ಎನ್ಇಕೆಆರ್ ಟಿಸಿ ಮಾಸಿಕ ಬಸ್ ಪಾಸ್ ಅವಧಿ ವಿಸ್ತರಣೆ

ಕಲಬುರಗಿ: ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನೌಕರರು ಕಳೆದ‌ ಏಪ್ರಿಲ್ 7 ರಿಂದ ಕೈಗೊಂಡ ಅನಿರ್ಧಿಷ್ಟಾವಧಿ ಮುಷ್ಕರದ ಅವಧಿ ಹಾಗೂ ಏಪ್ರಿಲ್ 28 ರಿಂದ ಘೋಷಿಸಲಾದ ಕೋವಿಡ್ ಲಾಕ್‍ ಡೌನ್ ಪ್ರಾರಂಭದ ಅವಧಿಯಲ್ಲಿ ಚಾಲ್ತಿಯಲ್ಲಿದ್ದ ಮಾಸಿಕ ಬಸ್ ಪಾಸುಗಳು ಲಾಕ್ಡೌನ್ ನಂತರದ ದಿನಾಂಕಗಳಂದು ಅವಧಿ ಮುಕ್ತಾಯಗೊಂಡ ಹಂತವಾರು ಮಾಸಿಕ ಪಾಸುಗಳ ಮಾನ್ಯತಾ ಅವಧಿಯನ್ನು ವಿಸ್ತರಿಸಲಾಗಿದೆ ಎಂದು ಸಂಸ್ಥೆಯ ವ್ಯವಾಸ್ಥಾಪಕ ನಿರ್ದೇಶಕ ಎಂ.ಖೂರ್ಮರಾವ್ ತಿಳಿಸಿದ್ದಾರೆ.
ಮಾಸಿಕ ಬಸ್ ಪಾಸ್ ಚಾಲ್ತಿಯಲ್ಲಿರುವ ಉಳಿದ ಅವಧಿಗೆ ಅಥವಾ ಗರಿಷ್ಟ 18 ದಿನಗಳ ವರೆಗೆ ಅಂದರೆ ಜುಲೈ 8ರ ವರೆಗೆ ಚಾಲ್ತಿಯಲ್ಲಿರುತ್ತದೆ ಎಂದು ಅವರು ತಿಳಿಸಿದ್ದಾರೆ.
ಕಳೆದ ಏಪ್ರಿಲ್ 8 ರಿಂದ 27ರ ಅವಧಿಯಲ್ಲಿ ಮಾಸಿಕ ಬಸ್ ಪಾಸುಗಳನ್ನು ಪಡೆದ ಪ್ರಯಾಣಿಕರಿಗೆ ದಿನಾಂಕಗಳನ್ನು ಸೂಕ್ತವಾಗಿ ಪರಿಶೀಲಿಸಿ ಅಷ್ಟು ದಿನಗಳಿಗೆ ಅನುಗುಣವಾಗಿ ವಿಸ್ತರಿಸಲು ಆದೇಶಿಸಲಾಗಿದ್ದು, ಪ್ರಯಾಣಿಕರು ಇದರ ಸೌಲಭ್ಯ ಪಡೆಯಬೇಕು ಎಂದು ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement