ಕೇಂದ್ರದ ಸರ್ವಪಕ್ಷ ಸಭೆಯಲ್ಲಿ ಭಾಗಿಯಾಗಲು ಗುಪ್ಕಾರ್ ಮೈತ್ರಿಕೂಟ ನಿರ್ಧಾರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಜೂ.24 ರಂದು ಕರೆದಿರುವ ಜಮ್ಮು-ಕಾಶ್ಮೀರ ಸರ್ವಪಕ್ಷಗಳ ಸಭೆಯಲ್ಲಿ ಭಾಗಿಯಾಗಲು ಜಮ್ಮು-ಕಾಶ್ಮೀರದ ಗುಪ್ಕಾರ್ ಮೈತ್ರಿಕೂಟ ನಿರ್ಧರಿಸಿದೆ.
ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಆರ್ಟಿಕಲ್ 370 ಮರುಸ್ಥಾಪನೆಗೆ ಹಾಗೂ ಕೈದಿಗಳನ್ನು ಬಿಡುಗಡೆ ಮಾಡುವುದಕ್ಕೆ ಆರೂ ಪಕ್ಷಗಳ ಮೈತ್ರಿಕೂಟ ಗುಪ್ಕಾರ್‌ ಸಭೆಯಲ್ಲಿ ಒತ್ತಾಯಿಸಲಿದೆ.
ನವದೆಹಲಿಯಲ್ಲಿ ಜೂ.24 ರಂದು ನಡೆಯಲಿರುವ ಸಭೆಯಲ್ಲಿ ಗುಪ್ಕಾರ್ ಮೈತ್ರಿಕೂಟದ ಎಲ್ಲಾ ಪಕ್ಷಗಳೂ ಭಾಗಿಯಾಗಲು ನಿರ್ಧರಿಸಿವೆ ಎಂದು ಗುಪ್ಕಾರ್ ಮೈತ್ರಿಕೂಟದ ಅಧ್ಯಕ್ಷ ಹಾಗೂ ಎನ್ ಸಿಯ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ತಿಳಿಸಿದ್ದಾರೆ.
ಗುಪ್ಕಾರ್ ಮೈತ್ರಿಯ ನಾಯಕರಾದ ಫಾರೂಕ್ ಅಬ್ದುಲ್ಲಾ, ಅವರ ಪುತ್ರ ಓಮರ್ ಅಬ್ದುಲ್ಲಾ, ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಹಾಗೂ ಸಿಪಿಎಂ ನಾಯಕ ಮೊಹಮ್ಮದ್ ಯೂಸೂಫ್ ತಾರಿಗಮಿ ಸೇರಿದಂತೆ 14 ಮಂದಿ ಜಮ್ಮು-ಕಾಶ್ಮೀರದ ನಾಯಕರಿಗೆ ಜೂ.24 ರಂದು ನಡೆಯುವ ಸಭೆಯಲ್ಲಿ ಭಾಗವಹಿಸಲು ಆಹ್ವಾನಿಸಲಾಗಿದೆ. “ಕೇಂದ್ರ ಸರ್ಕಾರ ಸಭೆಯ ಅಜೆಂಡಾ ಸ್ಪಷ್ಟಪಡಿಸಿಲ್ಲ ಎಂದು ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ
ಗುಪ್ಕಾರ್ ಮೈತ್ರಿಕೂಟದ ವಕ್ತಾರ ಸಿಪಿಐ(ಎಂ) ನ ನಾಯಕ ಮೊಹಮ್ಮದ್ ಯೂಸೂಫ್ ತಾರಿಗಮಿ ಈ ಬಗ್ಗೆ ಪ್ರತಿಕ್ರಿಯೆ ನೀಡಿ ತಮ್ಮ ನಿಲುವು ಬೇಡಿಕೆಗಳನ್ನು ಪ್ರಧಾನಿ ಎದುರು ಮಂಡಿಸುವುದಾಗಿ ಜಮ್ಮು-ಕಾಶ್ಮೀರ ಹಾಗೂ ಲಡಾಖ್ ನ ಜನತೆಗೆ ಭರವಸೆ ನೀಡುತ್ತೇವೆ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಬಿಹಾರದಲ್ಲಿ ಮತಪಟ್ಟಿ ಪರಿಷ್ಕರಣೆ ; ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ ಆರ್‌ಜೆಡಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement