ಪ್ರಥಮ ಪಿಯುಸಿಗೆ ಪರೀಕ್ಷೆಯಲ್ಲ,ಅದು ಕೇವಲ ಅಸೈನ್ಮೆಂಟ್‌ ಅಷ್ಟೆ: ಸಚಿವರ ಸ್ಪಷ್ಟನೆ

ಬೆಂಗಳೂರು: ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಯಾವುದೇ ಪರೀಕ್ಷೆ ನಡೆಸುತ್ತಿಲ್ಲ. ಮಕ್ಕಳ ಕಲಿಕೆಗೆ ಕೇವಲ ಅಸೈನ್ಮೆಂಟ್ ಮಾತ್ರ ನೀಡಲಾಗುತ್ತಿದೆ. ಇದು ಫಲಿತಾಂಶಕ್ಕೆ ಮಾನದಂಡ ಅಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್‌ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಪ್ರಥಮ ಪಿಯುಸಿಗೆ ಪರೀಕ್ಷೆ ನಡೆಸುತ್ತಿಲ್ಲ. ಈಗ ತಿಳಿಸಿರುವಂತೆ ಮಕ್ಕಳು ಮನೆಯಲ್ಲೇ ಇದ್ದು ೧೦ ದಿನ ಪಠ್ಯ ಪುಸ್ತಕ ನೋಡಿಯೇ ಉತ್ತರ ಬರೆದು ಕಳುಹಿಸಬಹುದು, ಇದು ಪರೀಕ್ಷಾ ಫಲಿತಾಂಶಕ್ಕೆ ಮಾನದಂಡವಲ್ಲ, ಪರೀಕ್ಷೆ ನಡೆಸಲಾಗುತ್ತಿದೆ ಎಂಬುದು ಸರಿಯಲ್ಲ ಎಂದು ಅವರು ಹೇಳಿದರು.
ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನಕ್ಕೆ ಇದನ್ನು ಪರಿಗಣಿಸಲು ಮತ್ತು ಸೇತು ಬಂಧದ ಮಾದರಿಯಲ್ಲೇ ಮನೆಯಲ್ಲೇ ಕುಳಿತು ಕಲಿಕೆ ಮುಂದುವರೆಸುವ ಒಂದು ಪ್ರಯತ್ನವಷ್ಟೇ ಎಂದವರು ಹೇಳಿದರು.
ಪ್ರಥಮ ಪಿಯುಸಿಗೆ ಪರೀಕ್ಷೆ ನಡೆಸಲಾಗುತ್ತಿದೆ. ಅದರ ಮೇಲೆ ಫಲಿತಾಂಶ ನೀಡಲಾಗುತ್ತಿದೆ ಎಂಬ ಗೊಂದಲ ಬೇಡ, ಯಾರೂ ಆತಂಕಕ್ಕೆ ಒಳಗಾಗಬೇಡಿ, ಇದು ಪರೀಕ್ಷೆ ಇಲ್ಲ ಎಂದವರು ತಿಳಿಸಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement