ಬಿಜೆಪಿಯಲ್ಲಿ ಸಹಿ ಸಂಗ್ರಹ, ಒತ್ತಡ ಇಂತಹ ವಿಷಯಗಳಿಗೆ ಆಸ್ಪದವಿಲ್ಲ:ಕಟೀಲು

ಹುಬ್ಬಳ್ಳಿ: ನಮ್ಮದು ಶಾಸನ ಬದ್ಧ ಪಕ್ಷ. ಹೀಗಾಗಿ ಬಿಜೆಪಿಯಲ್ಲಿ ಸಹಿ ಸಂಗ್ರಹ ,ಒತ್ತಡ, ಒತ್ತಾಯ ಇಂತಹ ವಿಷಯಗಳಿಗೆ ಯಾವುದೇ ಆಸ್ಪದವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲು ಸ್ಪಷ್ಟಪಡಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪರ ಸಹಿ ಸಂಗ್ರಹ ಮಾಡಿದ್ದೆ ಎಂಬ ರೇಣುಕಾಚಾರ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದರು.
ಬಿಜೆಪಿಯಲ್ಲಿ ಯಡಿಯೂರಪ್ಪ ಸರವ ಸಮ್ಮತ ನಾಯಕ. ಹೀಗಾಗಿ ಅದು ಬಿಟ್ಟು ಯಾವುದೇ ಚರ್ಚೆಗಳಿಲ್ಲ. ನಮ್ಮಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ ಎಂದು ಹೇಳಿದರು.
ರಾಷ್ಟ್ರೀಯ ನಾಯಕರು, ಹೈಕಮಾಂಡ್‌ ಏನ್ ಸೂಚಿಸುತ್ತದೆಯೋ ಅದನ್ನು ಪಾಲನೆ ಮಾಡಲಾಗುತ್ತದೆ. ಅದನ್ನೇ ನಿನ್ನೆ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ರಾಷ್ಟ್ರೀಯ ನಾಯಕರು ಏನು ಹೇಳುತ್ತಾರೆ ಅದನ್ನು ಪಾಲಿಸುವುದು ನನ್ನ ಕೆಲಸ ಎಂದು ಹೇಳಿದ್ದಾರೆ.ಅದನ್ನು ಪಕ್ಷದ ನಾಯಕರು ಹಾಗೂ
ಕಾರ್ಯಕರ್ತರು ಅರ್ಥ ಮಾಡಿಕೊಳ್ಳಬೇಕು. ಹೀಗಾಗಿ ಬಿಜೆಪಿಯಲ್ಲಿ ಸಹಿ ಸಂಗ್ರಹಕ್ಕೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ವಿಚಾರವನ್ನು ನಾನು ಮಾಧ್ಯಮಗಳಲ್ಲಿ ನೋಡಿದ್ದೇನೆ. ಯಾರಾದರೂ ಇಂತಹ ಕೆಲಸಕ್ಕೆ ಮುಂದಾದರೆ ಅವರನ್ನು ಕರೆದು ಮಾತನಾಡುತ್ತೇನೆ.
ರೇಣುಕಾಚಾರ್ಯ ಅವರನ್ನೂ ಕರೆದು ಮಾತನಾಡುತ್ತೇನೆ ಎಂದು ತಿಳಿಸಿದರು.
ಶಾಸಕರು ಯಾರೂ ಅವರವರ ಕ್ಷೇತ್ರ ಬಿಟ್ಟು ತೆರಳಬಾರದು. ಕೊರೊನಾ ನಿಯಂತ್ರಣದ ಬಗ್ಗೆ ಕೆಲಸ ಮಾಡಬೇಕು. ಎಲ್ಲವನ್ನೂ ಪಕ್ಷ ಗಮನಿಸುತ್ತಿದೆ
ಇನ್ಮೇಲೆ ಅನಿವಾರ್ಯ ಇದ್ದರೆ ಮಾತ್ರ ಬೆಂಗಳೂರಿಗೆ ಹೋಗಬೇಕು. ಜನ ಆಶೀರ್ವಾದ ಮಾಡಿದ್ದು ಕೆಲಸ ಮಾಡಲು ಎಂದರು.

ಪ್ರಮುಖ ಸುದ್ದಿ :-   ವಿಜಯಪುರದಲ್ಲಿ ಪಾಕ್ ಪರ ಪೋಸ್ಟ್ ಮಾಡಿದ ವಿದ್ಯಾರ್ಥಿನಿ ; ದೂರಿನ ನಂತರ ಕ್ಷಮೆಯಾಚನೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement