ಜೂನ್​ 21ರಿಂದ ಕೋವಿಡ್‌ ವ್ಯಾಕ್ಸಿನೇಶನ್​​​ ಮೇಳ: ಸಚಿವ ಡಾ. ಸುಧಾಕರ್

ಬೆಂಗಳೂರು: ಜೂನ್​ 21ರಂದು ಕೋವಿಡ್‌ ವ್ಯಾಕ್ಸಿನೇಶನ್​ ಮೇಳ ಆರಂಭಿಸಲಾಗುವುದು. 18ರಿಂದ 45ವರ್ಷದವರಿಗೆ ವ್ಯಾಕ್ಸಿನ್​ ಹಾಕುವ ಗುರಿಯಿದೆ. ಸೋಮವಾರ ಅಂದಾಜು 5-7 ಲಕ್ಷ ಜನರಿಗೆ ಲಸಿಕೆ ನೀಡುವ ಗುರಿ ಹೊಂದಿದ್ದೇವೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ ಹೇಳಿದರು.
ಕೋವಿಡ್ ಸ್ಥಿತಿಗತಿ ಹಾಗೂ ನಿಯಂತ್ರಣ ಕ್ರಮಗಳ ಕುರಿತು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಲಸಿಕೆ ಎರಡು ಡೋಸ್ ಪಡೆದವರಿಗೆ ಹೆಚ್ಚಿನ ಸಮಸ್ಯೆ ಇರುವುದಿಲ್ಲ. ಕೊರೊನಾದ ಯಾವುದೇ ರೂಪಾಂತರಿ ವೈರಾಣುಯೂ ಲಸಿಕೆ ಪಡೆದವರಿಗೆ ಹೆಚ್ಚು ಸಮಸ್ಯೆ ಮಾಡಿಲ್ಲ ಎಂದು ತಿಳಿಸಿದರು.
ಶೇ.5 ಕ್ಕಿಂತ ಕಡಿಮೆ ಕೋವಿಡ್‌ ಸಕಾರಾತ್ಮಕ ದರ ಇರುವ 13 ಜಿಲ್ಲೆಗಳಿವೆ. ಮೈಸೂರು ಜಿಲ್ಲೆಯಲ್ಲಿ ಮಾತ್ರ ಶೇ. 10 ಕ್ಕಿಂತ ಹೆಚ್ಚು ಕೋವಿಡ್‌ ಸಕಾರಾತ್ಮಕ ದರವಿದೆ. ಕೊರೊನಾ ಪ್ರಕರಣ ಹೆಚ್ಚಿರುವ ಜಿಲ್ಲೆಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಜೊತೆ ಚರ್ಚಿಸುತ್ತೇವೆ. ತಜ್ಞರು ಈ ಬಗ್ಗೆ ಸಲಹೆ ನೀಡಿದ್ದಾರೆ, ಅದರಂತೆ ಚರ್ಚಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
3ನೇ ಅಲೆ ನಿಯಂತ್ರಣಕ್ಕೆ ನಾವು ಎಲ್ಲ ರೀತಿಯಲ್ಲಿ ಸಿದ್ಧತೆ ಮಾಡಿಕೊಂಡಿದ್ದೇವೆ. 3ನೇ ಅಲೆ ನಿಂಯತ್ರಣಕ್ಕೆ ಸಿದ್ಧತೆ ಬಗ್ಗೆ ತಜ್ಞರ ಸಮಿತಿ ಅಧ್ಯಕ್ಷ ದೇವಿಪ್ರಸಾದ್​ ಶೆಟ್ಟಿ ವರದಿ ನೀಡಿದ್ದಾರೆ. ವರದಿ ಪರಿಶೀಲಿಸಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಜೂನ್​​ 21ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಇದೆ. ಉತ್ತಮ ಆರೋಗ್ಯ ಇಟ್ಟುಕೊಳ್ಳಲು ಯೋಗ ಸಹಕಾರಿ. ಯೋಗ ಮಾಡುವವರಿಗೆ ಕೊರೊನಾ ಸೋಂಕು ಹೆಚ್ಚಾಗಿ ತಗುಲಲಿಲ್ಲ. ಯೋಗ ದಿನಾಚರಣೆ ದಿನ ಬಹಿರಂಗವಾಗಿ ಹಾಗೂ ಗುಂಪು ಸೇರಿ ಯೋಗವನ್ನು ಮಾಡಬೇಡಿ. ಯೋಗ ದಿನಾಚರಣೆ ದಿನ ಮುಖ್ಯಮಂತ್ರಿ ಸಹ ಯೋಗ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.
ನಾನು ಎಲ್ಲರಿಗೂ ಮನೆಯಲ್ಲೇ ಯೋಗ ಮಾಡಲು ಮನವಿ ಮಾಡುತ್ತೇವೆ. ದಯವಿಟ್ಟು ಎಲ್ಲರೂ ಮನೆಗಳಲ್ಲೇ ಯೋಗ ಮಾಡಿ ಯೋಗ ದಿನಾಚರಣೆಗೆ ಚಾಲನೆ ನೀಡಿ. ಆಯುಷ್ ಇಲಾಖೆಯಿಂದ ಯೋಗ ದಿನಾಚರಣೆಗೆ ಚಾಲನೆ ದೊರೆಯುತ್ತೆ. ಯೋಗಗುರುಗಳಿಂದ ಯೋಗಾಭ್ಯಾಸ ಮಾಡಿಸಿ ದೃಶ್ಯಗಳನ್ನು ಪ್ರಸಾರ ಮಾಡಲಾಗುವುದು. ಎಲ್ಲ ವಿದ್ಯಾರ್ಥಿಗಳು ತಮ್ಮ ಮನೆಯಲ್ಲಿ ಯೋಗ ಮಾಡಬೇಕು ಎಂದು ಮನವಿ ಮಾಡಿದರು.

ಪ್ರಮುಖ ಸುದ್ದಿ :-   ಸಚಿವ ದಿನೇಶ ಗುಂಡೂರಾವ್ ಮನೆಯಲ್ಲಿ ಅರ್ಧ ಪಾಕಿಸ್ತಾನ' ಹೇಳಿಕೆ : ಬಿಜೆಪಿ ಶಾಸಕ ಯತ್ನಾಳ ವಿರುದ್ಧದ ತನಿಖೆಗೆ ಹೈಕೋರ್ಟ್ ತಡೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement