ಸತತ ಎರಡನೇ ವರ್ಷ ಅಮರನಾಥ ಯಾತ್ರೆ ರದ್ದು

ಜಮ್ಮು: ದೇಶದಲ್ಲಿ ಕೊರೊನಾ ಸೋಂಕು ಉಲ್ಬಣದ ಹಿನ್ನೆಲೆಯಲ್ಲಿ ಸತತ ಎರಡನೇ ವರ್ಷ ಪವಿತ್ರ ಅಮರನಾಥ ಯಾತ್ರೆ ಯನ್ನು ಜಮ್ಮು-ಕಾಶ್ಮೀರ ಆಡಳಿತ ರದ್ದು ಮಾಡಿದೆ. ಆನ್ ಲೈನ್ ಮೂಲಕ ದರ್ಶನಕ್ಕೆ ಮಾತ್ರ ಜಮ್ಮು-ಕಾಶ್ಮೀರದ ಅಮರನಾಥ ಯಾತ್ರಾ ಮಂಡಳಿ ಅನುವು ಮಾಡಿಕೊಟ್ಟಿದೆ.
ದೇಶ, ವಿದೇಶದ ಭಕ್ತಾದಿಗಳು ಆನ್‌ಲೈನ್ ಮೂಲಕ ಅಮರನಾಥ ದರ್ಶನವನ್ನು ಆನ್ ಲೈನ್ ಮೂಲಕ ಪಡೆಯಬಹುದು. ಇದಕ್ಕಾಗಿ ಎಲ್ಲ ರೀತಿಯ ಅವಕಾಶ ಮಾಡಿಕೊಡಲಾಗಿದೆ ಅಮರನಾಥ ಯಾತ್ರಾ ಮಂಡಳಿ ತಿಳಿಸಿದೆ.
ಯಾತ್ರೆ ರದ್ದುಗೊಂಡಿದ್ದರೂ ಧಾರ್ಮಿಕ ವಿಧಿವಿಧಾನಗಳು ನಡೆಯಲಿದೆ ಎಂದು ಜಮ್ಮು-ಕಾಶ್ಮೀರ ಸರ್ಕಾರ ತಿಳಿಸಿದೆ.
ಈ ಕುರಿತು ಮಾಹಿತಿ ನೀಡಿರುವ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಲೆಫ್ಟಿನೆಂಟ್ ಗೌರ್ನರ್ ಮನೋಜ್ ಸಿನ್ಹಾ ಅವರು, ಆನ್ ಲೈನ್ ನಲ್ಲಿ ದರ್ಶನಕ್ಕೆ ಎಲ್ಲ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಜೂನ್ 28 ರಿಂದ ಆಗಸ್ಟ್ 22 ರ ವರೆಗೆ ಅಮರನಾಥ ಯಾತ್ರೆ ನಿಗದಿಯಾಗಿತ್ತು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement