ಅಲೋಪತಿ ಬಗ್ಗೆ ‘ಸುಳ್ಳು ಮಾಹಿತಿ’ ಹರಡಿದ ಆರೋಪ: ಛತ್ತೀಸಗಡದಲ್ಲಿ ಬಾಬಾ ರಾಮದೇವ್ ವಿರುದ್ಧ ಎಫ್‌ಐಆರ್

ರಾಯ್ಪುರ: ಖ್ಯಾತ ಯೋಗ ಗುರು ರಾಮದೇವ್‌ ವಿರುದ್ಧ ಛತ್ತೀಸ್‌ಗಡದಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ವರದಿಗಳ ಪ್ರಕಾರ, ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಛತ್ತೀಸ್‌ಗಡದ ಘಟಕವು ನೀಡಿದ ದೂರಿನ ಆಧಾರದ ಮೇಲೆ ಬಾಬಾ ರಾಮ್‌ದೇವ್ ವಿರುದ್ಧ ಬುಧವಾರ ರಾತ್ರಿ ಪ್ರಕರಣ ದಾಖಲಿಸಲಾಗಿದೆ ಎಂದು ರಾಯ್ಪುರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಯಾದವ್ ತಿಳಿಸಿದ್ದಾರೆ.
ರಾಮದೇವ್ ವಿರುದ್ಧ ಸೆಕ್ಷನ್ 188, 269 ಹಾಗೂ 504 ಹಾಗೂ ಐಪಿಸಿ ಮತ್ತು ವಿಪತ್ತು ನಿರ್ವಹಣಾ ಕಾಯ್ದೆ, 2005 ರ ನಿಬಂಧನೆಗಳ ಅಡಿ ಬಾಬಾ ರಾಮದೇವ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. “ಎಂದು ಅವರು ಹೇಳಿದರು.
ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಈ ಹಿಂದೆ ದೂರು ನೀಡಿದ ವೈದ್ಯರಲ್ಲಿ ಆಸ್ಪತ್ರೆ ಮಂಡಳಿ ಐಎಂಎ (ಸಿಜಿ) ಅಧ್ಯಕ್ಷ ಡಾ.ರಾಕೇಶ್ ಗುಪ್ತಾ, ಐಎಂಎ ರಾಯ್ಪುರ ಅಧ್ಯಕ್ಷ ಮತ್ತು ವಿಕಾಸ್ ಅಗ್ರವಾಲ್ ಸೇರಿದ್ದಾರೆ. ದೂರಿನ ಪ್ರಕಾರ, ಕಳೆದ ಒಂದು ವರ್ಷದಿಂದ, ರಾಮದೇವ್ ಅವರು ವೈದ್ಯಕೀಯ ಭ್ರಾತೃತ್ವ, ಭಾರತ ಸರ್ಕಾರ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮತ್ತು ಇತರ ಮುಂಚೂಣಿ ಸಂಸ್ಥೆಗಳು ಕೊರೊನಾ ವೈರಸ್ ಸೋಂಕಿನ ಚಿಕಿತ್ಸೆಯಲ್ಲಿ ಬಳಸುವ ಔಷಧಿಗಳ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಮಾಹಿತಿ ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಸೋಷಿಯಲ್ ಮೀಡಿಯಾದಲ್ಲಿ ಅವರ ಹಲವಾರು ವೀಡಿಯೊಗಳಿವೆ, ಅದರಲ್ಲಿ ಅವರು ಇಂತಹ ದಾರಿತಪ್ಪಿಸುವ ಟೀಕೆಗಳನ್ನು ಮಾಡಿದ್ದಾರೆ ಎಂದು ಅದು ಹೇಳಿದೆ. ವೈದ್ಯರು, ಅರೆವೈದ್ಯಕೀಯ ಸಿಬ್ಬಂದಿ ಮತ್ತು ಸರ್ಕಾರಿ ಮತ್ತು ಆಡಳಿತದ ಎಲ್ಲಾ ಶಾಖೆಗಳು ಒಟ್ಟಾಗಿ ಕೋವಿಡ್‌-19 ರೊಂದಿಗೆ ಹೋರಾಡುತ್ತಿರುವ ಸಮಯದಲ್ಲಿ, ರಾಮದೇವ್ ಅವರು ಸ್ಥಾಪಿತ ಮತ್ತು ಅನುಮೋದಿತ ಚಿಕಿತ್ಸಾ ವಿಧಾನಗಳ ಬಗ್ಗೆ ಜನರನ್ನು ದಾರಿತಪ್ಪಿಸುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಪ್ರಮುಖ ಸುದ್ದಿ :-   ಆಪರೇಷನ್ ಸಿಂಧೂರ : ಬ್ರಹ್ಮೋಸ್ ಕ್ಷಿಪಣಿ ಬಳಸಿ ಪಾಕಿಸ್ತಾನದ 11 ವಾಯುನೆಲೆಗಳನ್ನು ನಾಶಮಾಡಿದ ಭಾರತ; ಪಟ್ಟಿ ಇಲ್ಲಿದೆ...

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement