ಪಂಚನಹಳ್ಳಿಯಲ್ಲಿ ನಡೆದ ನಟ ಸಂಚಾರಿ ವಿಜಯ ಅಂತ್ಯಕ್ರಿಯೆ

ಚಿಕ್ಕಮಗಳೂರು : ಬೈಕ್ ಅಪಘಾತದಲ್ಲಿ ಮೃತಪಟ್ಟ ನಟ ಸಂಚಾರಿ ವಿಜಯ್ ಅವರ ಮೃತ ದೇಹವನ್ನು, ಅಂತ್ಯಕ್ರಿಯೆ ಜನಿಸಿದ ಊರು ಪಂಚನಹಳ್ಳಿಯಲ್ಲಿ ನೆರವೇರಿತು.
ನಟ ಸಂಚಾರಿ ವಿಜಯ್ ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕಾಗಿ ಪಂಚನಹಳ್ಳಿಯ ಗ್ರಾಮಸ್ಥರು ಸೇರಿದಂತೆ ಅಕ್ಕ ಪಕ್ಕದ ಊರಿನವರು ವೀಕ್ಷಿಸಿದರು. ಆ ಬಳಿಕ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿತು. ಈ ಮೂಲಕ ನಟ ಸಂಚಾರಿ ವಿಜಯ್ ಮಣ್ಣಲ್ಲಿ ಮಣ್ಣಾದರು.
ಅಂತ್ಯಕ್ರಿಯೆ ನಡೆಯುವ ಸ್ಥಳದಲ್ಲಿ ಪೊಲೀಸರು ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಗೌರವ ಸಮರ್ಪಣೆ ಮಾಡಿದರು. ಸರಕಾರಿ ಗೌರವದ ಬಳಿಕ ವೀರಶೈವ ಲಿಂಗಾಯತ ಧಾರ್ಮಿಕ ವಿಧಿಯ ಪ್ರಕಾರ ಶವ ಸಂಸ್ಕಾರ ನಡೆಲಾಯಿತು.
ಅಂತ್ಯ ಸಂಸ್ಕಾರ ನಡೆಯುವ ಸ್ಥಳದಲ್ಲಿ ಹೆಚ್ಚಿನ ಜನರಿಗೆ ಅವಕಾಶ ನೀಡಿರಲಿಲ್ಲ. ಸ್ಥಳದಲ್ಲಿ ಸಚಿವ ಮಾಧುಸ್ವಾಮಿ, ಶಾಸಕರಾದ ಸಿಟಿ ರವಿ, ಬೆಳ್ಳಿಪ್ರಕಾಶ್, ಸೇರಿದಂತೆ ಹಲವು ಗಣ್ಯರು ಹಾಜರಿದ್ದರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement