೆ ಭಾರತದಲ್ಲಿ ಇಲ್ಲ.ಕೆನಡಾ ದೇಶದಲ್ಲಿ ಈ ಅವಾಂತರ ನಡೆದಿದೆ. ಕರ್ನಾಟಕದ ಹೆಸರು ಬಳಸಿ ಈ ಧ್ವಜದ ಚಿತ್ರವಿರುವ ಬಿಕಿನಿಯನ್ನು ಮಾರಾಟ ಮಾಡಲಾಗುತ್ತಿದೆ.
ಎರಡು ದಿನಗಳ ಹಿಂದಷ್ಟೇ ಗೂಗಲ್​ನಲ್ಲಿ ವೆಬ್​ಸೈಟ್ ಲಿಂಕ್​ ಒಂದು ಭಾರತದ ಕೊಳಕು ಭಾಷೆ ಯಾವುದು ಎಂದು ಸರ್ಚ್ ಮಾಡಿದರೆ ಗೂಗಲ್​ನಲ್ಲಿ ಕನ್ನಡ ಎಂದು ತೋರಿಸುತ್ತಿತ್ತು. ಟ್ವಿಟ್ಟರ್​ನಲ್ಲಿ ಕನ್ನಡಿಗರು ಇದಕ್ಕೆ ಭಾರೀ ವಿರೋಧ ವ್ಯಕ್ತಪಡಿಸಿದ ಬಳಿಕ ಎಚ್ಚೆತ್ತುಕೊಂಡ ಗೂಗಲ್ ಕನ್ನಡದಲ್ಲಿಯೇ ಕ್ಷಮೆಯನ್ನೂ ಕೇಳಿತ್ತು.

ಪ್ರಮುಖ ಸುದ್ದಿ :-   ನಂದಿಗ್ರಾಮ ಉಪಸಮರ : ಮಮತಾಗೆ ಶಾಕ್‌ ಮೇಲೆ ಶಾಕ್‌; ಚಿಹ್ನೆ ಬದಲು, ಕೈಕೊಟ್ಟ ಅಭ್ಯರ್ಥಿ ; ಕಾಂಗ್ರೆಸ್ಸಿಗೆ ಬೆಂಬಲ ಘೋಷಣೆ ಬೆನ್ನಲ್ಲೇ ಕೈ ಅಭ್ಯರ್ಥಿ ಬಂಧನ !

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement