ಅಮೆಜಾನ್ ಕ್ಷಮೆಯಾಚನೆ: ಒಳ ಉಡುಪಿನ ಚಿತ್ರದಲ್ಲಿ ಕನ್ನಡ ಧ್ವಜ, ಅಶೋಕ ಚಕ್ರದ ಲಾಂಛನ ತೆಗೆದ ಆನ್‌ಲೈನ್‌ ಶಾಪಿಂಗ್‌ ದೈತ್ಯ

ಬೆಂಗಳೂರು: ಅತಿದೊಡ್ಡ ಜಾಗತಿಕ ಇ-ಕಾಮರ್ಸ್​ ಕಂಪನಿ ಅಮೆಜಾನ್ ಕೆನಡಾದ ತನ್ನ ಆನ್​ಲೈನ್ ಶಾಪಿಂಗ್ ವೆಬ್​ಸೈಟ್​ನಲ್ಲಿ ಕನ್ನಡ ಧ್ವಜದ ಚಿತ್ರ, ಅಶೋಕ ಚಕ್ರದ ಲಾಂಛನವಿರುವ ಮಹಿಳೆಯರ ಒಳ ಉಡುಪುಗಳನ್ನು ಮಾರಾಟಕ್ಕಿಟ್ಟ ಕಾರಣಕ್ಕೆ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಕ್ಷಮೆಯಾಚಿಸಿದೆ.
ಈಗ ಆ ಚಿತ್ರವನ್ನು ತನ್ನ ಸೈಟ್​ನಿಂದ ತೆಗೆದುಹಾಕಿರುವ ಅಮೆಜಾನ್ ಅದರ ಬದಲಾಗಿ ಬೇರೆ ಚಿತ್ರ ಹಾಕಿದೆ. ಆದರೆ, ಹೊಸ ಚಿತ್ರದಲ್ಲಿರುವ ಒಳ ಉಡುಪಿನ ವಿವರಣೆಯಲ್ಲಿ ಕರ್ನಾಟಕ ಫ್ಲಾಗ್ ಡಿಸೈನ್​ನ ಒಳ ಉಡುಪು ಎಂಬುದನ್ನು ಮಾತ್ರ ಹಾಗೆಯೇ ಇಟ್ಟಿದೆ.
ವಿಮೆನ್ಸ್ ಫ್ಲ್ಯಾಗ್ ಆಫ್ ಕರ್ನಾಟಕ ಒರಿಜಿನಲ್ ಡಿಸೈನ್ ಎಂಬ ಹೆಸರಿನಲ್ಲಿ ಈ ಬಿಕಿನಿಯನ್ನು ಮಾರಾಟ ಮಾಡಲಾಗುತ್ತಿತ್ತು. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಕರ್ನಾಟಕದ ಫ್ಲಾಗ್​ ಡಿಸೈನ್​ನ ಪ್ರಾಡಕ್ಟ್​ ಎಂದು ನಮೂದಿಸಲ್ಪಟ್ಟಿದ್ದ ಕನ್ನಡ ಧ್ವಜವಿರುವ ಮಹಿಳೆಯರ ಒಳಉಡುಪುಗಳನ್ನು ಸೇಲ್ ಮಾಡುತ್ತಿರುವುದಕ್ಕೆ ಅಮೆಜಾನಿ​ಗೆ ಟ್ಯಾಗ್​ ಮಾಡಿ ವಿರೋಧಿಸಲಾಗಿತ್ತು.
ಈ ಬಗ್ಗೆ ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಕೂಡ ಆಕ್ರೋಶ ಹೊರಹಾಕಿ ಅಮೆಜಾನ್ ಸಂಸ್ಥೆ ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದ್ದರು.
ಈ ಬಗ್ಗೆ ಟ್ವೀಟ್ ಕೂಡ ಮಾಡಿದ್ದ ಅರವಿಂದ ಲಿಂಬಾವಳಿ, ಇತ್ತೀಚೆಗಷ್ಟೆ ನಾವು ಗೂಗಲ್​ನಿಂದ ಅವಮಾನ ಎದುರಿಸಿದ್ದೆವು. ಈಗ ಅಮೆಜಾನ್​ನಿಂದ ನ್ನಡ ಧ್ವಜಕ್ಕೆ ಅವಮಾನವಾಗಿದೆ. ನಮ್ಮ ಗಮನಕ್ಕೆ ಬಂದಿದೆ. ಬಹುರಾಷ್ಟ್ರೀಯ ಕಂಪನಿಗಳು ಪದೇಪದೆ ಈ ರೀತಿ ಕನ್ನಡಕ್ಕೆ ಅವಮಾನ ಮಾಡುವುದನ್ನು ನಿಲ್ಲಿಸಬೇಕು. ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುವ ಕೆಲಸವನ್ನು ಯಾವ ಕಂಪನಿಯೂ ಮಾಡಬಾರದು. ಅಮೆಜಾನ್ ಕನ್ನಡಿಗರ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವ ಅರವಿಂದ ಲಿಂಬಾವಳಿ ಟ್ವಿಟ್ಟರ್​ನಲ್ಲಿ ಅಮೆಜಾನ್​ಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದರು.

ಪ್ರಮುಖ ಸುದ್ದಿ :-   ಕರ್ನಾಟಕದ ಈ ಜಿಲ್ಲೆಗಳಲ್ಲಿ 3-4 ದಿನ ಬಿಸಿಗಾಳಿ : ಹವಾಮಾನ ಇಲಾಖೆ ಎಚ್ಚರಿಕೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement