ಸಿಇಟಿ 2021: ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ

ಬೆಂಗಳೂರು: ರಾಜ್ಯದ ಸಂಸ್ಥೆಗಳಲ್ಲಿ ವಿವಿಧ ವೃತ್ತಿಪರ ಕೋರ್ಸ್​​ಗಳಿಗೆ ಸೇರ ಬಯಸುವ ವಿದ್ಯಾರ್ಥಿಗಳು ಅಧಿಕೃತ ಪೋರ್ಟಲ್​​ನಲ್ಲಿ ಸಿಇಟಿಗೆ ಜೂನ್​ 15ರಿಂದ ಅರ್ಜಿ ಸಲ್ಲಿಸಬಹುದಾಗಿದೆ. 2021ರ ಸಿಯಟಿ​ ಪರೀಕ್ಷೆ ಆಗಸ್ಟ್​ 28 ಮತ್ತು 29ರಂದು ನಡೆಯಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಂಗಳವಾರದಿಂದ (ಜೂನ್‌ ೧೫) ಜುಲೈ 10ರ ವರೆಗೆ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಎಂಜಿನಿಯರಿಂಗ್, ಯೋಗ, ನ್ಯಾಚುರೋಪತಿ, ಬಿ-ಫಾರ್ಮ್, ಕೃಷಿ ವಿಜ್ಞಾನ, ವೆಟರಿನರಿ ಕೋರ್ಸ್ ಸೀಟು ಹಂಚಿಕೆಗೆ ರಾಜ್ಯ ಸರ್ಕಾರ ಸಿಇಟಿ ನಡೆಸುತ್ತದೆ. ಈ ಹಿನ್ನೆಲೆಯಲ್ಲಿ ಪರೀಕ್ಷೆಗೆ ನೋಂದಣಿ ಮಾಡಿಕೊಳ್ಳಲು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ ಅವಕಾಶವಿದೆ.
ಆಗಸ್ಟ್ 28 ಮತ್ತು 29ರಂದು ಸಿಇಟಿ ಪರೀಕ್ಷೆ ನಡೆಸಲು ಕೆಇಎ ಈಗಾಗಲೇ ವೇಳಾಪಟ್ಟಿ ಪ್ರಕಟ ಮಾಡಿದೆ. ಪರೀಕ್ಷೆ ಬರೆಯಲು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಕೆಇಎ ವೇಳಾಪಟ್ಟಿ

-cetonline.karnataka.gov.in ವೆಬ್‌ಸೈಟ್‌ಗೆ ಭೇಟಿ ನೀಡಿ

– ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಕೆ- ಜೂನ್ 15 ರಿಂದ ಜುಲೈ 10ವರೆಗೆ

– ಆನ್‍ಲೈನ್ ಮೂಲಕ ಶುಲ್ಕ ಪಾವತಿಗೆ ಕೊನೆ ದಿನ- ಜುಲೈ 13

– ವಿಶೇಷ ಪ್ರವರ್ಗಗಳ ದಾಖಲಾತಿ ಸಲ್ಲಿಕೆ- ಜುಲೈ 14 ರಿಂದ ಜುಲೈ 20

ಸಿಇಟಿ ಪರೀಕ್ಷೆಗೆ ಪ್ರವೇಶ ಪತ್ರ ಡೌನ್‍ಲೋಡ್ ಮಾಡಿಕೊಳ್ಳುವುದು- ಆಗಸ್ಟ್ 13ರಿಂದ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ 750 ರೂ.ಗಳನ್ನು ನೊಂದಣಿ ಶುಲ್ಕವನ್ನಾಗಿ ಕಟ್ಟಬೇಕು. ರಾಜ್ಯಾದ್ಯಂತ ಸುಮಾರು 500 ಪರೀಕ್ಷಾ ಕೇಂದ್ರಗಳಿವೆ.
ಅರ್ಜಿ ಶುಲ್ಕವನ್ನು ಆನ್​ಲೈನ್​ ಅಥವಾ ಆಫ್​​ಲೈನಲ್ಲಿ ಪಾವತಿಸಬೇಕು(ನೆಟ್​ ಬ್ಯಾಂಕಿಂಗ್/ಕ್ರೆಡಿಟ್ ಕಾರ್ಡ್​/ಡೆಬಿಟ್ ಕಾರ್ಡ್​). ಅಭ್ಯರ್ಥಿಗಳು ಆಫ್​​ಲೈನ್​ನಲ್ಲಿ ಕೂಡ ಶುಲ್ಕವ ಪಾವತಿಸಬಹುದಾಗಿದೆ. ಅವರು -ಚಲನ್​ನನ್ನು ಡೌನ್​ಲೋಡ್ ಮಾಡಿಕೊಂಡು, ಸ್ಟೇಟ್​ ಬ್ಯಾಂಕ್ ಆಫ್​ ಇಂಡಿಯಾ ಅಥವಾ ಐಸಿಐಸಿಐ ಬ್ಯಾಂಕ್​​ನಲ್ಲಿ ಶುಲ್ಕ ಕಟ್ಟಬಹುದು.

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement