ಭಾರತ ಸಹ ಎರಡನೇ ಅಲೆ ಉಲ್ಬಣದಲ್ಲಿ ತತ್ತರಿಸಿ ಹೋಗಿದೆ. ಕೋವಿಡ್ -19 ಸಾಂಕ್ರಾಮಿಕ ರೋಗ ಜಗತ್ತಿಗೆ ಕಾಲಿಟ್ಟ ಬಳಿಕ ಸಾಕಷ್ಟು ಆಚಾರ-ವಿಚಾರಗಳು ಬದಲಾಗಿವೆ.
ಈಗ ಮದವೆ ವಿಚಾರದಲ್ಲಿಯೂ ಆಲೋಚನಾ ಕ್ರಮಗಳು ಬದಲಾಗುತ್ತಿವೆ. ಇಂಥದ್ದೊಂದು ಆಲೋಚನಾ ಕ್ರಮ ಬದಲಾವಣೆ ತೋರಿಸುವ ವಧು-ವರರ ಜಾಹೀರಾತು ವೈರಲ್ ಆಗಿದೆ. ಈ ಜಾಹೀರಾತಿನಲ್ಲಿ ಹುಡುಗಿಗೆ ಕೋವಿಶೀಲ್ಡ್ ಲಸಿಕೆ ಹಾಕಿಸಿಕೊಂಡಿರುವ ಹುಡುಗನನ್ನೇ ಹುಡುಕಲಾಗುತ್ತಿದೆ…!
ವೈವಾಹಿಕ ಮಾಹಿತಿ (ಮ್ಯಾಟ್ರಿಮೋನಿಯಲ್) ಜಾಹೀರಾತಿನಲ್ಲಿ ಕೋವಿಶೀಲ್ಡ್ ಲಸಿಕೆಯ ಎರಡೂ ಡೋಸ್ ಅನ್ನು ಹಾಕಿಸಿಕೊಂಡಿರುವ ವರನನ್ನು ಯುವತಿ ಹುಡುಕುತ್ತಿದ್ದಾಳೆ ಎಂದು ಹೇಳಲಾಗಿದೆ..! ಜೂನ್ 4, 2021 ರಂದು ಪತ್ರಿಕೆಯೊಂದರ ವೈವಾಹಿಕ ಅಂಕಣದ ಈ ಜಾಹೀರಾತಿನಲ್ಲಿ ಸ್ವಯಂ ಉದ್ಯೋಗಿ ರೋಮನ್ ಕ್ಯಾಥೊಲಿಕ್ ಮಹಿಳೆ ತನ್ನ ಧರ್ಮದ ವ್ಯಕ್ತಿಯೊಂದಿಗೆ ವಿವಾಹವಾಗಲು ಬಯಸಿದ್ದಾಳೆ. ಆದರೆ, ಷರತ್ತು.. ಅದು, ಕೋವಿಶೀಲ್ಡ್ ಲಸಿಕೆಯ ಎರಡೂ ಡೋಸ್ಗಳನ್ನು ತಾನು ಹಾಕಿಸಿಕೊಂಡಿದ್ದೇನೆ. ಅದೇ ರೀತಿ, ತನ್ನನ್ನು ಮದುವೆಯಾಗುವ ಹುಡುಗ ಸಹ ಎರಡೂ ಡೋಸ್ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಪ್ರಕಟಣೆ ಹೊರಡಿಸಿರುವುದು ವೈರಲ್ ಆಗುತ್ತಿದೆ.
ಕಾಂಗ್ರೆಸ್ ಸಂಸದ ಶಶಿ ತರೂರ್ ಈ ಫೋಟೋವನ್ನು ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ. ”ಲಸಿಕೆ ಹಾಕಿಸಿಕೊಂಡ ವಧು ಲಸಿಕೆ ಹಾಕಿಸಿಕೊಂಡ ವರನನ್ನು ಹುಡುಕುತ್ತಿದ್ದಾಳೆ..! ತನ್ನ ಆದ್ಯತೆಯ ಮದುವೆ ಆಕೆಗೆ ಬೂಸ್ಟರ್ ಡೋಸ್ ಆಗುವುದರಲ್ಲಿ ಸಂಶಯವಿಲ್ಲ!? ಇದು ನಮ್ಮ ಹೊಸ ಸಾಮಾನ್ಯ ಆಲೋಚನೆಯಾಗಲಿದೆಯೇ ಎಂದು ತರೂರ್ ಕ್ಯಾಪ್ಷನ್ ಹಾಕಿಕೊಂಡಿದ್ದಾರೆ.
ಈ ರೀತಿ ಜಾಹೀರಾತು ಹಾಕಿದ ಹುಡುಗಿ ಯಾರೆಂಬುದಕ್ಕೆ ಉತ್ತರವೂ ಇದೆ.
ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಕಲಿ ಜಾಹೀರಾತು ಎಂದು ತಿಳಿದುಬಂದಿದೆ. ಕೋವಿಡ್ – 19 ಲಸಿಕೆಯ ಡೋಸ್ ಪಡೆಯುವುದನ್ನು ಪ್ರೋತ್ಸಾಹಿಸಲು ಗೋವಾ ನಿವಾಸಿಯೊಬ್ಬರ ಅಭಿಯಾನವಾಗಿದೆ. ಗೋವಾದ ಅಲ್ಡೋನಾದಲ್ಲಿ ಸಮುದಾಯ ಫಾರ್ಮಸಿಸ್ಟ್ ಆದ ಸವಿಯೊ ಫಿಗುರೆಡೊ ಈ ಜಾಹೀರಾತನ್ನು ರಚಿಸಿದ್ದು ಲಸಿಕೆಗೆ ಜನರನ್ನು ಉತ್ತೇಜಿಸುವ ಸಲುವಾಗಿ ಹೀಗೆ ಮಾಡಿದ್ದಾರಂತೆ. ಏನಕೇನ ಪ್ರಕಾರೇಣ..
ನಿಮ್ಮ ಕಾಮೆಂಟ್ ಬರೆಯಿರಿ