ದೆಹಲಿ ಮೆಟ್ರೊದಲ್ಲಿ ಮಂಗನ ಸವಾರಿ…! ಯಾರಿಗೂ ಹಾನಿಮಾಡದ ಕೋತಿ..ವಿಡಿಯೋ ವೈರಲ್‌

ನವದೆಹಲಿ: ದೆಹಲಿ ಮೆಟ್ರೊ ರೈಲಿನ ಬೋಗಿಯೊಳಗೆ ಕೋತಿಯೊಂದು ಶನಿವಾರ ಪ್ರಯಾಣ ಮಾಡಿ ಹೊರಬಂದ ನಂತರ ಸಾಮಾಜಿಕ ಮಾಧ್ಯಮದಲ್ಲಿ ಇದರ ವಿಡಿಯೋ ವೈರಲ್ ಆಗಿದೆ.
ಪ್ರಯಾಣಿಕರ ಪಕ್ಕದ ಸೀಟಿನಲ್ಲಿ ಕುಳಿತುಕೊಂಡ ಕೋತಿ ಮೊದಲು ಗಾಡಿಯೊಳಗೆ ತಿರುಗಾಡುವುದನ್ನು ವಿಡಿಯೋ ತೋರಿಸುತ್ತದೆ.
ದೆಹಲಿ ಮೆಟ್ರೊದ ನೀಲಿ ಮಾರ್ಗದ ‘ಯಮುನಾ ಬ್ಯಾಂಕ್ ಸ್ಟೇಷನ್’ ಎಂದು ಪ್ರಯಾಣಿಕರೊಬ್ಬರು ಹೇಳಿದ್ದು ವಿಡಿಯೋದಲ್ಲಿ ಕೇಳುತ್ತದೆ.

ನಂತರ ಅವರು ಹೀಗೆ ಹೇಳುತ್ತಾರೆ: “ಬಂದರ್ ಕೊ ಭಿ ಮಾಸ್ಕ್ ಪೆಹ್ನಾ ದೊ (ಕೋತಿಗೆ ಮುಖವಾಡ ನೀಡಿ)”
ಕೋತಿ ಪ್ರಯಾಣಿಕರ ಪಕ್ಕದಲ್ಲಿ ಸದ್ದಿಲ್ಲದೆ ಕುಳಿತಿರುವುದು ಕಂಡುಬರುತ್ತದೆ. ಕೆಲವು ಸೆಕೆಂಡುಗಳ ನಂತರ ಅದು ಆಸನದ ಮೇಲೆ ನಿಂತು ಕಿಟಕಿಯಿಂದ ಹೊರಗೆ ನೋಡುತ್ತದೆ.
ದೆಹಲಿ ಮೆಟ್ರೋ ರೈಲಿನಲ್ಲಿ ಈ ಮಂಗ ಭರ್ಜರಿ ಸವಾರಿ ಮಾಡಿದೆ, ಸಂಜೆ 4: 45 ರ ಸುಮಾರಿಗೆ ರೈಲು ಯಮುನಾ ಬ್ಯಾಂಕಿನಿಂದ ಐಪಿಗೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ದೆಹಲಿ ಮೆಟ್ರೋ ರೈಲು ನಿಗಮ (ಡಿಎಂಆರ್‌ಸಿ) ಈ ಘಟನೆಯನ್ನು ತಕ್ಷಣ ಖಚಿತಪಡಿಸಲು ಸಾಧ್ಯವಾಗಲಿಲ್ಲ . ಆದರೆ ಟ್ವಿಟರ್‌ನಲ್ಲಿ ಹಂಚಿಕೊಂಡ ವೀಡಿಯೊವೊಂದಕ್ಕೆ ಪ್ರತಿಕ್ರಿಯೆಯಾಗಿ, ದೆಹಲಿ ಮೆಟ್ರೋ ಅಧಿಕಾರಿಗಳು ಬೋಗಿಯ ವಿವರಗಳನ್ನು ನೀಡುವಂತೆ ಕೇಳಿದರು. ಕೋತಿ ಯಾರಿಗೂ ಯಾವುದೇ ಹಾನಿ ಮಾಡಿಲ್ಲ ಮತ್ತು ಡಿಎಂಆರ್‌ಸಿಯ ಗಮನಕ್ಕೆ ತರುವ ಹೊತ್ತಿಗೆ ಅದೇ ರೈಲಿನಿಂದ ಹೊರ ಹೋಯಿತು ಎಂದು ವರದಿಗಳು ತಿಳಿಸಿವೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement