ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ ಪಕ್ಷವು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋದರಳಿಯ ಹಾಗೂ ಲೋಕಸಭಾ ಸದಸ್ಯ ಅಭಿಷೇಕ್ ಬ್ಯಾನರ್ಜಿಯವರನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಭಡ್ತಿ ನೀಡಿದೆ. ಬಂಗಾಳದ ಆಡಳಿತ ಪಕ್ಷದ ಹಿರಿಯ ನಾಯಕರು ಕೋಲ್ಕತ್ತಾದಲ್ಲಿ ಸಾಂಸ್ಥಿಕ ಸಭೆ ನಡೆಸಿದ ನಂತರ ಶನಿವಾರ ಈ ಆಯ್ಕೆಯನ್ನು ಪ್ರಕಟಿಸಲಾಯಿತು.
ಚುನಾವಣಾ ತಂತ್ರಜ್ಞ ಪ್ರಶಾಂತ ಕಿಶೋರ ಅವರನ್ನು ನೇಮಕ ಮಾಡುವಲ್ಲಿ ಅಭಿಷೇಕ ಬ್ಯಾನರ್ಜಿ ಮಹತ್ವದ ಪಾತ್ರ ವಹಿಸಿದ್ದರು.
ಅಭಿಷೇಕ ಅವರ ನೇಮಕವು ಪಕ್ಷದೊಳಗೆ ಅವರ ಹೆಚ್ಚುತ್ತಿರುವ ಪ್ರಭಾವವನ್ನು ಸೂಚಿಸುತ್ತದೆ. ಮಮತಾ ಅವರ ಮಾಜಿ ಆಪ್ತ ಸುವೇಂದು ಅಧಿಕಾರಿ ಸೇರಿದಂತೆ ತೃಣಮೂಲದ ಅನೇಕ ನಾಯಕರು ಮತದಾನಕ್ಕೆ ಮುಂಚಿತವಾಗಿ ಪಕ್ಷ ತ್ಯಜಿಸಲು ಅಭಿಷೇಕ ಅವರು ಪಕ್ಷದಲ್ಲಿ ಪ್ರಾಬಲ್ಯ ಸಾಧಿಸುತ್ತಿರುವುದು ಮುಖ್ಯ ಕಾರಣವಾಗಿತ್ತು.
ತೃಣಮೂಲ ಪಕ್ಷವು ತನ್ನ ಮಹಿಳಾ ವಿಭಾಗದ ಅಧ್ಯಕ್ಷೆಯನ್ನಾಗಿ ಸಂಸದೆ ಕಾಕೋಲಿ ಘೋಷ್ ದಸ್ತಿದಾರ್ ಹಾಗೂ ಕಳೆದ ತಿಂಗಳು ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಯುವ ವಿಭಾಗದ ಅಧ್ಯಕ್ಷೆಯನ್ನಾಗಿ ನಟಿ ಸಾಯೋನಿ ಘೋಷ್ ಅವರನ್ನು ನೇಮಿಸಿದೆ.
ಈ ಹಿಂದೆ ಯುವ ವಿಭಾಗವನ್ನು ಮುನ್ನಡೆಸಿದ ಅಭಿಷೇಕ್ ಬ್ಯಾನರ್ಜಿ ಈಗ ಆ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ, ಪಕ್ಷವು ‘ಒಬ್ಬ ವ್ಯಕ್ತಿಗೆ ಒಂದು ಸ್ಥಾನ ಸೂತ್ರ’ ಅನುಸರಿಸುತ್ತದೆ ಎಂದು ಹಿರಿಯ ನಾಯಕ ಪಾರ್ಥಾ ಚಟರ್ಜಿ ಹೇಳಿದರು.
ಪಕ್ಷದ ಸಂಸದೀಯ ನಾಯಕರಾಗಿ ಸುದೀಪ್ ಬಂದೋಪಾಧ್ಯಾಯ ಹಾಗೂ ಡೆರೆಕ್ ಒ’ಬ್ರಿಯಾನ್ ಅವರನ್ನು ಉಳಿಸಿಕೊಳ್ಳಲಾಗಿದೆ.
ಶನಿವಾರದ ಸಭೆಯಲ್ಲಿ ಕೋಲ್ಕತ್ತಾದ ಭವಾನಿಪುರ ಸ್ಥಾನಕ್ಕೆ ಚುನಾವಣೆ ಸೇರಿದಂತೆ ಮುಂಬರುವ ಉಪಚುನಾವಣೆಗಳ ಪಕ್ಷದ ಕಾರ್ಯತಂತ್ರದ ಬಗ್ಗೆ ಚರ್ಚಿಸಲಾಗಿದೆ. ಈ ಕ್ಷೇತ್ರದಿಂದ ಮಮತಾ ಬ್ಯಾನರ್ಜಿ ಸ್ಪರ್ಧಿಸುತ್ತಾರೆ ಎಂದು ಹೇಳಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ