ನಕಲಿ ಲಸಿಕೆ ಶಿಬಿರ : ನಕಲಿ ಐಎಎಸ್‌ ಅಧಿಕಾರಿ ಸೇರಿ ನಾಲ್ವರ ಬಂಧನ

ಕೋಲ್ಕತ್ತಾ,:ಪಶ್ಚಿಮ ಬಂಗಾಳದಲ್ಲಿ ನಕಲಿ ಲಸಿಕೆ ಶಿಬಿರ ನಡೆಸಿದ್ದ ನಕಲಿ ಐಎಎಸ್ ಅಧಿಕಾರಿ ದೇಬಾಂಜನ್ ದೇಬ್  ಹಾಗೂ ಮೂವರು ಸಹವರ್ತಿಗಳನ್ನು ಕೋಲ್ಕತ್ತಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳಲ್ಲಿ ಇಬ್ಬರು ಕೋಲ್ಕತ್ತಾ ಮುನ್ಸಿಫಲ್ ಕಾಪೆರ್ರೇಷನ್ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮತ್ತೊಬ್ಬ ಆರೋಪಿ ದೇಬ್ ಹಣ ಪಡೆದುನಕಲಿ ಲಸಿಕೆ ಶಿಬಿರಗಳನ್ನು ನಡೆಸುತ್ತಿದ್ದ ಎಂದು ಆರೋಪಿಸಲಾಗಿದೆ. ಸಾಲಟ್‌ ಲೇಕ್‌ ಹಾಗೂ ಬರ್ಸಾತ್ ಗ್ರಾಮದ ಇಬ್ಬರು ಆರೋಪಿಗಳನ್ನು ವಿಚಾರಣೆಗೆ ಕರೆತಂದು ನಂತರ ಆರೋಪ ಸಾಬೀತಾದ ಹಿನ್ನಲೆಯಲ್ಲಿ ಬಂಧಿಸಲಾಗಿದೆ. ತಾಲ್ತಾಲ ಗ್ರಾಮದ ಮತ್ತೊಬ್ಬ ಆರೋಪಿಯನ್ನು ನಕಲಿ ಶಿಬಿರಗಳನ್ನು ಆಯೋಜಿಸಿ ಜನರಿಗೆ ವಂಚಿಸುತ್ತಿದ್ದ ಆರೋಪದ ಮೇಲೆ ಬಂಧಿಸಲಾಗಿದೆ.
ಈ ಮಧ್ಯೆ ನಕಲಿ ಲಸಿಕೆ ಶಿಬಿರ ಆಯೋಜನೆ ಮಾಡಿದ ಆರೋಪಕ್ಕೆ ಗುರಿಯಾಗಿರುವ ನಕಲಿ ಐಎಎಸ್ ಅಧಿಕಾರಿ ದೇಬ್ ವಿರುದ್ಧ ಕಸ್ಬಾ ಪೊಲೀಸ್ ಠಾಣೆಯಲ್ಲಿ ಮತ್ತೆ ಮೂರು ಪ್ರಕರಣಗಳನ್ನು ದಾಖಲಿಸಲಾಗಿದೆ. ಖಾಸಗಿ ಸಂಸ್ಥೆಯೊಂದು ತನ್ನ 172 ಸಿಬ್ಬಂದಿಗೆ ಲಸಿಕೆ ಹಾಕಿಸಲು ದೇಬ್ ಅವರಿಗೆ 1.2 ಲಕ್ಷ ಹಣ ನೀಡಿತ್ತು ಎಂಬ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಗುತ್ತಿಗೆದಾರರೊಬ್ಬರಿಂದ ಕ್ರೀಡಾಂಗಣ ನಿರ್ಮಾಣದ ಟೆಂಡರ್ ಕೊಡಿಸುವುದಾಗಿ 90 ಲಕ್ಷ ಹಣ ಹಾಗೂ ಫಾರ್ಮ ಸಂಸ್ಥೆಯೊಂದಕ್ಕೆ ಟೆಂಡರ್ ಕೊಡಿಸುವ ಅಮೀಷ ನೀಡಿ ಅವರಿಂದ 4 ಲಕ್ಷ ಹಣ ಪಡೆದಿದ್ದರು ಎಂದು ದೇಬ್‌ ವಿರುದ್ಧ ದೂರು ನೀಡಲಾಗಿದೆ.
ದೇಬ್ ಆಯೋಜಿಸಿದ್ದ ನಕಲಿ ಲಸಿಕಾ ಶಿಬಿರದಲ್ಲಿ ಬೆಂಗಾಲಿ ನಟಿ ಹಾಗೂ ಟಿಎಂಸಿ ಸಂಸದೆ ಮಿಮಿ ಚಕ್ರವರ್ತಿ ವ್ಯಾಕ್ಸಿನ್ ಪಡೆದಿದ್ದರು. ವ್ಯಾಕ್ಸಿನ್ ಪಡೆದಿದ್ದ ಅವರಿಗೆ ಎಸ್‍ಎಂಎಸ್ ಬಾರದ ಹಿನ್ನಲೆಯಲ್ಲಿ ಅನುಮಾನಗೊಂಡು ಪೊಲೀಸರಿಗೆ ದೂರು ನೀಡಿದ ನಮತರ ಈ ಪ್ರಕರಣ ಬಯಲಾಗಿತ್ತು.

ಪ್ರಮುಖ ಸುದ್ದಿ :-   ಆಗ್ರಾದಲ್ಲಿ ತಾಜ್ ಮಹಲಿಗೇ ಸ್ಪರ್ಧೆ ಒಡ್ಡುವ ಬಿಳಿ ಅಮೃತಶಿಲೆಯ ಮತ್ತೊಂದು ʼಅದ್ಭುತʼ ನಿರ್ಮಾಣವೇ ಈ ‘ಸೋಮಿ ಬಾಗ್’...

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement