ಬೆಂಗಳೂರು: ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯ ಬಗ್ಗೆ ಊಹಾಪೋಹಗಳ ಹಿನ್ನೆಲೆಯಲ್ಲಿ ಹೊನ್ನಳ್ಳಿ ಶಾಸಕ ರೇಣುಕಾಚಾರ್ಯ ಸೋಮವಾರ ಬಿ.ಎಸ್. ಯಡಿಯೂರಪ್ಪ ಅವರನ್ನು ರಾಜ್ಯದ ಮುಖ್ಯಮಂತ್ರಿಯಾಗಿ ಬೆಂಬಲಿಸಿ 65 ಕ್ಕೂ ಹೆಚ್ಚು ಶಾಸಕರು ಬರೆದು ಸಹಿ ಹಾಕಿದ್ದಾರೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಯಡಿಯುರಪ್ಪ ಅವರ ರಾಜಕೀಯ ಕಾರ್ಯದರ್ಶಿಯೂ ಆಗಿರುವ ರೇಣುಕಾಚಾರ್ಯ ಅವರು ಕರ್ನಾಟಕದ ಉಸ್ತುವಾರಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರೊಂದಿಗೆ ಮಾತನಾಡಿದ್ದಾಗಿ ಹೇಳಿದ್ದಾರೆ.
ಕರ್ನಾಟಕ ಬಿಜೆಪಿ ಮುಖ್ಯಸ್ಥ ನಳಿನ್ ಕಟೀಲು, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಮತ್ತು ಇತರರು ಯಡಿಯೂರಪ್ಪ ಅವರ ಬಗ್ಗೆ ವಿಶ್ವಾಸ ತೋರಿಸಿದ್ದಾರೆ ಎಂದು ರೇಣುಕಾಚಾರ್ಯ ಹೇಳಿದರು.
ಭಾನುವಾರ, ಧಾರವಾಡ ಕ್ಷೇತ್ರದ ಬಿಜೆಪಿಯ ನಾಲ್ಕು ಅವಧಿಯ ಲೋಕಸಭಾ ಸಂಸದ ಹಾಗೂ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಉಖ್ಯಮಂತ್ರಿ ಯಡಿಯೂರಪ್ಪ ಅವರ ನಾಯಕತ್ವ ಬದಲಾವಣೆ ಮಾಡಲು ಪಕ್ಷದ ಹೈಕಮಾಂಡ್ ಮುಂದೆ ಯಾವುದೇ ಪ್ರಸ್ತಾಪವಿಲ್ಲ ಎಂದು ಹುಬ್ಬಳ್ಳಿಯಲ್ಲಿ ಮಾಧ್ಯಮದವರ ಮುಂದೆ ಹೇಳಿದ್ದರು.
ಪಕ್ಷವು ಕೇವಲ ಒಂದು ಸಮಸ್ಯೆ ಬಗ್ಗೆ ಹೆಚ್ಚು ಒತ್ತು ನೀಡುತ್ತಿದೆ ಮತ್ತು ಅದು ಕೋವಿಡ್-19 ಪರಿಸ್ಥಿತಿಯನ್ನು ನಿಭಾಯಿಸುವುದೇ ಹೊರತು ನಾಯಕತ್ವದ ಬದಲಾವಣೆಯಲ್ಲ” ಎಂದು ಜೋಶಿ ಸ್ಪಷ್ಟಪಡಿಸಿದ್ದರು.
ಏತನ್ಮಧ್ಯೆ, ನಾಯಕತ್ವ ಬದಲಾವಣೆಗೆ ಸಂಬಂಧಿಸಿದ ಚರ್ಚೆಗಳನ್ನು ಬಿಜೆಪಿ ರಾಜ್ಯಾಧ್ಯಕ್ಷ ಕಟೀಲು ತಳ್ಳಿಹಾಕಿದ್ದರು.
ಪಕ್ಷವು ಯಾವುದೇ ಮಟ್ಟದಲ್ಲಿ ಈ ವಿಷಯದ ಬಗ್ಗೆ ಚರ್ಚಿಸದ ಕಾರಣ, ನಾಯಕತ್ವದ ಬದಲಾವಣೆಯ ಪ್ರಶ್ನೆ ಉದ್ಭವಿಸುವುದಿಲ್ಲ” ಎಂದು ಕಟೀಲು ಮಂಗಳೂರಿನಲ್ಲಿ ಸುದ್ದಿಗಾರರಿಗೆ ತಿಳಿಸಿದ್ದರು.
ಯಡಿಯೂರಪ್ಪ ಅವರು ಮೇ 2023 ರವರೆಗೆ ಉಳಿದ (ಅಸೆಂಬ್ಲಿ) ಅವಧಿಗೆ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ. ಅವರು ನಮ್ಮ ಸರವ ಸಮ್ಮತ ನಾಯಕ ಮತ್ತು ಆಡಳಿತ ಮತ್ತು ಆಡಳಿತದಲ್ಲಿ ಅಪಾರ ಅನುಭವ ಹೊಂದಿದ್ದಾರೆ” ಎಂದು ಕಟೀಲು ಹೇಳಿದ್ದರು.
ಪಕ್ಷದ ಹೈಕಮಾಂಡ್ ಕೇಳಿದ ದಿನವೇ ಅವರು ಈ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭಾನುವಾರ ಹೇಳಿದ್ದರು. .
ಕರ್ನಾಟಕದಲ್ಲಿ ಬಿಜೆಪಿಯಲ್ಲಿ ಪರ್ಯಾಯ ನಾಯಕತ್ವವಿಲ್ಲ ಎಂದು ನನಗೆ ಅನಿಸುತ್ತಿಲ್ಲ. ಸಮರ್ಥರಾದ ಅನೇಕ ನಾಯಕರು ಇದ್ದಾರೆ” ಎಂದು ಅವರು ಹೇಳಿದ್ದರು.
14 ತಿಂಗಳ ಜನತಾದಳ-ಜಾತ್ಯತೀತ (ಜೆಡಿ-ಎಸ್) -ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಜುಲೈ 23, 2019ರಂದು ಕರ್ನಾಟಕ ವಿಧಾನಸಭೆಯಲ್ಲಿ ವಿಶ್ವಾಸಾರ್ಹ ಮತವನ್ನು ಕಳೆದುಕೊಂಡು ಪತನಗೊಂಡ ನಂತರ 78 ವರ್ಷದ ಯಡಿಯೂರಪ್ಪ ಅವರು 2019 ರ ಜುಲೈ 26 ರಂದು ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾದರು.


ನಿಮ್ಮ ಕಾಮೆಂಟ್ ಬರೆಯಿರಿ