85 ದೇಶಗಳಲ್ಲಿ ಡೆಲ್ಟಾ ವೈರಸ್ ಸೋಂಕು ಪತ್ತೆ, ಇದು ಪ್ರಬಲ ವಂಶಾವಳಿಯಾಗುವ ಆತಂಕ:ಡಬ್ಲ್ಯೂಎಚ್‌ಒ

ಜಿನೆವಾ: ಭಾರತದಲ್ಲಿ 2ನೇ ಅಲೆಯ ಆರ್ಭಟಕ್ಕೆ ಕಾರಣವಾಗಿದ್ದ ಕೊರೊನಾ ವೈರಸ್ ಡೆಲ್ಟಾ ರೂಪಾಂತರಿ ಇದೀಗ ಜಗತ್ತಿನ 85 ದೇಶಗಳಲ್ಲಿ ವ್ಯಾಪಿಸಿದ್ದು, ಪ್ರಬಲ ವಂಶಾವಳಿಯಾಗುವ ಆತಂಕವಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ.
ಡೆಲ್ಟಾ ರೂಪಾಂತರಿ ಅತ್ಯಂತ ಅಪಾಯಕಾರಿ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದು, ಕೊರೊನಾ ಇತರ ವೈರಾಣುಗಿಂತ ಅತಿವೇಗವಾಗಿ ಇದು ಪ್ರಸರಣ ಹೊಂದಲಿದೆ. ಹೀಗಾಗಿ ಎಚ್ಚರಿಕೆ ವಹಿಸಬೇಕಿದ್ದು, ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮತ್ತು ಉದಾಸೀನ ಮಾಡಬಾರದು ಎಂದು ವಿಶ್ವ ಆರೋಗ್ಯಸಂಸ್ಥೆ ಜೂನ್ 22 ರಂದು ಬಿಡುಗಡೆ ಮಾಡಿದ ಕೋವಿಡ್-19 ವೀಕ್ಲಿ ಎಪಿಡೆಮಿಯೋಲಾಜಿಕಲ್ ಮಾಹಿತಿಯಲ್ಲಿ ಹೇಳಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಮೈಕ್ ರಿಹಾನ್ ಮಾತನಾಡಿ, ‘ವಿಶ್ವದಲ್ಲಿ ಇದುವರೆಗೂ ಕಾಣಿಸಿಕೊಂಡಿರುವ ಕೊರೋನಾ ಸೋಂಕಿನ ವಿವಿಧ ಮಾದರಿಗಳಲ್ಲಿ ಡೆಲ್ಟಾ ಮಾದರಿ ಅತ್ಯಂತ ವೇಗವಾಗಿ ಹರಡುವ ಗುಣಲಕ್ಷಣ ಹೊಂದಿದೆ. ಹೀಗಾಗಿ ಜನರು ತೀವ್ರ ಎಚ್ಚರಿಕೆ ವಹಿಸಬೇಕು. ಡೆಲ್ಟಾ ಮಾದರಿಯ ರೂಪಾಂತರ ಕಾಣಿಸಿಕೊಂಡಿರುವ ದೇಶಗಳು ತಮ್ಮ ದೇಶಗಳಲ್ಲಿ ಸೋಂಕು ಹೆಚ್ಚು ಹರಡದಂತೆ ಜಾಗ್ರತೆ ವಹಿಸಬೇಕು ಎಂದು ಸಲಹೆ ನೀಡಿದ್ದಾರೆ.
ಡೆಲ್ಟಾ ರೂಪಾಂತರ ಸೋಂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾಯುತ್ತಿದ್ದಾರೆ. ಹೀಗಾಗಿ ರಾಜ್ಯಗಳು ಮತ್ತು ಕೇಂದ್ರ ಸರ್ಕಾರಗಳು ಎಚ್ಚರಿಕೆ ವಹಿಸುವ ತುರ್ತು ಅಗತ್ಯವಿದೆ. ಭಾರತ ಸೇರಿದಂತೆ ಜಗತ್ತಿನ 85ಕ್ಕೂ ಅಧಿಕ ದೇಶಗಳಲ್ಲಿ ಡೆಲ್ಟಾ ರೂಪಾಂತರ ಸೋಂಕು ಕಾಣಿಸಿಕೊಂಡಿದ್ದು ಈಗ ಡೆಲ್ಟಾ ಪ್ಲಸ್‌ ರೂಪಾಂತರ ಸಹ ಕಾಣಿಸಿಕೊಳ್ಳುತ್ತಿದೆ. ಎಂದು ಅವರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಶಿಂಧೆ ಬಣದ ಶಿವಸೇನೆ ಸೇರಿದ ಬಾಲಿವುಡ್‌ ನಟ ಗೋವಿಂದ : 14 ವರ್ಷಗಳ ವನವಾಸದ ನಂತರ ರಾಜಕೀಯಕ್ಕೆ

170 ದೇಶಗಳಲ್ಲಿ ಕೊರೊನಾ ವೈರಸ್‌ ರೂಪಾಂತರಿಗಳ ಉಲ್ಬಣ
ಕೊರೋನಾ ವೈರಸ್ ನಾಲ್ಕು ರೂಪಾಂತರಿಗಳ ಸೋಂಕು ಜಗತ್ತಿನ 170 ದೇಶಗಳಲ್ಲಿ ಹಾವಳಿ ಮುಂದುವರೆಸಿದ್ದು, 119 ದೇಶಗಳಲ್ಲಿ ಬೀಟಾ, 71 ದೇಶಗಳಲ್ಲಿ ಗಾಮಾ ಮತ್ತು 85 ದೇಶಗಳಲ್ಲಿ ಡೆಲ್ಟಾ ವರದಿಯಾಗಿದೆ. ಜಾಗತಿಕವಾಗಿ 85 ದೇಶಗಳಲ್ಲಿ ಈಗ ವರದಿಯಾಗಿರುವ ಡೆಲ್ಟಾ ರೂಪಾಂತರ, ಕಳೆದ 2 ವಾರಗಳ ಅವಧಿಯಲ್ಲಿ ಹೊಸದಾಗಿ 11 ದೇಶಗಳಲ್ಲಿ ವರದಿಯಾಗಿದೆ. ಹೀಗಾಗಿ ಈ ರೂಪಾಂತರವನ್ನು ವಿಶ್ವ ಆರೋಗ್ಯ ಸಂಸ್ಥೆ ‘ವೇರಿಯಂಟ್ಸ್ ಆಫ್ ಕನ್ಸರ್ನ್’ (ಕಳವಳಕಾರಿ) ಎಂದು ಗುರುತಿಸಿದೆ.

ಡೆಲ್ಟಾ ಪ್ರಬಲ ವಂಶಾವಳಿಯಾಗುವ ಆತಂಕ
ಡೆಲ್ಟಾ ರೂಪಾಂತರವು ಆಲ್ಫಾ ರೂಪಾಂತರಕ್ಕಿಂತ ಗಮನಾರ್ಹವಾಗಿ ಹೆಚ್ಚು ಹರಡಬಲ್ಲದು ಮತ್ತು ಪ್ರಸ್ತುತ ಪ್ರವೃತ್ತಿಗಳು ಮುಂದುವರಿದರೆ ಪ್ರಬಲ ವಂಶಾವಳಿಯಾಗುವ ನಿರೀಕ್ಷೆಯಿದೆ. ಜೂನ್ 8 ರಂದು ಕೊನೆಯ ವರದಿಯಲ್ಲಿ, ಡೆಲ್ಟಾ ರೂಪಾಂತರದ ಫಿನೋಟೈಪಿಕ್ ಗುಣಲಕ್ಷಣಗಳ ಬಗ್ಗೆ ಹೊಸ ಪುರಾವೆಗಳನ್ನು ಪ್ರಕಟಿಸಲಾಗಿದೆ. ಸಿಂಗಾಪುರದ ಅಧ್ಯಯನವು ಡೆಲ್ಟಾ ರೂಪಾಂತರದ ಸೋಂಕು ಹೆಚ್ಚಿನ ಪ್ರಮಾಣದ ಆಕ್ಸಿಜನ್ ಅವಶ್ಯಕತೆ, ತೀವ್ರ ನಿಗಾ ಘಟಕ (ಐಸಿಯು) ಪ್ರವೇಶ ಅಥವಾ ಸಾವುಗಳ ಕುರಿತು ವರದಿ ಮಾಡಿದೆ.
ಜಪಾನ್‌ನಲ್ಲಿನ ಒಂದು ಅಧ್ಯಯನವು ಇತರೆ ರೂಪಾಂತರಗಳಿಗಿಂತ ಡೆಲ್ಟಾ ರೂಪಾಂತರದ ಸಂತಾನೋತ್ಪತ್ತಿ ಪ್ರಮಾಣ ಹೆಚ್ಚು ಎಂದು ಹೇಳಿತ್ತು. ಡಿಸೆಂಬರ್ 2020 ರ ಮೊದಲು ಜಪಾನ್‌ನಲ್ಲಿ ಚಲಾವಣೆಯಲ್ಲಿರುವ ರೂಪಾಂತರಗಳೊಂದಿಗೆ ಹೋಲಿಸಿದಾಗ, ಆಲ್ಫಾ ರೂಪಾಂತರಿ ಸಂತಾನೋತ್ಪತ್ತಿ ಪ್ರಮಾಣ 1.56ರಷ್ಟಿದ್ದರೆ. ಡೆಲ್ಟಾದಲ್ಲಿ 1.78ರಷ್ಟಿದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.

ಪ್ರಮುಖ ಸುದ್ದಿ :-   ಎಟಿಎಂಗೆ ಹಣ ತುಂಬಿಸಲು ಬಂದಿದ್ದ ವಾಹನದಿಂದ 50 ಲಕ್ಷ ರೂ. ದರೋಡೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement