ಮದುವೆಗೆ ಬಂದವರಿಗೆ ಮಟನ್ ಊಟ ಇಲ್ಲದ್ದಕ್ಕೆ ವಿವಾಹ ಮಂಟಪದಿಂದಲೇ ಹೊರನಡೆದ ವರ..! ಮತ್ತೊಬ್ಬಳ ಜೊತೆ ವಿವಾಹ..!!

ಜಜ್ಪುರ: ಬುಧವಾರ ನಡೆದ ಮದುವೆ ಕಾರ್ಯಕ್ರಮದಲ್ಲಿ ಮಟನ್ ಮಟನ್‌ ತಿನಿಸು ನೀಡಲು ಮದುಮಗಳ ಕುಟುಂಬ ವಿಫಲವಾದ ಕಾರಣ ಮದುಮಗನೊಬ್ಬ ವಧುವನ್ನು ಬಿಟ್ಟು ಮದುವೆ ಮಂಟಪದಿಂದ ಹೊರ ನಡೆದ ಘಟನೆ ವರದಿಯಾಗಿದೆ.
ರಮಾಕಾಂತ ಪತ್ರಾ ಎಂದು ಗುರುತಿಸಲ್ಪಟ್ಟ 27 ವರ್ಷದ ವರ, ನಂತರ ಮನೆಗೆ ಹಿಂದಿರುಗುವ ಮೊದಲು ಅದೇ ಪ್ರದೇಶದ ಇನ್ನೊಬ್ಬ ಮಹಿಳೆಯನ್ನು ಮದುವೆಯಾದ ವಿಲಕ್ಷಣ ಘಟನೆಯೂ ನಡೆದಿದೆ.
ನೆರೆಯ ಕಿಯೋಂಝಾರ್ ಜಿಲ್ಲೆಯ ರೆಬನಪಲಸ್ಪಾಲ್ ನಿವಾಸಿ ಮದುವೆ ಗಂಡು ಪತ್ರಾ ಬುಧವಾರ ಮಧ್ಯಾಹ್ನ ಮದುವೆ ಮೆರವಣಿಗೆಯಲ್ಲಿ ಸುಕಿಂದಾ ಬ್ಲಾಕ್‌ನ ಬಂಧಗಾಂವ್ ಗ್ರಾಮ ತಲುಪಿದ. ಸ್ಥಳ ತಲುಪಿದಾಗ ದಿಬ್ಬಣವನ್ನು ವಧುವಿನ ಕುಟುಂಬವು ಸ್ವಾಗತಿಸಿತು ಮತ್ತು ಅಗತ್ಯ ಆಚರಣೆಗಳ ನಂತರ, ಊಟಕ್ಕೆ ಸಭಾಂಗಣಕ್ಕೆ ಕರೆದೊಯ್ಯಲಾಯಿತು.
ಆಹಾರವನ್ನು ನೀಡುವ ಮೊದಲು, ವಿವಾಹಕ್ಕೆ ಬಂದ ಕೆಲವರು ಮಟನ್ ಮೇಲೋಗರವನ್ನು ಒತ್ತಾಯಿಸಿದರು. ಆದರೆ ಸಿದ್ಧಪಡಿಸದ ಕಾರಣ, ದಿಬ್ಬಣದೊಂದಿಗೆ ಬಂದುವರು ವಧುವಿನ ಕುಟುಂಬ ಸದಸ್ಯರು ಮತ್ತು ಊಟ ಬಡಿಸುವವರೊಂದಿಗೆ ವಾಗ್ವಾದಕ್ಕೆ ಇಳಿದರು. ಪರಿಸ್ಥಿತಿಯು ವಿಕೋಪಕ್ಕೆ ಹೋಯಿತು.ಮದುವೆ ಪಾರ್ಟಿಯಲ್ಲಿ ಮಟನ್ ಬೇಯಿಸಲಾಗಿಲ್ಲ ಎಂದು ಪತ್ರಾಗೆ ತಿಳಿದಾಗ, ಅವರು ಮದುವೆಯನ್ನೇ ನಿಲ್ಲಿಸಿದರು…!
ವಧುವಿನ ಕುಟುಂಬ ಸದಸ್ಯರು ಮಧೂಮಗನಿಗೆ ಪರಿಪರಿಯಾಗಿ ಮನವಿ ಮಾಡಿದರೂ ಮನಸ್ಸನ್ನು ಬದಲಾಯಿಸಲಿಲ್ಲ. ವರನು ತನ್ನ ರಕ್ತಸಂಬಂಧಿಗಳ ಜೊತೆಗೆ ಸ್ಥಳವನ್ನು ತೊರೆದಾಗ ವಧುವಿನ ಕರೆಯವರ ಎಲ್ಲ ಪ್ರಯತ್ನಗಳು ವ್ಯರ್ಥವಾಯಿತು. ಪತ್ರಾ ಸುಕಿಂದಾದ ಕುಹಿಕಾ ಪಂಚಾಯತ್‌ನ ಗಾಂಧಪಾಲ ಗ್ರಾಮದಲ್ಲಿರುವ ಸಂಬಂಧಿಕರ ಮನೆಗೆ ಹೋದರು, ಅಲ್ಲಿ ಅವರು ಉಳಿದುಕೊಂಡರು.
ನಂತರ ಅವರು ಕಿಯೋಂ ಝಾರ್‌ಗೆ ಹಿಂದಿರುಗುವ ಮುನ್ನ ಅದೇ ರಾತ್ರಿ ತಮ್ಕಾದಲ್ಲಿ ಫುಲಾಜರಾದ ಇನ್ನೊಬ್ಬ ಮಹಿಳೆಯನ್ನು ಮದುವೆಯಾದರು ಎಂದು ಮೂಲಗಳು ತಿಳಿಸಿವೆ. ಈ ಸಂಬಂಧ ಸ್ಥಳೀಯ ಪೊಲೀಸರಿಗೆ ಯಾವುದೇ ದೂರು ದಾಖಲಾಗಿಲ್ಲ.

ಪ್ರಮುಖ ಸುದ್ದಿ :-   ಸ್ವಾತಿ ಮಲಿವಾಲ್ ಹಲ್ಲೆ ಪ್ರಕರಣ : ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಆಪ್ತ ಸಹಾಯಕನ ಬಂಧನ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement