ಕಾರವಾರ ಜಿಪಂ ಕಟ್ಟಡದಲ್ಲಿ ಬೆಂಕಿ ಅವಘಡ; ಮೂರು ಮಹಡಿಗೂ ವ್ಯಾಪಿಸಿದ ಬೆಂಕಿ

ಕಾರವಾರ :ಜಿಲ್ಲಾ ಪಂಚಾಯತ ಅಭಿಲೇಖಾಲಯ ಕಟ್ಟಡದಲ್ಲಿ ಬೆಂಕಿ ಅವಘಡ ಸಂಭವಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಶನಿವಾರ ನಡೆದಿದೆ. ವಿದ್ಯುತ್‌ ಶಾರ್ಟ್‌ ಸಕ್ಯೂಟಿನಿಂದ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ.

ಕಾರವಾರದ ಎಂ.ಜಿ ರಸ್ತೆಯಲ್ಲಿರುವ ಜಿಲ್ಲಾ ಪಂಚಾಯತ ಅಭಿಲೇಖಾಲಯದಲ್ಲಿ ಶನಿವಾರ ಬೆಳಿಗ್ಗೆ ವಿದ್ಯುತ್ ಶಾರ್ಟ್‌ ಸೆರ್ಕ್ಯೂಟ್ ನಿಂದ ಮೂರು ಅಂತಸ್ಥಿನ ಕಟ್ಟಡಕ್ಕೆ ಬೆಂಕಿ ವ್ಯಾಪಸಿದೆ. ಕಟ್ಟಡದ ಕೆಳಭಾಗದಲ್ಲಿ ಪೀಠೋಪಕರಣಗಳು, ಕಚೇರಿಯ ದಾಖಲೆಗಳು ಸಂಪೂರ್ಣ ಬೆಂಕಿಗಾಹುತಿಯಾಗಿದೆ.

ಮೇಲ್ಭಾಗದ ಕಟ್ಟಡಕ್ಕೂ ಬೆಂಕಿ ಆವರಿಸಿದೆ. ಮಹತ್ವದ ದಾಖಲೆಗಳೂ ಬೆಂಕಿಗೆ ಆಹುತಿಯಾಗಿರುವ ಆತಂಕ ಉಂಟಾಗಿದೆ.  ಯಾವುದೇ ಪ್ರಾಣಾಪಾಯವಾಗಿಲ್ಲ.
ಜಿಲ್ಲಾಧಿಕಾರಿ ಮುಲೈ ಮುಗಿಲನ್, ಜಿಲ್ಲಾ ಪಂಚಾಯತ ಸಿಇಒ ಪ್ರಿಯಾಂಗಾ, ಎಂ. ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ. ಅಂದಾಜು 2 ಲಕ್ಷ ರೂ.ಗಳಿಗೂ ಹೆಚ್ಚು ನಷ್ಟವಾಗಿದೆ ಎಂದು ಜಿಲ್ಲಾ ಪಂಚಾಯತ ಸಿಇಒ ಪ್ರಿಯಾಂಕ ಅವರು ಮಾಹಿತಿ ನೀಡಿದ್ದಾರೆ. ಆದರೆ ಯಾವ್ಯಾವ ದಾಖಲೆಗಳು ಸುಟ್ಟಹೋಗಿವೆ ಎಂಬುದು ನಂತರವೇ ತಿಳಿಯಬೇಕಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement