ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಸುಳ್ಳು ನೋಟಿಸ್‌ ಕಳುಹಿಸಿ ವಿಧವೆಯಿಂದ 80 ಲಕ್ಷ ರೂ. ಎಗರಿಸಿದ ನಕಲಿ ವೈದ್ಯ..!

ಬೆಂಗಳೂರು: ಹೃದಯ ತಜ್ಞ ಎಂದು ಹೇಳಿಕೊಂಡು ನಕಲಿ ವೈದ್ಯನೊಬ್ಬ ಬೆಂಗಳೂರಿನ ಮಹಿಳೆಯೊಬ್ಬರಿಗೆ ಮೋಸ ಮಾಡಿರುವ ಘಟನೆ ವರದಿಯಾಗಿದೆ.
ಹೃದಯ ಸಂಬಂಧಿ ಕಾಯಿಲೆ ಇರುವ ಕಾರಣ ಹೃದಯ ತಜ್ಞರಿಗಾಗಿ ಇನ್​ಸ್ಟಾಗ್ರಾಂನಲ್ಲಿ ಹುಡುಕಾಟ ನಡೆಸಿದ್ದ ಮಹಿಳೆ ಈ ನಕಲಿ ವೈದ್ಯನಿಂದ 80 ಲಕ್ಷ ರೂ.ಗಳನ್ನು ಕಳೆದುಕೊಂಡಿದ್ದಾರೆ. ಈ ಮಹಿಳೆ ತನಗೆ ಚಿಕಿತ್ಸೆಗಾಗಿ ಇನ್​ಸ್ಟಾಗ್ರಾಂನಲ್ಲಿ ವೈದ್ಯರನ್ನು ಹುಡುಕುವ ವೇಳೆ ಮಾಬಿಸ್ ಹಾರ್ಮನ್ ಎಂಬ ಹೆಸರಿನ ಪ್ರೊಫೈಲ್​ ಕಂಡಿದೆ. ಅದನ್ನು ಹಿಂಬಾಲಿಸಿದಾಗ ಆ ವ್ಯಕ್ತಿಯು ತಾನು ಹೃದಯ ತಜ್ಞ ಎಂದು ಪರಿಚಯಿಸಿಕೊಂಡಿದ್ದು, ಮಹಿಳೆಗೆ ಬೇಕಾದ ವೈದ್ಯಕೀಯ ಸಲಹೆ ನೀಡುವ ಭರವಸೆ ಕೊಟ್ಟಿದ್ದಾನೆ. ಆತನ ಮಾತನ್ನು ಸತ್ಯವೆಂದು ನಂಬಿದ ಮಹಿಳೆ ಇದೀಗ ಒಟ್ಟು 80 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.
ವಿಧವೆ ಮಹಿಳೆಗೆ ಹೃದಯ ಸಂಬಂಧಿ ತೊಂದರೆ ಇತ್ತು. ಹೀಗಾಗಿ ಅವರು ತಜ್ಞ ವೈದ್ಯರಿಂದ ಸಲಹೆ ಪಡೆಯಲು ಆನ್​ಲೈನ್​ ಮೊರೆ ಹೋಗಿದ್ದಾರೆ. ಈ ವೇಳೆ ಮಾಬಿಸ್ ಹಾರ್ಮನ್ ಸಿಕ್ಕಿದ್ದಾನೆ. ಆತ ನಕಲಿ ವೈದ್ಯ ಎನ್ನುವುದು ಮಹಿಳೆಗೆ ಗೊತ್ತಾಗದ ಆತನ ಜೊತೆ ವಾಟ್ಸ್ಯಾಪ್​ನಲ್ಲಿ ಸಂವಹನದ ಮೂಲಕ ತನ್ನ ಸಮಸ್ಯೆ ಹೇಳಿಕೊಂಡಿದ್ದಾಳೆ ಹಾಗೂ ಆತ ಕೊಡುವ ಸಲಹೆಗಳನ್ನ ಪಾಲಿಸುತ್ತಿದ್ದ ಮಹಿಳೆಗೆ ಕೊನೆಗೆ ಮೋಸಹೋದ ಮೇಲೆ ಗೊತ್ತಾಗಿದೆ.
ಪರಿಚಯವಾದ ಕೆಲವು ದಿನಗಳ ನಂತರ ಮಾಬಿಸ್ ಹಾರ್ಮನ್ ಎಂಬಾತ ಒಂದು ದಿನ ಮಹಿಳೆಗೆ ಗೊತ್ತಿಲ್ಲದಂತೆ ಉಡುಗೊರೆ ಕಳುಹಿಸಿಕೊಡುವ ನಾಟಕವಾಡಿದ್ದಾನೆ. ಈ ವೇಳೆ ಬ್ರಿಟನ್​ (ಯುಕೆ) ದೇಶದಿಂದ ಮಾಬಿಸ್​ ಅವರಿಂದ ಕರೆನ್ಸಿ ಹಾಗೂ ಉಡುಗೊರೆ ನಿಮ್ಮ ಹೆಸರಿಗೆ ಬಂದಿದೆ ಎಂದು ಕಸ್ಟಮ್ಸ್​ ಅಧಿಕಾರಿಗಳ ಹೆಸರಲ್ಲಿ ಮಹಿಳೆಗೆ ದೂರವಾಣಿ ಕರೆ ಹೋಗಿದೆ.
ಅಷ್ಟಾದರೂ ಮಹಿಳೆ ಆ ಉಡುಗೊರೆ ಸ್ವೀಕರಿಸಿರಲಿಲ್ಲ. ಇದಾದ ಎರಡು ಎರಡು ದಿನಗಳ ಬಳಿಕ ಕಸ್ಟಮ್ಸ್​ ಅಧಿಕಾರಿಗಳ ಹೆಸರಲ್ಲಿ ಮತ್ತೆ ದೂರವಾಣಿ ಕರೆ ಬಂದಿದೆ. ನೀವು ತುಂಬಾ ದಿನವಾದರೂ ಉಡುಗೊರೆ ಸ್ವೀಕರಿಸಿಲ್ಲ, ಆ ಕಾರಣದಿಂದ ನಿಮ್ಮ ಹೆಸರಿಗೆ ವಿತ್ತ ಸಚಿವಾಲಯದಿಂದ ನೋಟಿಸ್ ಬಂದಿದೆ ಎಂದು ಹೆದರಿಸಿ  ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಸಹಿ ಇರುವ ನೋಟಿಸ್‌ ಕಳುಹಿಸಿದ್ದಾನೆ.
ಇದರಿಂದ ಮತ್ತಷ್ಟು ಹೆದರಿದ ಮಹಿಳೆ ಎಷ್ಟು ಹಣ ಕಟ್ಟಬೇಕು ಎಂದು ಕೇಳಿದಾ ಕರೆನ್ಸಿ, ಉಡುಗೊರೆ, ಕರೆನ್ಸಿ ಎಕ್ಸ್​ಚೇಂಜ್​ ಪ್ರಕ್ರಿಯೆ ಸೇರಿಸಿ 80 ಲಕ್ಷ ರೂಪಾಯಿ ಆಗುತ್ತದೆ ಎಂದಿದ್ದಾರೆ. ಅವರ ಮಾತನ್ನು ನಂಬಿದ ಮಹಿಳೆ ಹಣ ಕಟ್ಟಿದ್ದಾರೆ. ಆದರೆ, ನಂತರ ಗಿಫ್ಟ್​, ಕರೆನ್ಸಿ ಯಾವುದೂ ಕೈ ಸೇರದಿದ್ದಾಗ ಮಹಿಳೆಗೆ ತಾನು ಮೋಸ ಹೋಗಿರುವುದು ಅರಿವಾಗಿದೆ. ಸದ್ಯ ನಕಲಿ ಹೃದಯ ವೈದ್ಯನ ವಿರುದ್ಧ ಮಹಿಳೆ ದೂರು ನೀಡಿದ್ದಾರೆ.

ಪ್ರಮುಖ ಸುದ್ದಿ :-   ಕರ್ನಾಟಕದಲ್ಲಿ ಪೂರ್ವ ಮುಂಗಾರು ಚುರುಕು; ಏಪ್ರಿಲ್‌ 19 ರಿಂದ ಮೂರು ದಿನ ಈ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement