
ಬೆಂಗಳೂರು: ಲಾಕ್ ಡೌನ್ ಏಕಾಏಕಿ ತೆರವುಗೊಳಿಸುವುದಿಲ್ಲ. ಎಲ್ಲಾ ಸಚಿವರು ಸಭೆ ಮಾಡಿದ್ದೇವೆ. ಐದು ಹಂತದಲ್ಲಿ ತೆರವುಗಳಿಸಲು ಯೋಜಿಸಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ ಹೇಳಿದರು.
ವೈದ್ಯರಿಗೆ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಮಾತನಾಡಿದ ಅವರು, ಪಾರ್ಕ್ ನಲ್ಲಿ ವಾಕ್ ಮಾಡಲು ಅವಕಾಶ ನೀಡಲು ಸರ್ಕಾರದ ಹಂತದಲ್ಲಿ ಚಿಂತನೆ ನಡೆಯುತ್ತಿದೆ. ಬೆಳಗ್ಗೆ 6 ಗಂಟೆಯಿಂದ 10 ಗಂಟೆ ವರೆಗೂ ಅಗತ್ಯ ವಸ್ತುಗಳ ಖರೀದಿಗೆ ಇರುವ ಅವಕಾಶವನ್ನು ಮಧ್ಯಾಹ್ನ 12 ಗಂಟೆವರೆಗೂ ವಿಸ್ತರಿಸುವ ಉದ್ದೇಶವಿದೆ.
ಜೂ. 12 ರಂದು ತಜ್ಞರ ಜೊತೆ ಮತ್ತೊಂದು ಸುತ್ತಿನ ಸಭೆ ನಡೆಯಲಿದೆ. ಅಂತರ್ ಜಿಲ್ಲೆ ಓಡಾಟಕ್ಕೆ ಬ್ರೇಕ್ ಸಾಧ್ಯತೆ ಇದೆ. ಕೆಲ ಜಿಲ್ಲೆಗಳಲ್ಲಿ ಸೋಂಕು ಹೆಚ್ಚಿದೆ. ಕೆಲ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಕಡಿಮೆಯಿದೆ. ಹೀಗಾಗಿ ಅಂತರ್ ಜಿಲ್ಲೆ ಓಡಾಟಕ್ಕೆ ಅವಕಾಶನೀಡುವುದು ಅನುಮಾನ. ಈ ವಿಚಾರದಲ್ಲಿ ಮುಖ್ಯಮಂತ್ರಿಗಳು ನಿರ್ಧಾರ ಮಾಡುತ್ತಾರೆ ಎಂದು ಅವರು ಹೇಳಿದರು.

ಬೆಂಗಳೂರಿನ ಕೋವಿಡ್ -19 ಅಂಕಿಅಂಶಗಳನ್ನು ಸೂಚಿಸಿದ ಅಶೋಕ, “ಬೆಂಗಳೂರು ಪ್ರಸ್ತುತ ಸುಮಾರು 2 ಸಾವಿರ ಪ್ರಕರಣಗಳನ್ನು ವರದಿ ಮಾಡುತ್ತಿದೆ. ನಾವು ಸಾಮಾನ್ಯ ಜೀವನವನ್ನು ಹೊಂದಲು ಬಯಸಿದರೆ, ಕ್ಯಾಸೆಲೋಡ್ ದಿನಕ್ಕೆ 500 ಕ್ಕೆ ಇಳಿಯಬೇಕು. ಅನ್ಲಾಕ್ ಪ್ರಕ್ರಿಯೆಯನ್ನು ಒಮ್ಮೆ ಹೊಂದಿಸಿದ ನಂತರ ಸಕಾರಾತ್ಮಕತೆ ದರಏನೆಂದು ನಾವು ವಿಶ್ಲೇಷಿಸುತ್ತೇವೆ ಎಂದು ತಿಳಿಸಿದರು.
ಮಕ್ಕಳಿಗೆ ಚಿಕಿತ್ಸೆ ನೀಡುವಾಗ ಪೋಷಕರು ಸ್ಥಳದಲ್ಲೇ ಇರುವ ವ್ಯವಸ್ಥೆ ಮಾಡಲು ಆಯುಕ್ತರಿಗೆ ಸೂಚನೆ ನೀಡಲಾಗಿದೆ. ಮಕ್ಕಳಿಗೆ ಚಿಕಿತ್ಸೆ ನೀಡಬೇಕು ಅಂದರೆ ಪೋಷಕರು ಇರಲೇಬೇಕು. ಹಾಗಾಗಿ ಪೋಷಕರು ಸಹ ಮಕ್ಕಳ ಜೊತೆಗೆ ಇರುವ ಕ್ಯಾಬಿನ್ ವ್ಯವಸ್ಥೆಗೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ ಮೊದಲ ಬಾರಿಗೆ ಮಕ್ಕಳಿಗೆ ಸಂಬಂದಿಸಿದಂತೆ ವೈದ್ಯರಿಗೆ ತರಬೇತಿ ನಡೆಸಲಾಗಿದೆ. ಮಕ್ಕಳಿಗೆ ಕೋವಿಡ್ ಬಂದರೆ ಚಿಕಿತ್ಸೆ ನೀಡುವ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಬೆಂಗಳೂರಿನಲ್ಲಿ 25 ಲಕ್ಷ ಮಕ್ಕಳಿದ್ದಾರೆ ಎಂದು ಅವರು ಹೇಳಿದರು. ಬೆಂಗಳೂರಿನಲ್ಲಿ 10 ಜನ ಮಕ್ಕಳ ತಜ್ಞರನ್ನು ಗುರುತಿಸಿ. ಮಕ್ಕಳ ವಿಚಾರಕ್ಕೆ ಸಂಬಂಧಿಸಿದಂತೆ ಚಿಕಿತ್ಸೆ ಬಗ್ಗೆ ಸಲಹೆ ನೀಡಲಾಗುವುದು.


ನಿಮ್ಮ ಕಾಮೆಂಟ್ ಬರೆಯಿರಿ