ಪಿಎನ್‌ಬಿ ಬ್ಯಾಂಕ್ ವಂಚನೆ ಪ್ರಕರಣ: ಚೋಕ್ಸಿ ಸೇರಿ‌ 21 ಜನರ ವಿರುದ್ಧ ಸಿಬಿಐ ಹೊಸ ಆರೋಪಪಟ್ಟಿ ಸಲ್ಲಿಕೆ

ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಸಾವಿರಾರು ಕೋಟಿ ರೂಪಾಯಿ ವಂಚನೆ ಆರೋಪ ಹೊತ್ತ ಸದ್ಯ ಆಂಟಿಗುವಾದಲ್ಲಿ ಸಿಕ್ಕಿಬಿದ್ದಿರುವ ವಂಚಕ ಉದ್ಯಮಿ ಮೆಹುಲ್ ಚೋಕ್ಸಿ ಸೇರಿದಂತೆ 21 ಮಂದಿಯ ವಿರುದ್ದ‌ ಸಾಕ್ಷ್ಯ ನಾಶ ಆರೋಪದಡಿ ಸಿಬಿಯ ನ್ಯಾಯಾಲಯಕ್ಕೆ ಹೊಸ ಆರೋಪ ಪಟ್ಟಿ ಸಲ್ಲಿಸಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ 13 ಸಾವಿರ ಕೋಟಿ ವಂಚಿಸಿ ವಜ್ರದ ವ್ಯಾಪಾರಿಗಳಾದ ಮೆಹುಲ್ ಚೋಕ್ಸಿ ಮತ್ತು ಅವರ ಸೋದರ ಸಂಬಂಧಿ ನೀರವ್ ಮೋದಿ ದೇಶಬಿಟ್ಟು ಒಂದೊಂದು ದೇಶದಲ್ಲಿ ಅಡಗಿ ಕುಳಿತಿದ್ದಾರೆ.
ಮೆಹುಲ್ ಚೋಕ್ಸಿ ಮತ್ತು ಇತರ 21 ಜನರ ವಿರುದ್ಧ ಹೊಸ ಆರೋಪ ಪಟ್ಟಿ ಸಲ್ಲಿಸಿರುವ ಸಿಬಿಐ ,ಸಾಕ್ಷ್ಯ ನಾಶ ಸೇರಿದಂತೆ ಹಲವು ಆರೋಪಗಳನ್ನು ಹೊರಿಸಿದೆ.
ಮೆಹುಲ್‌ ಚೋಕ್ಸಿಗೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ಅಧಿಕಾರಿಗಳು ಸಾಲ ನೀಡುವ ಮುನ್ನ 165 ಮುಚ್ಚಳಿಕೆ ಪಡೆಯಲಾಗಿತ್ತು.ಜೊತೆಗೆ 58 ಕ್ರೆಡಿಟ್ ಪತ್ರಗಳನ್ನು 2017 ರಲ್ಲಿ ಪಡೆಯಲಾಗಿತ್ತು.ಇವೆಲ್ಲವೂ ನಕಲಿಯಾಗಿವೆ, ಇದರಿಂದಾಗಿ ಬ್ಯಾಂಕಿಗೆ, 6,097 ಕೋಟಿ ನಷ್ಟವಾಗಿದೆ ಎಂದು ಆರೋಪಪಟ್ಟಿಯಲ್ಲಿ ಮಾಹಿತಿ ನೀಡಲಾಗಿದೆ
ಸಿಬಿಐ ಸಲ್ಲಿಸಿರುವ ಪೂರಕ ಸಾಕ್ಷಾಧಾರಗಳ ಆರೋಪಪಟ್ಟಿಯಲ್ಲಿ ಮೆಹುಲ್ ಚೋಕ್ಸಿ ವಿರುದ್ಧ ಕಲಂ 201 ಸಾಕ್ಷ್ಯಗಳ ನಾಶ, ಮತ್ತು ಮೋಸ, ಕ್ರಿಮಿನಲ್ ಪಿತೂರಿ ಮತ್ತು ಭ್ರಷ್ಟಾಚಾರ ಕಾಯ್ದೆಯ ತಡೆಗಟ್ಟುವಿಕೆ ವಿವಿಧ ಪ್ರಕರಣಗಳಲ್ಲಿ ಪೂರಕ ದಾಖಲೆಗಳನ್ನು ಸಲ್ಲಿಸಲಾಗಿದೆ.
ಮೆಹುಲ್ ಚೋಕ್ಸಿ ಅವರಲ್ಲದೆ ಪಿಎನ್‌ಬಿ ನಿವೃತ್ತ ಉಪ ವ್ಯವಸ್ಥಾಪಕ ಗೋಕುಲ್ನಾಥ್ ಶೆಟ್ಟಿ, ಏಕ‌ಗವಾಕ್ಷಿ ವಿಭಾಗದ ಹನುಮಂತ್ ಕರತ್, ಅಲಹಾಬಾದ್ ಬ್ಯಾಂಕ್‌ನ ಮಾಜಿ ವ್ಯವಸ್ಥಾಪಕ ನಿರ್ದೇಶಕ ಉಷಾ ಅನಂತಸುಬ್ರಮಣ್ಯಂ, ಪಿಎನ್‌ಬಿ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕರಾದ ಕೆ.ವಿ.ಬ್ರಹ್ಮಜಿ ರಾವ್ ಮತ್ತು ಸಂಜೀವ್ ಶರಣ್ ಸೇರಿದಂತೆ 21 ವ್ಯಕ್ತಿಗಳು ಮತ್ತು ಕಂಪನಿಗಳನ್ನು ಆರೋಪಪಟ್ಟಿಯಲ್ಲಿ ಹೆಸರಿಸಲಾಗಿದೆ.

ಪ್ರಮುಖ ಸುದ್ದಿ :-   ಉದ್ಯಮಿ, ಬಿಜೆಪಿ ನಾಯಕ ಗೋಪಾಲ ಖೇಮ್ಕಾ ಹತ್ಯೆ ಪ್ರಕರಣ ; ಅವರ ಅಂತ್ಯಕ್ರಿಯೆಗೆ ಹಾರ ಹಿಡಿದುಕೊಂಡು ಬಂದ ಆರೋಪಿ...!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement