ಕುಮಟಾ ಸರ್ಕಾರಿ ಆಸ್ಪತ್ರೆ ಡಯಾಲಿಸಿಸ್ ಕೇಂದ್ರಕ್ಕೆ ಮಾಜಿ ಶಾಸಕಿ ಶಾರದಾ ಶೆಟ್ಟಿ 50 ಸಾವಿರ ರೂ.ದೇಣಿಗೆ 

ಕುಮಟಾ :ದಿ.ಶಾಸಕ ಮೋಹನ ಶೆಟ್ಟಿಯವರ ಜನ್ಮ ದಿನದ ಪ್ರಯುಕ್ತ ದಿ. ಮೋಹನ ಕೆ. ಶೆಟ್ಟಿ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಮಾಜಿ ಶಾಸಕಿ ಶಾರದ ಶೆಟ್ಟಿ ಕುಮಟಾದ ಸರಕಾರಿ ಆಸ್ಪತ್ರೆಯ ಡಯಾಲಿಸಿಸ್ ಕೇಂದ್ರಕ್ಕೆ 50 ಸಾವಿರ ರೂ.ಗಳ ದೇಣಿಗೆ ನೀಡಿದ್ದಾರೆ.
ಆಸ್ಪತ್ರೆಯಲ್ಲಿರುವ ಒಳ ರೋಗಿಗಳು ಮತ್ತು ಕೋವಿಡ್ ಸೋಂಕಿತರಿಗೆ ಹಣ್ಣು ಮತ್ತು ಆಹಾರದ ಕಿಟ್ ವಿತರಿಸಿದರು.   ಈ ಸಂದರ್ಭದಲ್ಲಿ ಮಾತನಾಡಿದ ಶಾರದಾ ಶೆಟ್ಟಿ, ತಾಲೂಕಿನ ಜನರ ಸಮಸ್ಯೆ ಅರಿತು ದಿ. ಮೋಹನ್ ಶೆಟ್ಟಿ ರು ಸರಕಾರಿ  ಆಸ್ಪತ್ರೆಯಲ್ಲಿ ಡಯಾಲಿಸಿಸ್ ಕೇಂದ್ರವನ್ನು ಸರಕಾರದ ವತಿಯಿಂದ ಒದಗಿಸಿ ಜನರ ಪ್ರೀತಿಗೆ ಪಾತ್ರವಾಗಿದ್ದರು. ಇಂದು ಅವುಗಳಲ್ಲಿ ಕೆಲವುಗಳ ಉಪಕರಣ ಹಾಳಾಗಿದ್ದು ಜನರಿಗೆ ತೊಂದರೆಯಾಗುತ್ತಿರುವದನ್ನು ಮನಗಂಡು 50 ಸಾವಿರ ರೂ.ಗಳನ್ನು ನೀಡಿರುವದಾಗಿ ತಿಳಿಸಿದರು.
ಜೀವದ ಹಂಗು ತೊರೆದು ಕೆಲಸ ಮಾಡುತ್ತಿರುವ ಕೋವಿಡ್ ವಾರಿಯರ್ಸ್ ಗಳಾದ ವೈದ್ಯರು ಸಿಬ್ಬಂದಿಗೆ  ಧನ್ಯವಾದ ಸಲ್ಲಿಸಿದರು.
ಕಾಂಗ್ಗ್ರೆಸ್‌ ಮುಖಂಡರಾದ ರವಿ ಕುಮಾರ ಶೆಟ್ಟಿ. ವಿ.ಎಲ್. ನಾಯ್ಕ್, ಸುರೇಖಾ ವಾರೇಕರ್, ಮುಜಾಫರ್ ಸಾಬ್ ಮತ್ತಿತರರಿದ್ದರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement